Thursday, May 2, 2024
spot_img
More

    Latest Posts

    ಇಲ್ಲಿದೆ ನೋಡಿ ಸಿನಿಮಾ ಹೀರೋಯಿನ್‌ ಆಗುವ ಅವಕಾಶ!

    ಬೆಂಗಳೂರು: ಚಿತ್ರರಂಗಕ್ಕೆ ಪ್ರವೇಶಿಸಬೇಕು, ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಆಸಕ್ತಿ ಇರುವವರಿಗೆ ಇಲ್ಲೊಂದು ಅವಕಾಶವಿದೆ. ನಟ ಮನುರಂಜನ್‌ ರವಿಚಂದ್ರನ್‌ ಅವರು ನಾಯಕರಾಗಿ ಅಭಿನಯಿಸಿದ್ದ ʼಮುಗಿಲ್‌ ಪೇಟೆʼ ಚಿತ್ರವನ್ನು ನಿರ್ದೇಶಿಸಿದ್ದ ಭರತ್‌ ನಾವುಂದ ಅವರ ಹೊಸ ಸಿನಿಮಾಗೆ ನಾಯಕಿ ಬೇಕಾಗಿದ್ದಾರೆ.

    ಭರತ್‌ ನಾವುಂದ ಅವರು ಪ್ರೊಡಕ್ಷನ್‌ ನಂ. 2 ಎಂಬ ಹೆಸರಿನಲ್ಲಿ ತಮ್ಮ ನಿರ್ದೇಶನದ ಮೂರನೇ ಸಿನಿಮಾಗೆ ಸಜ್ಜಾಗಿದ್ದು, ಅದಕ್ಕಾಗಿ ಹೀರೋಯಿನ್‌ ಹುಡುಕಾಟದಲ್ಲಿದ್ದಾರೆ. 18ರಿಂದ 24ರ ವಯಸ್ಸಿನ ಯುವತಿಯರು ಈ ಅವಕಾಶ ಬಳಸಿಕೊಳ್ಳಬಹುದು.

    ಆಸಕ್ತರು ತಮ್ಮ ಸ್ವಪರಿಚಯದ ಒಂದು ನಿಮಿಷದ ವಿಡಿಯೋ ಹಾಗೂ 3-4 ಫೋಟೋಗಳನ್ನು ಕಳಿಸಿಕೊಡುವ ಮೂಲಕ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. [email protected] ಐಡಿಗೆ ಮೇಲ್‌ ಮಾಡುವ ಮೂಲಕ ಇಲ್ಲವೇ 78991 99503 ಸಂಖ್ಯೆಗೆ ವಾಟ್ಸ್ಯಾಪ್‌ ಮಾಡುವ ಮೂಲಕ ವಿವರಗಳನ್ನು ಕಳಿಸಿಕೊಡಬಹುದು. ಅಂದಹಾಗೆ, ಇವೆಲ್ಲವೂ ಸೆ.6ರ ಒಳಗೆ ತಲುಪುವಂತೆ ಕಳಿಸಿಕೊಡತಕ್ಕದ್ದು.

    ಉಡುಪಿ ಜಿಲ್ಲೆ ಕುಂದಾಪುರ ಮೂಲದ ಭರತ್‌ ನಾವುಂದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ʼಅಡಚಣೆಗಾಗಿ ಕ್ಷಮಿಸಿʼ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪ್ರವೇಶ ಮಾಡಿದರು. ನಂತರ ಮನುರಂಜನ್‌ ರವಿಚಂದ್ರನ್‌, ಕಯಾದು ಲೋಹರ್‌ ಅಭಿನಯಿಸಿದ ʼಮುಗಿಲ್‌ ಪೇಟೆʼ ಚಿತ್ರವನ್ನು ನಿರ್ದೇಶಿಸಿದ್ದರು. ಮೂರನೇ ಸಿನಿಮಾಗೆ ನಿರ್ದೇಶನ ಮಾಡಲು ಮುಂದಾಗಿರುವ ಭರತ್‌ ನಾವುಂದ ಅವರಿಗೆ ಗ್ಲೋಬಲ್‌ ಗಾಣಿಗ.ಕಾಂ ಶುಭ ಹಾರೈಸುತ್ತಿದೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್

    ಸಂಬಂಧಿತ ಸುದ್ದಿ: ‘ಎಡಗೈಯೇ ಅಪಘಾತಕ್ಕೆ ಕಾರಣ’; ಸಿನಿಮಾ ಪ್ರಚಾರಕ್ಕೆ ‘ವೇಗ’ದ ಶಿರಸ್ತ್ರಾಣ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!