Sunday, September 22, 2024
spot_img
More

    Latest Posts

    ಸಮಾಜದವರ ಸಂಕಷ್ಟಕ್ಕೆ ಮಿಡಿದ ‘ಶ್ರೀವೇಣುಗೋಪಾಲಕೃಷ್ಣ…’

    ಬೆಂಗಳೂರು: ಕೊರೊನಾ ಪಿಡುಗು ಜಗತ್ತನ್ನೇ ಆತಂಕಕ್ಕೆ ತಳ್ಳಿರುವುದರಿಂದ ಜನರು ನಾನಾ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ತನ್ನ ಸದಸ್ಯರಿಗೆ ಸಹಾಯಹಸ್ತ ಚಾಚಿದೆ.

    ಸೊಸೈಟಿಯು ಆರ್ಥಿಕ ಸಂಕಷ್ಟದಲ್ಲಿರುವ ತನ್ನ 22 ಮಂದಿ ಸದಸ್ಯರಿಗೆ 5 ಸಾವಿರದಿಂದ 10 ಸಾವಿರ ರೂಪಾಯಿವರೆಗಿನ ಮೊತ್ತವನ್ನು ಮುಂಗಡ ಸಾಲವಾಗಿ ತುರ್ತು ರವಾನೆ ಮಾಡಿ ನೆರವಾಗಿದೆ. ಈ ಮೊತ್ತವನ್ನು ಸದಸ್ಯರು ಮುಂದೆ ತಮ್ಮ ಅನುಕೂಲದಂತೆ ಹಿಂದಿರುಗಿಸುವ ಅವಕಾಶವನ್ನೂ ಸೊಸೈಟಿ ನೀಡಿದೆ. ಅಲ್ಲದೆ ಸಂಕಷ್ಟದ ಸಮಯದಲ್ಲಿ ತಮ್ಮ ಠೇವಣಿದಾರರಿಗೆ ಅವರ ಹಣವನ್ನು ಆನ್ ಲೈನ್ ಮೂಲಕ ರವಾನೆ ಮಾಡಿಯೂ ಸಹಾಯ ಮಾಡಿದೆ.

    ಅಲ್ಲದೆ ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜ(ರಿ.) ಸಮಾಜ ಬಾಂಧವರಿಂದ ದೇಣಿಗೆ ಸಂಗ್ರಹಿಸಿ, ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ 180 ಕುಟುಂಬಗಳಿಗೆ ಒಟ್ಟು ಸುಮಾರು 11 ಲಕ್ಷ ರೂಪಾಯಿ ವರೆಗೆ ಧನಸಹಾಯ ನೀಡಿದೆ. ಈ ಬಾಬ್ತು ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕೂಡ 1 ಲಕ್ಷ ರೂ. ದೇಣಿಗೆ ನೀಡಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!