Thursday, May 2, 2024
spot_img
More

    Latest Posts

    ಗಾಣಿಗ ‘ಸಂಘಂ’ ಶರಣಂ ಗಚ್ಛಾಮಿ…

    ಬೆಂಗಳೂರು: ಗಾಣಿಗರಲ್ಲಿ ಈಗಲೂ ಸಂಘಟನಾ ಶಕ್ತಿ ಉಳಿದುಕೊಂಡಿದೆ ಎಂದರೆ ಅದು ಸಮುದಾಯದ ಸಂಘಗಳಿಂದ ಎಂದರೆ ತಪ್ಪೇನಲ್ಲ. ಜಿಲ್ಲೆ, ತಾಲೂಕು ಹಾಗೂ ಪ್ರದೇಶವಾರು ಮಾಡಿಕೊಂಡಿರುವ ಸಂಘಗಳಿಂದಾಗಿ, ಸಂಘ-ಸಂಘಗಳ ಬೆಸೆಯುವಿಕೆಯಿಂದ ಆದ ಪರಿಚಯದಿಂದಾಗಿ ಸಮಾಜ-ಸಮುದಾಯವೂ ಬೆಳೆದು ಸಂಘಟಿತವಾಗುತ್ತ ಬಂದಿದೆ.

    ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲೂ ಗಾಣಿಗ ಸಮುದಾಯದಂತೆ ಸಮಾಜದ ಸಂಘಟನೆಗಳು ಕೂಡ ಬೇರೆ ಬೇರೆ ಹೆಸರುಗಳಿಂದ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಲೇ ಬಂದಿವೆ. ಇವುಗಳಲ್ಲಿ ಕೆಲವು ಸಂಘಗಳ ಹೆಸರು ಬೆಳಕಿಗೆ ಬಂದರೂ ಆ ಸಂಘದ ಕುರಿತ ಮಾಹಿತಿ, ಪದಾಧಿಕಾರಿಗಳ ಪರಿಚಯದ ಬಗ್ಗೆ ಸಮಾಜದ ಬಹುತೇಕರಿಗೆ ಗೊತ್ತಿರುವುದಿಲ್ಲ.

    ಸಮಾಜದಲ್ಲಿ ನಮ್ಮ ಸಮುದಾಯ ಬೆಳೆಯಬೇಕು, ಸಂಘಟನೆ ಆಗಬೇಕು ಎಂದರೆ ಸಂಘಗಳು ಶಕ್ತಿಶಾಲಿ ಆಗಬೇಕು. ಹಾಗೆ ಆಗಬೇಕೆಂದರೆ ಸಮಾಜದ ಅಷ್ಟೂ ಸಂಘಗಳು ಒಂದಕ್ಕೊಂದು ಸಂಪರ್ಕದಲ್ಲಿದ್ದು ಪೂರಕವಾಗಿ ಕೆಲಸ ಮಾಡಬೇಕು. ಇದು ಸಾಧ್ಯವಾಗುವುದು ಸಮಾಜದಲ್ಲಿರುವ ಸಮುದಾಯದ ಸಂಘಟನೆಗಳ ಪರಿಚಯ ಆದಾಗ ಮಾತ್ರ.

    ಉದಾಹರಣೆಗೆ ಯಾವುದೋ ಒಂದು ಊರಿನಲ್ಲಿರುವ ಗಾಣಿಗ ಸಮಾಜದ ಸಂಘದ ಬಗ್ಗೆ ಮಾಹಿತಿ ಇದ್ದಾಗ ಅಲ್ಲಿನ ಗಾಣಿಗರ ಜೀವನದ ಸ್ಥಿತಿಗತಿಯ ಮಾಹಿತಿಯೂ ಸುಲಭದಲ್ಲಿ ಲಭಿಸುತ್ತದೆ. ಒಂದೂರಿನ ಗಾಣಿಗರು ಬೇರೆ ಊರಿನಲ್ಲಿರುವ ತಮ್ಮ ಸಂಬಂಧಿಗಳಿಗೆ ಏನಾದರೂ ತೊಂದರೆ ಆದಾಗ ಅಥವಾ ತುರ್ತು ಸಹಾಯ ಏನಾದರೂ ಬೇಕಾದಾಗ ಆ ಊರಿನ ಗಾಣಿಗರ ಸಂಘದ ಸಂಪರ್ಕ ಸಿಕ್ಕರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಅಲ್ಲದೆ ಸಂಘ-ಸಂಘಟನೆಗಳ ಮೂಲಕ ಒಂದೂರಿನಲ್ಲಿ ಕೆಲಸ ಮಾಡುತ್ತಿರುವ ಪದಾಧಿಕಾರಿಗಳ ಪ್ರಯತ್ನವನ್ನು, ಅವರ ತಂಡವನ್ನು ಜಗತ್ತಿನಾದ್ಯಂತ ಇರುವ ಗಾಣಿಗರಿಗೆ ಪರಿಚಯಿಸುವ ಸದುದ್ದೇಶ ‘ಗ್ಲೋಬಲ್ ಗಾಣಿಗ’ರದ್ದು. ಈ ಹಿನ್ನೆಲೆಯಲ್ಲಿ ವಾರಕ್ಕೊಂದು ಗಾಣಿಗ ಸಂಘಟನೆಯ ಪರಿಚಯವನ್ನು ಮಾಡುವ ಯೋಜನೆಯನ್ನು ‘ಗ್ಲೋಬಲ್ ಗಾಣಿಗ’ ಹಾಕಿಕೊಂಡಿದೆ. ಸಮಾಜ ಬಾಂಧವರು ತಮ್ಮ ಸಂಘಟನೆಯ ವಿವರಗಳನ್ನು ನಮಗೆ ಫೋಟೋ ಸಹಿತ ಇ-ಮೇಲ್ ಮಾಡಿದರೆ ಆದ್ಯತೆ ಮೇರೆಗೆ ಅವನ್ನು ‘ಗ್ಲೋಬಲ್ ಗಾಣಿಗ’ದಲ್ಲಿ ಪ್ರಕಟಿಸಲಾಗುವುದು. ಬುದ್ಧ ‘ಸಂಘಂ ಶರಣಂ ಗಚ್ಛಾಮಿ’ ಎಂದು ಹೇಳಿದಂತೆ, ಈ ವಿಷಯದಲ್ಲಿ ನಾವೂ ಗಾಣಿಗರ ಸಂಘಗಳಿಗೆ ಶರಣು ಎನ್ನುತ್ತಿದ್ದೇವೆ.

