Saturday, September 21, 2024
spot_img
More

    Latest Posts

    ಗಾಣಿಗರಿಗಿಲ್ಲಿ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಪವರ್‌ಫುಲ್ ಗಾಣ

    ಬೆಂಗಳೂರು: ಗಾಣದಿಂದ ಎಣ್ಣೆ ತೆಗೆಯಲು ಒಂದಿಬ್ಬರು ಜನ ಬೇಕು ಅಥವಾ ಒಂದಾದರೂ ಎತ್ತು ಬೇಕು. ಜೊತೆಗೆ ಆ ಗಾಣವನ್ನು ಸ್ಥಾಪಿಸಲು, ಅದರ ಸುತ್ತ ಸುತ್ತಿ ಎಣ್ಣೆ ತೆಗೆಯಲು ಒಂದಷ್ಟು ಜಾಗವೂ ಬೇಕು.  ಆದರೆ ನಗರೀಕರಣದ ಪರಿಣಾಮದಿಂದ ಯುವಜನತೆ ನಗರದತ್ತ ತೆರಳಿದ್ದರಿಂದ ಹಾಗೂ ಎತ್ತುಗಳನ್ನು ಸಾಕುವ ಕಷ್ಟ ಮುಂತಾದ ಸಮಸ್ಯೆಗಳಿಂದ ಎಷ್ಟೋ ಕಡೆ ಇದ್ದ ಗಾಣಗಳು ಇಲ್ಲವಾಗಿವೆ. ಪರಿಣಾಮ ಶುದ್ಧ ಎಣ್ಣೆಯೂ ಸುಲಭದಲ್ಲಿ ಸಿಗದಂತಾಗಿದೆ.

    ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಗಾಣಿಗ ಸಮಾಜದ ಮಹನೀಯರೊಬ್ಬರು ಸುಲಭದಲ್ಲಿ ಅಳವಡಿಸಬಹುದಾದ,  ಅದರ ಸುತ್ತ ತಿರುಗಲು ಜನ ಅಥವಾ ಎತ್ತು ಇಲ್ಲದೆಯೂ ಶುದ್ಧ ಹಾಗೂ ಸಹಜವಾದ ಎಣ್ಣೆ ತೆಗೆಯುವ ಸರಳ ಹಾಗೂ ಪವರ್‌ಫುಲ್ ಗಾಣವೊಂದನ್ನು ವಿನ್ಯಾಸಗೊಳಿಸಿದ್ದಾರೆ. ವಿಶೇಷವೆಂದರೆ ಇಂಥದ್ದೊಂದು ಗಾಣ ಸಮಾಜದವರಿಗೆ ವಿಶೇಷವಾದ ರಿಯಾಯಿತಿ ದರದಲ್ಲಿ ಸಿಗಲಿದೆ.

    ಗಾಣಿಗರದ್ದೇ ಸಂಘಟನೆಯಾದ ‘ಸಾಹು ಚೌಪಲ್’ನ ಸ್ಥಾಪಕ ಸದಸ್ಯ ಹಾಗೂ ಹಿರಿಯ ಉಪಾಧ್ಯಕ್ಷರೂ ಆಗಿರುವ ಕೃಷ್ಣಕುಮಾರ್ ಸಾಹು ಅವರು ಇಂಥದ್ದೊಂದು ಸರಳ ಹಾಗೂ ಶಕ್ತಿಶಾಲಿ ಗಾಣವನ್ನು ತಯಾರಿಸುತ್ತಿದ್ದು, ಅದನ್ನು ಸಮಾಜದವರಿಗೆ ಸಾಧ್ಯವಾದಷ್ಟೂ ಅಧಿಕ ರಿಯಾಯಿತಿ ದರದಲ್ಲಿ ನೀಡುತ್ತಿದ್ದಾರೆ.

    ಇದು ಬರೀ 3 ಎಚ್‌ಪಿ, ಸಿಂಗಲ್ ಫೇಸ್ ಮನೆಯ ಕನೆಕ್ಷನ್‌ನಲ್ಲಿ ಕೆಲಸ ಮಾಡುವಂಥ ಗಾಣ. ಹೊರಗೆ ಪೂರ್ತಿ ಸ್ಟೀಲ್ ಬಾಡಿ ಇರಲಿದ್ದು, ಒಳಗೆ ಮಾಮೂಲಿ ಗಾಣದಂತೆ ಮರದ ಒರಳು ಇರಲಿದೆ. ಇದು ವಿದ್ಯುಚ್ಛಕ್ತಿಯಿಂದ ಮೋಟರ್ ಮೂಲಕ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಹೊರತುಪಡಿಸಿದರೆ ಮಾಮೂಲಿ ಗಾಣದ ರೀತಿಯಲ್ಲೇ ಇದರಲ್ಲಿ ಎಣ್ಣೆ ಬರಲಿದೆ. ನಮ್ಮ ಅಜ್ಜ-ಅಜ್ಜಿ ಗಾಣದ ಮೂಲಕ ತೆಗೆದ ಎಣ್ಣೆ ಎಷ್ಟು ಶುದ್ಧವಿರುತ್ತಿತ್ತೋ ಅಷ್ಟೇ ಶುದ್ಧ ಎಣ್ಣೆ ಇದರಿಂದ ಸಿಗುತ್ತದೆ. ಈ ಎಣ್ಣೆಯನ್ನು ಸೇವಿಸಿದರೆ ಒಂದು ತಿಂಗಳಲ್ಲೇ ಶುದ್ಧತೆಯ ಪ್ರಯೋಜನದ ಅನುಭವ ಆಗುತ್ತದೆ. ಮಾತ್ರವಲ್ಲ, ಈ ಗಾಣದ ಮೂಲಕ ಎಣ್ಣೆ ತೆಗೆದ ಬಳಿಕ ಸಿಗುವ ಹಿಂಡಿಯನ್ನು ಹಸುಗಳಿಗೆ ನೀಡಿದರೆ ಅವುಗಳಿಂದ ಸಿಗುವ ಹಾಲು ಹಾಗೂ ತುಪ್ಪದ ಗುಣಮಟ್ಟ ಕೂಡ ಹೆಚ್ಚುತ್ತದೆ ಎನ್ನುತ್ತಾರೆ ಕೃಷ್ಣಕುಮಾರ್.

