Thursday, May 2, 2024
spot_img
More

    Latest Posts

    ಬೆಂಗಳೂರು ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್:‌ ಬಾಲಾರ್ಕಕ್ಕೆ 40ಕ್ಕೂ ಅಧಿಕ ಪದಕಗಳು‌

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌, ಭಾರತದ ಬಲಾಢ್ಯ ಪುರುಷ ಪ್ರಶಸ್ತಿಗೆ ಪಾತ್ರರಾಗಿರುವ ವಿಶ್ವನಾಥ್‌ ಭಾಸ್ಕರ್‌ ಗಾಣಿಗ ಅವರ ಬಾಲಾರ್ಕ ಫಿಟ್‌ನೆಸ್‌ನಲ್ಲಿ ತರಬೇತುಗೊಂಡ 30ಕ್ಕೂ ಅಧಿಕ ಪವರ್‌ಲಿಫ್ಟರ್ಸ್‌ ಈ ಸಲದ ಬೆಂಗಳೂರು ಜಿಲ್ಲಾಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 40ಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ. ಈ ಮೂಲಕ ಬಾಲಾರ್ಕ ಫಿಟ್‌ನೆಸ್‌ ಭಾರಿ ಗಮನ ಸೆಳೆದಿದೆ.

    ಬೆಂಗಳೂರಿನ ಜೆ.ಪಿ.ನಗರದ ಸಂಸ್ಕೃತಿ ಬೃಂದಾವನ ಹಾಲ್‌ನಲ್ಲಿ ಬೆಂಗಳೂರು ಪವರ್‌ಲಿಫ್ಟಿಂಗ್ ವತಿಯಿಂದ ಬಾಲಾರ್ಕ ಫಿಟ್‌ನೆಸ್‌ ಹಾಗೂ ಮೆರಿಡಿಯನ್ ಫಿಟ್‌ನೆಸ್‌ ಜೊತೆಯಾಗಿ ಆಯೋಜಿಸಿದ್ದ 3ನೇ ಬೆಂಗಳೂರು ಜಿಲ್ಲಾಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಹತ್ತಕ್ಕೂ ಅಧಿಕ ಫಿಟ್‌ನೆಸ್‌ ಅಕಾಡೆಮಿಗಳ ನೂರಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಪವರ್‌ಲಿಫ್ಟರ್ಸ್‌ ಇದರಲ್ಲಿ ಭಾಗಿಯಾಗಿದ್ದರು.

    ಬೆಂಗಳೂರಿನ ಸೌತ್ ಎಂಡ್‌ ಸರ್ಕಲ್ ಮೆಟ್ರೋ ಸ್ಟೇಷನ್ ಬಳಿ ಇರುವ ವಿಶ್ವನಾಥ ಭಾಸ್ಕರ್ ಗಾಣಿಗ ಅವರ ಬಾಲಾರ್ಕ ಫಿಟ್‌ನೆಸ್‌ನಲ್ಲಿ ತರಬೇತುಗೊಂಡ 30ಕ್ಕೂ ಹೆಚ್ಚು ಪವರ್‌ಲಿಫ್ಟರ್ಸ್‌ ಒಟ್ಟು 40ಕ್ಕೂ ಅಧಿಕ ಪದಕಗಳನ್ನು ಜಯಿಸಿದ್ದಾರೆ. ಆ ಪೈಕಿ ಸೀನಿಯರ್ ವಿಭಾಗದಲ್ಲಿ ದತ್ತಾತ್ರೇಯ, ಮಾಸ್ಟರ್ ಮಹಿಳಾ ವಿಭಾಗದಲ್ಲಿ ಪೂರ್ಣಿಮಾ ಹೊಸ್ಕೆರೆ ಹಾಗೂ ಪುರುಷರ ವಿಭಾಗದಲ್ಲಿ ಶಶಿಧರ ರಾಜು ಬೆಸ್ಟ್‌ ಲಿಫ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಜೂನಿಯರ್ ವಿಭಾಗದಲ್ಲಿ ವಿಶಾಲ್, ಸಬ್ ಜೂನಿಯರ್ ಮಹಿಳಾ ವಿಭಾಗದಲ್ಲಿ ದೇವಿಕಾ ದೇಸಾಯಿ ಬೆಸ್ಟ್ ಲಿಫ್ಟರ್ ಆಗಿದ್ದಾರೆ.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!