     

    ಗಾಣಿಗ ಸಮುದಾಯದ ಸಂಘ-ಟ್ರಸ್ಟ್-ಸಂಘಟನೆಗಳ ಪ್ರಕಟಣೆಗಾಗಿ ಮಾಹಿತಿ ಕಳುಹಿಸುವವರು ಪಾಲಿಸಬೇಕಾದ ನಿಯಮಗಳು.

    1. ಸಂಘ-ಟ್ರಸ್ಟ್-ಸಂಘಟನೆ ಕಡ್ಡಾಯವಾಗಿ ಗಾಣಿಗ ಸಮುದಾಯಕ್ಕೆ ಸೇರಿದ್ದಾಗಿರಬೇಕು ಮತ್ತು ಗಾಣಿಗರ ನೇತೃತ್ವದಲ್ಲೇ ಇರಬೇಕು.
    2. ಸಂಘ-ಟ್ರಸ್ಟ್-ಸಂಘಟನೆ ಸಕ್ಷಮ ಪ್ರಾಧಿಕಾರದ ನೋಂದಣಿ ಹೊಂದಿರಬೇಕು.
    3. ವಿವರಗಳನ್ನು ಕಳುಹಿಸುವವರು ಸಂಘ-ಟ್ರಸ್ಟ್-ಸಂಘಟನೆಯ ಅಧಿಕೃತ ಲೆಟರ್ ಹೆಡ್ ಮೂಲಕವೇ ಮಾಹಿತಿ ತಿಳಿಸಬೇಕು. ಅಲ್ಲದೆ ವಿವರಗಳನ್ನು ಯೂನಿಕೋಡ್ ಫಾಂಟ್ ಮೂಲಕ ಟೈಪ್ ಮಾಡಿ ವರ್ಡ್ ಪ್ಯಾಡ್ ಮೂಲಕವೂ ಪ್ರತ್ಯೇಕ ಒಂದು ಪ್ರತಿ ಕಳಿಸಿರಬೇಕು. ಜೊತೆಗೆ ನೋಂದಣಿ ಪ್ರಮಾಣಪತ್ರದ ಝೆರಾಕ್ಸ್ ಪ್ರತಿ ಲಗತ್ತಿಸಿರಬೇಕು.
    4. ಸಂಘ-ಟ್ರಸ್ಟ್-ಸಂಘಟನೆ ಜಿಲ್ಲೆ ಹಾಗೂ ಜಿಲ್ಲಾಮಟ್ಟಕ್ಕೆ ಮೇಲ್ಪಟ್ಟಿದ್ದಾಗಿರಬೇಕು. ಸಂಘ ಉತ್ತಮ ಕೆಲಸ ಮಾಡುತ್ತಿದ್ದರೆ ತಾಲೂಕು ಮಟ್ಟದ್ದಾಗಿದ್ದರೂ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.
    5. ಸಂಘ-ಟ್ರಸ್ಟ್-ಸಂಘಟನೆಗಳ ಪ್ರಸ್ತುತ ಅಧಿಕಾರದಲ್ಲಿರುವ ಪದಾಧಿಕಾರಿಗಳ ಪದನಾಮದ ಜೊತೆಗೆ ಅವರ ಹೆಸರು-ಮೊಬೈಲ್ ಫೋನ್ ಸಂಖ್ಯೆಗಳನ್ನೂ ಕಳುಹಿಸಬೇಕು. ಎಲ್ಲರ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಿದರೆ ಚಿತ್ರಸಹಿತವಾಗಿ ಪ್ರಕಟಿಸಲಾಗುವುದು.
    6. ಮೇಲಿನ ಎಲ್ಲ ವಿವರಗಳನ್ನು ಕಡ್ಡಾಯವಾಗಿ [email protected] ಗೆ ಇ-ಮೇಲ್ ಮಾಡಬೇಕು. ಬೇರೆ ಮಾಧ್ಯಮದ ಮೂಲಕ ಕಳುಹಿಸಿದ ವಿವರಗಳನ್ನು ಪರಿಗಣಿಸಲಾಗುವುದಿಲ್ಲ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!