    ಈ ಗಾಣ ಅಳವಡಿಕೆಗೆ ಬರೀ ನಾಲ್ಕಡಿ ಉದ್ದಗಲದ ಜಾಗ ಸಾಕು. ಮಾತ್ರವಲ್ಲ ಇದನ್ನು ಯಾವಾಗ ಬೇಕಿದ್ದರೂ ಒಂದು ಕಡೆಯಿಂದ ಮತ್ತೊಂದು ಕಡೆ ಇಟ್ಟು ಎಣ್ಣೆ ತೆಗೆಯಬಹುದು. ಹತ್ತು ಕೆ.ಜಿ. ಮತ್ತು ಇಪ್ಪತ್ತು ಕೆ.ಜಿ. ಸಾಮರ್ಥ್ಯದಲ್ಲಿ ಈ ಗಾಣ ಸಿಗುತ್ತದೆ. ಹತ್ತು ಕೆ.ಜಿ. ಕೊಬ್ಬರಿ ಹಾಕಿದರೆ 45ರಿಂದ 60 ನಿಮಿಷದಲ್ಲಿ ಎಣ್ಣೆ ಸಿಗಲಿದೆ. ಕೊಬ್ಬರಿ ಮಾತ್ರವಲ್ಲದೆ ಬಾದಾಮಿ, ಗೋಡಂಬಿ, ಗಸಗಸೆ, ಎಳ್ಳು, ಹರಳು ಎಲ್ಲದರಿಂದಲೂ ಇದರಲ್ಲಿ ಎಣ್ಣೆ ತೆಗೆಯಬಹುದು ಎಂದು ಗಾಣದ ಬಗ್ಗೆ ವಿವರಣೆ ನೀಡಿದರು ಕೃಷ್ಣಕುಮಾರ್.

    ಗಾಣಿಗ ಸಮಾಜದವರಿಗೆ 1 ಲಕ್ಷ ರೂ. ಡಿಸ್ಕೌಂಟ್

    ಹತ್ತು ಕೆ.ಜಿ. ಸಾಮರ್ಥ್ಯದ ಈ ಪವರ್ ಗಾಣಕ್ಕೆ 2.4 ಲಕ್ಷ ರೂಪಾಯಿ ಆಗಲಿದೆ. ಆದರೆ ಗಾಣಿಗ ಸಮಾಜದವರಿಗಾದರೆ ಬರೀ 1.4 ಲಕ್ಷ ರೂಪಾಯಿಗೆ ನೀಡುತ್ತೇವೆ. ನಮ್ಮ ಸಮಾಜದವರಿಗಾದರೆ ಉಚಿತ ಹೋಮ್ ಡೆಲಿವರಿ ಜೊತೆಗೆ ಉಚಿತವಾಗಿಯೇ ಎರಡು ದಿನದ ತರಬೇತಿ ಕೂಡ ನೀಡುತ್ತೇವೆ. ಬುಕ್ ಮಾಡಿದ ಒಂದು ತಿಂಗಳೊಳಗೆ ಗಾಣ ಲಭಿಸುತ್ತದೆ. ಸದ್ಯ ಕೊರೊನಾ ಹಾವಳಿ ಇದೆ. ಅದು ಸ್ವಲ್ಪ ಕಡಿಮೆ ಆಗಿ ನಮಗೆ ಕಚ್ಚಾವಸ್ತುಗಳು ಕಡಿಮೆ ದರದಲ್ಲಿ ಲಭಿಸಿದರೆ ಇನ್ನೂ ಕಡಿಮೆ ದರದಲ್ಲಿ ಗಾಣ ಒದಗಿಸುವ ಯೋಜನೆ ಇದೆ. ಬಹುಶಃ ಫೆಬ್ರವರಿ ಬಳಿಕ ಅದು ಸಾಧ್ಯವಾಗಬಹುದು ಎಂದು ಹೇಳುವ ಸಾಹು ಅವರು, ಫೆಬ್ರವರಿ ಬಳಿಕ ಇದನ್ನು ಬಲ್ಕ್ ಆಗಿ ತಯಾರಿಸಿ ಬ್ರ್ಯಾಂಡ್ ನೇಮ್ ಜೊತೆಗೆ ಒದಗಿಸುವ ಯೋಚನೆಯಲ್ಲೂ ಇರುವುದಾಗಿ ತಿಳಿಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!