Sunday, September 22, 2024
spot_img
More

    Latest Posts

    ಜನವರಿ 23-24ರಂದು ನಡೆಯಲಿದೆ ‘ಗಾಣಿಗ ಪ್ರೀಮಿಯರ್ ಕಪ್’

    ಬೆಂಗಳೂರು: ಕ್ರೀಡೆ ದೈಹಿಕ-ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಸಮಾಜ ಬಾಂಧವರನ್ನು ಬೆಸೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಪಂದ್ಯ ಹಲವಾರು ಭಾಗದಲ್ಲಿ ಚದುರಿಹೋಗಿರುವ ಸಮಾಜಬಾಂಧವರನ್ನು ಒಂದು ತಂಡವಾಗಿಸುತ್ತದೆ. ಮಾತ್ರವಲ್ಲ, ಅಂಥ ತಂಡಗಳೆಲ್ಲ ಒಂದೆಡೆ ಸೇರಿಸಿ, ಒಂದೊಳ್ಳೆಯ ಸಂಪರ್ಕ ಕಲ್ಪಿಸುತ್ತದೆ. ಅಂಥದ್ದೇ ಒಂದು ಒಗ್ಗೂಡಿಸುವ ಕೆಲಸಕ್ಕೆ ‘ಗಾಣಿಗ ಯುವ ಬಳಗ ಕುಮಟಾ’ ಮುಂದಾಗಿದೆ.

    ಕುಮಟಾ ಗಾಣಿಗ ಯುವ ಬಳಗದ ‘ಯೂತ್ ಗಾಣಿಗ’ ವಿಭಾಗವು ಮೂರನೇ ವರ್ಷದ ‘ಗಾಣಿಗ ಪ್ರೀಮಿಯರ್ ಕಪ್’ ಆಯೋಜಿಸಿದೆ. ಈ ‘ಗಾಣಿಗ ಪ್ರೀಮಿಯರ್ ಕಪ್’ 2021ರ ಜನವರಿ 23 ಮತ್ತು 24ರಂದು ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ 8 ತಂಡಗಳಿಗೆ ಮಾತ್ರ ಅವಕಾಶ ಇರುವುದರಿಂದ ಮೊದಲು ನೋಂದಾಯಿಸಿಕೊಂಡ ತಂಡಗಳಿಗೆ ಆದ್ಯತೆ ನೀಡಲಾಗುವುದು. ವಿಜೇತ ತಂಡಗಳಿಗೆ ನಗದು ಬಹುಮಾನ ಇರಲಿದೆ. ಪ್ರಥಮ ಬಹುಮಾನವಾಗಿ 33,333 ರೂ., ದ್ವಿತೀಯ ಬಹುಮಾನವಾಗಿ 22,222 ರೂ. ವಿಜೇತ ತಂಡಕ್ಕೆ ಲಭಿಸಲಿದೆ. ಆಸಕ್ತರು ತಂಡವನ್ನು ನೋಂದಾಯಿಸಲು ಈ ಕೆಳಗೆ ನಮೂದಿಸಲಾಗಿರುವ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ಪ್ರತಿ ತಂಡಕ್ಕೆ 3 ಸಾವಿರ ರೂಪಾಯಿ ಪ್ರವೇಶ ಶುಲ್ಕ ಇರಲಿದೆ ಎಂದು ಕುಮಟಾ ಗಾಣಿಗ ಯುವ ಬಳಗದ ಅಧ್ಯಕ್ಷ ಸುನೀಲ್ ಶೆಟ್ಟಿ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ನವಿಲುಗೋಣ ತಿಳಿಸಿದ್ದಾರೆ.

    • ಸುಬ್ರಹ್ಮಣ್ಯ ಶೆಟ್ಟಿ: 9739550108
    • ಗಣಪತಿ ಶೆಟ್ಟಿ: 9742919507
    • ಆನಂದ್ ಕೆಕ್ಕಾರ್: 8746939999

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!