Thursday, May 2, 2024
spot_img
More

    Latest Posts

    ‘ಎಡಗೈಯೇ ಅಪಘಾತಕ್ಕೆ ಕಾರಣ’; ಸಿನಿಮಾ ಪ್ರಚಾರಕ್ಕೆ ‘ವೇಗ’ದ ಶಿರಸ್ತ್ರಾಣ

    ಬೆಂಗಳೂರು: ʼಅಂಬಿ ನಿಂಗ್‌ ವಯಸ್ಸಾಯ್ತೋʼ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಗುರುದತ್‌ ಗಾಣಿಗ, ಬಳಿಕ ನಿರ್ಮಾಪಕರೂ ಆಗಿದ್ದಾರೆ. ಗುರುದತ್‌ ಗಾಣಿಗ ಮತ್ತು ಸಮರ್ಥ್‌ ಬಿ. ಕಡಕೋಳ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಈಗ ‘ವೇಗ’ದ ಶಿರಸ್ತ್ರಾಣ ಲಭಿಸಿದೆ.

    ಅರ್ಥಾತ್.‌. ಈ ಸಿನಿಮಾದ ಕಥಾಹಂದರದಿಂದ ಪ್ರೇರಣೆಗೊಂಡು ಚಿತ್ರತಂಡದ ಜೊತೆ ಕೈಜೋಡಿಸಿರುವ ಹೆಲ್ಮೆಟ್‌ ತಯಾರಿಕಾ ಕಂಪನಿ ʼವೇಗʼ, ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್‌ ವಿನ್ಯಾಸಗೊಳಿಸಿದೆ. ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವಾದ ನಾಳೆ ಈ ವಿಶೇಷ ಹೆಲ್ಮೆಟ್‌ ಬಿಡುಗಡೆ ಆಗಲಿದೆ. ಈ ಮೂಲಕ​ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪ್ರಚಾರಕ್ಕೂ ‘ವೇಗʼ ಸಿಗಲಿದೆ.

    ಕಥೆಯಲ್ಲಿ ಲೆಫ್ಟ್ ಹ್ಯಾಂಡೆಡ್​ ವ್ಯಕ್ತಿಯನ್ನೇ ನಾಯಕನಾಗಿ ಹೊಂದಿರುವ ‘ಎಡಗೈಯೇ ಅಪಘಾತಕ್ಕೆ ಕಾರಣʼ ಚಿತ್ರಕ್ಕೆ ದೂದ್‌ ಪೇಡಾ ದಿಗಂತ್‌ ನಾಯಕ. ಸಮರ್ಥ್ ಬಿ. ಕಡಕೊಳ್ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ.

    ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..

    ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಗುರುದತ್‌ ಗಾಣಿಗ, ಸಮರ್ಥ್‌ ಬಿ. ಕಡಕೋಳ್‌, ದಿಗಂತ್‌ ಮತ್ತು ಧನು ಹರ್ಷ..
    ಚಿತ್ರದ ನಾಯಕ ದಿಗಂತ್‌

    ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಸಂಬಂಧಿತ ಸುದ್ದಿ: ಎಡಗೈಯೇ ಅಪಘಾತಕ್ಕೆ ಕಾರಣ.. ಇಂದು ಆರಂಭ ಚಿತ್ರೀಕರಣ..

    ಚಿತ್ರದ ನಾಯಕಿ ಧನು ಹರ್ಷ

    ಹೈಫನ್ ಪಿಕ್ಚರ್ಸ್ ಬ್ಯಾನರ್​​ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.

    ಚಿತ್ರದ ನಾಯಕಿ ನಿಧಿ ಸುಬ್ಬಯ್ಯ

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಮಧ್ಯಪ್ರದೇಶದಲ್ಲೂ ಗಾಣಿಗ ನಿಗಮ ಸ್ಥಾಪನೆ; ಅಧ್ಯಕ್ಷರಾಗಿ ರವಿಕರಣ್‌ ಸಾಹು ನೇಮಕ

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!