Saturday, September 21, 2024
spot_img
More

    Latest Posts

    ‘ಗಾಣಿಗ ಪ್ರೀಮಿಯರ್ ಕಪ್’ ಮೂರನೇ ವರ್ಷದ ಪಂದ್ಯಾವಳಿ ನಾಳೆ ಉದ್ಘಾಟನೆ

    ಬೆಂಗಳೂರು: ಯೂಥ್ ಗಾಣಿಗ ಕುಮಟಾ ಆಯೋಜಿಸಿರುವ ಮೂರನೇ ವರ್ಷದ ‘ಗಾಣಿಗ ಪ್ರೀಮಿಯರ್ ಕಪ್’ ಪಂದ್ಯಾವಳಿಗೆ ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ದಾಮೋದರ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕುಮಟಾದ ಉದ್ಯಮಿ ರಮೇಶ ಶೆಟ್ಟಿ ನಾಳೆ ಚಾಲನೆ ನೀಡಲಿದ್ದಾರೆ. ಒಟ್ಟು ಎರಡು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿ ಜ. 24ರ ಭಾನುವಾರ ಸಂಜೆ 5 ಗಂಟೆಗೆ ಸಮಾರೋಪಗೊಳ್ಳಲಿದೆ.

    ಜನವರಿ 23ರ ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕುಮಟಾ ಶ್ರೀರಾಮಚಂದ್ರ ಪತ್ತಿನ ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ಶ್ರೀಧರ ಕೆ. ಶೆಟ್ಟಿ ಧ್ವಜಾರೋಹಣ ಮಾಡಲಿದ್ದಾರೆ. ಉದ್ಯಮಿ ಗಣಪತಿ ಶೆಟ್ಟಿ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ‌ಮಟ್ಟದ ಕರಾಟೆ ಚಾಂಪಿಯನ್‌ ಪ್ರಜ್ವಲ್ ಪ್ರದೀಪ್ ಶೆಟ್ಟಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇರಲಿದೆ.

    ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ಮಹೇಶ ಶೆಟ್ಟಿ, ಜಿಲ್ಲಾ ಗಾಣಿಗರ ಸಂಘದ ಕಾರ್ಯದರ್ಶಿ ಗಜಾನನ ವಿ. ಶೆಟ್ಟಿ, ಗೋಕರ್ಣ ಜನತಾ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಪದ್ಮನಾಭ ಶೆಟ್ಟಿ, ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದ ಜನರಲ್ ಮ್ಯಾನೇಜರ್ ಮಹೇಶ ಎಸ್. ಶೆಟ್ಟಿ ಆಗಮಿಸಲಿರುವರು. ಗಾಣಿಗ ಕಪ್ ಕಮಿಟಿ ಅಧ್ಯಕ್ಷ ಸುನೀಲ್ ಶೆಟ್ಟಿ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಉಪಸ್ಥಿತರಿರುವರು. ಮಧ್ಯಾಹ್ನ 2 ಗಂಟೆಗೆ ವಿಶೇಷ ಆಕರ್ಷಣೆ ಆಗಿ ಲೂಡೋ ಮ್ಯಾಚ್ ಇರಲಿದೆ.

    ಸಮಾರೋಪ ಸಮಾರಂಭ: ಭಾನುವಾರ ಕುಮಟಾ ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಅಧ್ಯಕ್ಷತೆ ಹಾಗೂ ಮಾಜಿ ಶಾಸಕಿ ಶಾರದಾ ಎಂ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇಂಡಿಯಾ ಕಾಸ್ಟ್ ಅಸೋಸಿಯೇಟ್ ಡೈರೆಕ್ಟರ್ ಎ.ಪಿ.ಗಿರೀಶ, ಹೊಸಾಕುಳಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕವಲಕ್ಕಿ ರವಿ ಶೆಟ್ಟಿ ಬಹುಮಾನ ವಿತರಣೆ ಮಾಡಲಿದ್ದಾರೆ.

    ಉದ್ಯಮಿಗಳಾಗಿರುವ ರತ್ನಾಕರ ಎಸ್. ಶೆಟ್ಟಿ, ಜಗನ್ನಾಥ ಜಿ. ಶೆಟ್ಟಿ ಹುಬ್ಬಳ್ಳಿ, ರವಿಕುಮಾರ ಮೋಹನ ಶೆಟ್ಟಿ, ಉಪನ್ಯಾಸಕ ಮಂಜುನಾಥ ರಾಮ ಶೆಟ್ಟಿ, ಕಾರವಾರ ಜನತಾ ಕೋ ಆಪರೇಟಿವ್ ಸೊಸೈಟಿ ಸೀನಿಯರ್ ಮ್ಯಾನೇಜರ್ ಸುದರ್ಶನ ಎಂ. ಶೆಟ್ಟಿ, ಅಘನಾಶಿನಿ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ ಅಶೋಕ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.

    ಸಮಾಜ ಬಾಂಧವರು, ಕ್ರೀಡಾಪ್ರೇಮಿಗಳು ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯೂಥ್ ಗಾಣಿಗ ಸಮಿತಿ ಅಧ್ಯಕ್ಷ ಸುನೀಲ್ ಶೆಟ್ಟಿ ದೊಡ್ಮನೆ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ನವಿಲುಗೋಣ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಹಾಗೂ ಖಜಾಂಚಿ ಆನಂದ ಕೆಕ್ಕಾರ ಮನವಿ ಮಾಡಿಕೊಂಡಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!