Thursday, May 2, 2024
spot_img
More

    ನಮ್ಮ ಬಗ್ಗೆ

    "ದೇವನೊಬ್ಬ ನಾಮ ಹಲವು" ಎಂಬಂತೆ ಗಾಣಿಗ ಸಮುದಾಯವೂ ಬೇರೆ ಬೇರೆ ಹೆಸರುಗಳಲ್ಲಿ ಕರೆಸಿಕೊಳ್ಳುತ್ತಿದೆ. ಗಾಣಿಗ ಎಂಬುದು ಮೂಲತಃ ಕುಲಕಸುಬಿನಿಂದ ಬಂದ ಹೆಸರಾದರೂ ಅದೇ ಒಂದು ಸಮುದಾಯವಾಗಿಯೂ ಗುರುತಿಸಿಕೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಗಾಣಿಗ ಸಮುದಾಯವು ಮೋದಿ, ತೇಲಿ, ಸಾಹು ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಗಾಣಿಗರಲ್ಲಿ ಸೋಮಕ್ಷತ್ರಿಯ, ಜ್ಯೋತಿಪಣ, ಜ್ಯೋತಿನಗರ ಮುಂತಾದ ಒಳಪಂಗಡಗಳೂ ಇವೆ. ಇನ್ನು ಸೋಮಕ್ಷತ್ರಿಯ ಸಮಾಜವೊಂದರಲ್ಲೇ ಶೆಟ್ಟಿ, ರಾವ್, ವರ್ಮಾ ಎಂಬಿತ್ಯಾದಿ ಸರ್‌ನೇಮ್‌ಗಳಿಂದಲೂ ಗಾಣಿಗ ಸಮುದಾಯದವರು ಗುರುತಿಸಿಕೊಳ್ಳುತ್ತಿದ್ದಾರೆ. ಹೀಗೆ ನಾನಾ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿರುವ ಎಲ್ಲ ಥರದ ಗಾಣಿಗರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವೇ ಈ "ಗ್ಲೋಬಲ್ ಗಾಣಿಗ.ಕಾಂ" ಉದ್ದೇಶ. ಪಂಗಡ-ಒಳಪಂಗಡಗಳ ಭೇದವಿಲ್ಲದೆ ಎಲ್ಲ ಗಾಣಿಗರಿಗೂ ಸಮಗ್ರ ವೇದಿಕೆ ಒದಗಿಸಿ, ಜಗತ್ತಿನಾದ್ಯಂತ ಇರುವ ಗಾಣಿಗರನ್ನು ಬೆಸೆಯುವ ಮಹತ್ವಾಕಾಂಕ್ಷೆಯಿಂದ ಈ "ಗ್ಲೋಬಲ್ ಗಾಣಿಗ.ಕಾಂ" ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ. ಗಾಣಿಗ ಸಮುದಾಯಕ್ಕೆ ಸಂಬಂಧಿಸಿದ ಸುದ್ದಿ, ಗಾಣಿಗ ಸಮುದಾಯದ ಸಾಧಕರು, ಉದ್ಯಮಿಗಳು, ಪ್ರತಿಭಾವಂತರನ್ನು ಇಡೀ ಸಮುದಾಯಕ್ಕೆ ಪರಿಚಯಿಸಿ, ಸಮುದಾಯದ ಇತರರಲ್ಲಿ ಹೆಮ್ಮೆ ಉಂಟಾಗುವಂತೆ ಮಾಡುವ ಜೊತೆಗೆ ಸಮುದಾಯದ ಕಿರಿಯರಿಗೆ ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನ ಲಭಿಸುವಂಥ ಕಾರ್ಯವನ್ನು "ಗ್ಲೋಬಲ್ ಗಾಣಿಗ.ಕಾಂ" ಮಾಡಲಿದೆ. ಬನ್ನಿ ನಾವೆಲ್ಲ ಕೈಜೋಡಿಸಿ, ಜೊತೆಯಾಗಿ ಸಾಗೋಣ, ಸಾಧಿಸೋಣ.. ಸಮುದಾಯದ ಸಾಧನೆಯನ್ನು ಸಾರೋಣ. ಏಕೆಂದರೆ, ನಾನು ಎಂದರೆ ಸೀಮಿತ, ನಾವು ಎಂದರೆ ಅಪರಿಮಿತ.

    ಸಮುದಾಯದ ಸುದ್ದಿ ಕಳುಹಿಸಿ

    ಸಮುದಾಯದ ಸುದ್ದಿಗಳಿಗೆ ಸಮುದಾಯದ ಜನರೇ ವರದಿಗಾರರು. ನಿಮ್ಮ ಮನೆ ಮಕ್ಕಳ ಸಾಧನೆ, ಕಾರ್ಯಕ್ರಮ, ಸಮುದಾಯದ ಕಾರ್ಯಕ್ರಮಗಳ ವಿವರವನ್ನು ನಮಗೆ ಕಳುಹಿಸಬಹುದು.

    ಜಾಹೀರಾತು ನೀಡಿ ಪ್ರೋತ್ಸಾಹಿಸಿ

    ಗ್ಲೋಬಲ್‌ ಗಾಣಿಗ ಎಂಬ ತಾಣ ಉಳಿಸಿ ಬೆಳೆಯಲು ಸಮುದಾಯದ ಕೊಡುಗೆಯನ್ನು ನಾವು ನಿರೀಕ್ಷಿಸುತ್ತೇವೆ. ಇಲ್ಲಿ ಜಾಹೀರಾತು ನೀಡುವ ಮೂಲಕ ನಿಮ್ಮ ಉತ್ಪನ್ನ, ಸೇವೆಗಳಿಗೆ ಪ್ರಚಾರವನ್ನೂ ಪಡೆಯಬಹುದು.

    ಹಂಚಿಕೊಳ್ಳಲು ಮರೆಯದಿರಿ

    ಇಲ್ಲಿರುವ ಸುದ್ದಿ, ಲೇಖನ, ಮಾಹಿತಿಗಳನ್ನು ನಿಮ್ಮ ಬಳಗದ ಜೊತೆ ಹಂಚಿಕೊಳ್ಳಲು ಮರೆಯಬೇಡಿ. ಗ್ಲೋಬಲ್ ಗಾಣಿಗ ಹೆಚ್ಚು ಜನರನ್ನು ತಲುಪಲು ಸಹಕರಿಸಿ.

    error: Content is protected !!