Thursday, May 2, 2024
spot_img
More

    Latest Posts

    ತೆಲಂಗಾಣದ ಎಡಿಜಿಪಿ ಆಗಿ ಕನ್ನಡಿಗ ವಿ.ಸಿ. ಸಜ್ಜನರ್; ಪೊಲೀಸ್ ಕಮಿಷನರ್ ಆಗಿಯೂ ಮುಂದುವರಿಕೆ

    ಬೆಂಗಳೂರು: ತೆಲಂಗಾಣದ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿರುವ ಕನ್ನಡಿಗ ವಿ.ಸಿ. ಸಜ್ಜನರ್ ಅವರನ್ನು ತೆಲಂಗಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಗಿ ಅಲ್ಲಿನ ಸರ್ಕಾರ ನೇಮಿಸಿದೆ.

    ಸಜ್ಜನರ್ ಅವರೂ ಸೇರಿದಂತೆ 1996ನೇ ಬ್ಯಾಚ್ ಐಪಿಎಸ್ ಅಧಿಕಾರಿಗಳಾಗಿರುವ ಮೂವರನ್ನು ತೆಲಂಗಾಣ ಸರ್ಕಾರ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಎಡಿಜಿಪಿ) ಆಗಿಸಿ ಬಡ್ತಿ ನೀಡಿದೆ. ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿರುವ ಸಜ್ಜನರ್, ಹೈದರಾಬಾದ್ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್) ಅನಿಲ್ ಕುಮಾರ್, ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್-ಜನರಲ್ ಚಾರು ಸಿನ್ಹಾ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. 1996ನೇ ಬ್ಯಾಚ್ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವಂತೆ ತೆಲಂಗಾಣ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯು 2020ರ ಅಕ್ಟೋಬರ್ ತಿಂಗಳಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

    ವಿಶೇಷವೆಂದರೆ, ಎಡಿಜಿಪಿ ಆಗಿ ಬಡ್ತಿ ಹೊಂದಿದರೂ ವಿ.ಸಿ. ಸಜ್ಜನರ್ ಅವರು ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿಯೂ ಮುಂದುವರಿಯಲಿದ್ದಾರೆ. ರಾಜ್ಯ ಸರ್ಕಾರ ಹೆಚ್ಚಿನ ಅಧಿಕಾರ ನೀಡಿ ಜವಾಬ್ದಾರಿ ವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಜ್ಜನರ್, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಸಚಿವ ಕೆಟಿಆರ್ ಹಾಗೂ ಡಿಜಿಪಿ ಮಹೇಂದ್ರ ರೆಡ್ಡಿ ಅವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ವಿ.ಸಿ. ಸಜ್ಜನರ್ ಅವರನ್ನು ಎಡಿಜಿಪಿ ಆಗಿಸಿದ್ದಕ್ಕೆ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಕೂಡ ಅಭಿನಂದನೆಗಳನ್ನು ತಿಳಿಸಿದೆ.

    ಸಂಬಂಧಿತ ಸುದ್ದಿ: ದುರ್ಜನರಿಗೆ ದುಃಸ್ವಪ್ನವಾಗಿರುವ ಸಜ್ಜನರ್; ಅಂತಾರಾಜ್ಯ ಮಟ್ಟದ ಬೃಹತ್ ವಂಚನಾ ಜಾಲ ಭೇದಿಸಿದ ತೆಲಂಗಾಣ ಪೊಲೀಸ್ 

    ಸಂಬಂಧಿತ ಸುದ್ದಿ: ಆರ್ಥಿಕ ವಂಚನೆಗೀಡಾಗಿದ್ದೀರಾ? ಆ್ಯಪ್‌ ಮೂಲಕ ಸಾಲ ತಗೋತೀರಾ? ಹಾಗಿದ್ರೆ ಪೊಲೀಸ್ ಕಮಿಷನರ್ ಸಲಹೆ ಪಡೆಯಬಹುದು.. 

    ಸಂಬಂಧಿತ ಸುದ್ದಿ: ಶಾಸಕರ ಆರೋಪಕ್ಕೆ ಪೊಲೀಸ್ ಕಮಿಷನರ್ ಖಡಕ್ ಎದಿರೇಟು 

    ಸಂಬಂಧಿತ ಸುದ್ದಿ: ಸೈಬರಾಬಾದ್ ಪೊಲೀಸ್ ಕಮಿಷನರ್ ಸಜ್ಜನರ್‌ಗೆ ಸಚಿವರಿಂದ ಸನ್ಮಾನ 

    ಸಂಬಂಧಿತ ಸುದ್ದಿ: ಮೆಚ್ಚುಗೆ ಗಳಿಸಿದೆ ತೆಲಂಗಾಣದಲ್ಲಿರುವ ಈ ‘ಸಜ್ಜನರ’ ಸಜ್ಜನಿಕೆ… 

    ಸಂಬಂಧಿತ ಸುದ್ದಿ: ಸೇಲಂ ಎಸ್‌ಪಿ ದೀಪಾ ಗಾಣಿಗೇರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!