Thursday, May 2, 2024
spot_img
More

    Latest Posts

    ಗಾಣಿಗರ ಬೃಹತ್ ಸಮಾವೇಶ: ವಿ.ಆರ್. ಸುದರ್ಶನ್ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ

    ಬೆಂಗಳೂರು: ಅಖಿಲ ಕರ್ನಾಟಕ ಗಾಣಿಗ ಸಂಘ ಬೆಂಗಳೂರು ಇದರ ಸುವರ್ಣ ಮಹೋತ್ಸವದ ಅಂಗವಾಗಿ ಇದೇ ಡಿ. 2ರಂದು ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆಯಲಿರುವ ಗಾಣಿಗ ಸಮಾಜದ ಬೃಹತ್ ಸಮಾವೇಶದ ತಯಾರಿ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.

    ಮಂಗಳೂರಿನ ಡಿಂಕಿ ಡೈನ್ ಹೋಟೆಲ್ ಸಭಾಭವನದಲ್ಲಿ ನ.15ರಂದು ನಡೆದ ಈ ಪೂರ್ವಭಾವಿ ಸಭೆ ಅಖಿಲ ಕರ್ನಾಟಕ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಎಂ.ಆರ್. ರಾಜಶೇಖರ್ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 

    ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಈ ಪೂರ್ವಸಭೆಯಲ್ಲಿ ಪ್ರಧಾನ ಅತಿಥಿಯಾಗಿ ಉಪಸ್ಥಿತರಿದ್ದು, ಸಮಾವೇಶದ ಉದ್ದೇಶ-ವಿವರಗಳ ಕುರಿತು ಮಾಹಿತಿ ನೀಡಿದರು. 

    ಗಾಣಿಗ ಸಮಾಜದ ವಿವಿಧ ಉಪಜಾತಿಯವರು ಒಗ್ಗಟ್ಟಾಗಿ ಸರ್ಕಾರದ  ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಸರ್ಕಾರಿ ಸೌಲಭ್ಯಗಳ ಪ್ರಯೋಜನ, ರಾಜಕೀಯ ಪ್ರಾತಿನಿಧ್ಯ ಗಳಿಸಬೇಕು ಎಂಬ ಕಿವಿಮಾತು ಹೇಳಿದರು. 

    ಅಖಿಲ ಕರ್ನಾಟಕ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಎಂ.ಆರ್. ರಾಜಶೇಖರ್ ಮಾತನಾಡಿ, ಗಾಣಿಗ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದು,  ಕಾರ್ಯಕ್ರಮ ಯಶಸ್ವಿಯಾಗಲು ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಿಂದ ಹೆಚ್ಚಿನ ಜನರು ಭಾಗವಹಿಸಬೇಕೆಂದು ಆಹ್ವಾನಿಸಿದರು. 

    ಅಖಿಲ ಕರ್ನಾಟಕ ಗಾಣಿಗ ಸಂಘದ ಉಡುಪಿ ಜಿಲ್ಲಾ ನಿರ್ದೇಶಕ ಕೆ.ಎಂ. ಶೇಖರ್, ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಭಾಸ್ಕರ ಸಪಲಿಗ, ಮಂಗಳೂರು ತಾಲೂಕು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು, ಮಂಗಳೂರು ತಾಲೂಕು ಪಾಟಾಳಿ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ, ಸುಳ್ಯ ತಾಲೂಕು ಪಾಟಾಳಿ ಗಾಣಿಗ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಟಾಲಿ, ಗಾಣಿಗ ಸಮಾಜದ ರಾಜಕೀಯ ಮುಖಂಡ ಮಾಧವ ಮಾವೇ, ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಂಘದ ಉಪಾಧ್ಯಕ್ಷ ಜನಾರ್ಧನ ಅರ್ಕುಲ, ಮಂಜೇಶ್ವರ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಕಮಲಾಕ್ಷ ಬಿ.ಎಂ., ನಿವೃತ್ತ ಪೊಲೀಸ್ ಅಧಿಕಾರಿ ರಾಘವ ಪಡೀಲ್, ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸಂಜೀವ ಅಡ್ಯಾರ್ ಅತಿಥಿ ಭಾಷಣ ಮಾಡಿದರು. 

    ಸಫಲ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರೇಮಾನಂದ ಬಿಜೈ, ನಿರ್ದೇಶಕರಾದ ಗೋಪಾಲಕೃಷ್ಣ, ಮಾಧವ ಸುವರ್ಣ, ಮಹಾಬಲ ಅಡ್ಯಾರ್, ವೆಂಕಟೇಶ್ ಕದ್ರಿ, ಮೋನಪ್ಪ ಪೊಳಲಿ, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷ ಪ್ರಕಾಶ್ ಕೊಲ್ಯ, ಸೋಮೇಶ್ವರ ಗಾಣಿಗ ಸಂಘದ ಅಧ್ಯಕ್ಷ ರಾಮದಾಸ್ ಸೋಮೇಶ್ವರ, ಸೋಮೇಶ್ವರ ಸಂಘದ ಸಮಿತಿ ಸದಸ್ಯ ಶೇಖರ್ ಸೋಮೇಶ್ವರ, ಬೀಬಿ ಲಚ್ಚಿಲ್ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಪೊಳಲಿ, ಅತ್ತವಾರ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುನೀಲ್ ಕುಮಾರ್, ಮಂಜೇಶ್ವರ ಗಾಣಿಗ ಸಂಘದ ಉಪಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಖ್ಯಾತ ಸ್ಯಾಕ್ಸೊಫೋನ್ ಕಲಾವಿದ ಜಯರಾಮ್, ಪ್ರಮೋದ್ ಕರ್ಕೇರ, ಇತಿಹಾಸ್, ಜಯರಾಮ್ ಅಡ್ಯಾರ್, ಜ್ಯೋತಿ ಯಲಬುರ್ಗಿ, ಸುಳ್ಯ ಪಾಟಾಳಿ ಗಾಣಿಗ ಸಂಘದ ಸಮಿತಿ ಸದಸ್ಯರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಗಾಣಿಗ ಸಂಘಗಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಂಜೀವ ಅಡ್ಯಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ಅಡ್ಯಾರ್ ವಂದಾನರ್ಪಣೆ ಸಲ್ಲಿಸಿದರು.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ರಾಜ್ಯಮಟ್ಟದ ಗಾಣಿಗರ ಬೃಹತ್ ಸಮಾವೇಶ; ಪೂರ್ಣಾನಂದಪುರಿ ಶ್ರೀಗಳಿಗೆ ಆಹ್ವಾನ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!