Thursday, May 2, 2024
spot_img
More

    Latest Posts

    ಹೊಸ ಪುಸ್ತಕ: ಸಂಗಮನಾಥ ಪಿ. ಸಜ್ಜನ ಅವರ ʼಅಕ್ಷರ ವೈಭವʼ

    ಬೆಂಗಳೂರು: ಯುವಕವಿ ಸಂಗಮನಾಥ ಪಿ. ಸಜ್ಜನ ಅವರ ಹೊಸ ಪುಸ್ತಕ ಅಕ್ಷರ ವೈಭವ ಬಿಡುಗಡೆಯಾಗಿದ್ದು, ಆ ಕುರಿತು ಓದುಗರೊಬ್ಬರು ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ಯಾದಗಿರಿಯ ಕನ್ನಡ ಜಾಗೃತಿಯ ಮಾಜಿ ಸದಸ್ಯ ಶರಣು ಬಿ. ಗದ್ದುಗೆ ಅವರು ಅಕ್ಷರ ವೈಭವ ಕುರಿತು ವ್ಯಕ್ತಪಡಿಸಿದ ಅನಿಸಿಕೆಗಳು ಇಲ್ಲಿವೆ.

    ಅಕ್ಷರ ವೈಭವ.. ಇದು ಯುವಕವಿ ಸಂಗಮನಾಥ ಪಿ. ಸಜ್ಜನ ಅವರ ಚೊಚ್ಚಲ ಕವನ ಸಂಕಲನ. ಕವಿಯ ಸ್ಪಂದನಾಶೀಲ ಮನಸ್ಸು ಇಲ್ಲಿನ ಕವನಗಳಲ್ಲಿ ಬದುಕು, ಅಕ್ಷರ, ದೇಶಭಕ್ತಿ, ನಾಡಭಕ್ತಿ, ತಾಯಿ ಪ್ರೇಮ, ಕಲ್ಯಾಣ ಕರ್ನಾಟಕದ ಜೀವನ, ಒಗ್ಗಟಿನ ಬದುಕನ್ನು ಪ್ರತಿಬಿಂಬಿಸುತ್ತವೆ. ಅಲ್ಲದೇ ಪುನೀತ್ ರಾಜಕುಮಾರ, ರವಿ ಬೆಳಗೆರೆ, ಬಸವಣ್ಣ ಮುಂತಾದ ವ್ಯಕ್ತಿಗಳ ಕುರಿತಾದ ಕವನಗಳು ಓದುಗರ ಮನ ಗೆಲ್ಲಲ್ಲಿವೆ.

    ಕವಿಯ ನೂರಾರು ಭಾವನೆಗಳು ಸರಳ ಮತ್ತು ಸಾಮಾನ್ಯ ಭಾಷೆಯಲ್ಲಿ ವ್ಯಕ್ತವಾಗಿವೆ. ಆರದ ಹಣತೆ, ತೀರಿಸಲಾಗದ ಸಾಲ, ಆದದ್ದೆಲ್ಲಾ ಒಳ್ಳೆಯದಕ್ಕೆ, ನಾ ಹ್ಯಾಂಗ ಮರಿಲ್ಲೆವ್ವ, ಕರುನಾಡ ಕುವರ, ಆಸೆಯೇ ಬಾಳು, ಎನ್ನೊಲುಮೆಯ ನಾಡು ಮುಂತಾದ ಕವನಗಳ ಅಚ್ಚುಕಟ್ಟಾದ ಕವನ ಸಂಕಲನವಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಶುಭ ಸಂದೇಶ ಬರೆದು ಹಾರೈಸಿದ್ದಾರೆ. ವಿಶೇಷವಾಗಿ ತಾಯಿಯೇ ಈ ಕವನ ಸಂಕಲನಕ್ಕೆ ಬೆನ್ನುಡಿಯಲ್ಲಿ ಹರಸಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ಕವನ ಸಂಕಲನವಾಗಿದೆ. ಇದರ ಬೆಲೆ 100 ರೂ. ಮಾತ್ರ.

    | ಶ್ರೀ ಶರಣು.ಬಿ.ಗದ್ದುಗೆ, ಕನ್ನಡ ಜಾಗೃತಿ ಮಾಜಿ ಸದಸ್ಯರು ಯಾದಗಿರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು.

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ

    ಸಂಬಂಧಿತ ಸುದ್ದಿ: ಉಚಿತ ಟೈಲರಿಂಗ್‌ ಹಾಗೂ ಬೇಸಿಕ್‌ ಬ್ಯೂಟಿಷಿಯನ್‌ ಕೋರ್ಸ್‌ ಉದ್ಘಾಟನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!