Saturday, September 21, 2024
spot_img
More

    Latest Posts

    ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪುನರಾರಂಭ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆಯನ್ನು ಪುನಃ ಆರಂಭಿಸಲಾಗಿದೆ. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಕೋವಿಡ್ ಮಾರ್ಗಸೂಚಿಗೆ ಅನುಸಾರ ಅನ್ನಸಂತರ್ಪಣೆ ಸ್ಥಗಿತಗೊಳಿಸಲಾಗಿತ್ತು. ಈಗ ಕೊರೊನಾ ಹಾವಳಿ ತಗ್ಗಿರುವುದರಿಂದ ಹಾಗೂ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಸೇರಿ ಎಲ್ಲ ಸೇವೆಗಳನ್ನೂ ಮರು ಆರಂಭಿಸಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯನ್ನು ಕೂಡ ಹೊರಡಿಸಿರುವುದರಿಂದ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿನ ಅನ್ನಸಂತರ್ಪಣೆ ಮತ್ತೆ ಆರಂಭಗೊಂಡಿದೆ.

    ಬಾರ್ಕೂರಿನ ಮೂಡುಕೇರಿಯಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿನ ಅನ್ನಸಂತರ್ಪಣೆಗೆ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ನೂತನ ಅಧ್ಯಕ್ಷ ವಾಸುದೇವ ಬೈಕಾಡಿ ಅವರು ಫೆ.8ರ ಸೋಮವಾರ ಚಾಲನೆ ನೀಡಿದರು. ಕೊರೊನಾದಿಂದಾಗಿ ಅನ್ನಸಂತರ್ಪಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ್ದು ಅನಿವಾರ್ಯವಾಗಿತ್ತು. ಆದರೆ ಈಗ ಎಲ್ಲೆಡೆ ಪರಿಸ್ಥಿತಿ ಬಹುತೇಕ ಸುಧಾರಿಸಿಕೊಂಡಿದ್ದು, ಕೊರೊನಾ ಆತಂಕ ಕೂಡ ಕಡಿಮೆ ಆಗಿರುವುದರಿಂದ ಅನ್ನಸಂತರ್ಪಣೆಯನ್ನು ಪುನಃ ಆರಂಭಿಸಲಾಗಿದೆ ಎಂದು ವಾಸುದೇವ ಬೈಕಾಡಿ ಅವರು ಹೇಳಿದರು.

    ಅನ್ನಸಂತರ್ಪಣೆಗೆ ಚಾಲನೆ ನೀಡಿದ ಬಳಿಕ ಸೂಕ್ತ ನಿರ್ವಹಣೆಗಾಗಿ ಸಂಘದ ಪದಾಧಿಕಾರಿಗಳಿಂದ ಸಮಾಲೋಚನೆ.

    ಅನ್ನಸಂತರ್ಪಣೆ ಪುನರಾರಂಭದಿಂದಾಗಿ ಇನ್ನುಮುಂದೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಹೊತ್ತು ಈ ಹಿಂದಿನಂತೆಯೇ ಅನ್ನ ಪ್ರಸಾದ ಲಭಿಸಲಿದೆ. ಅಲ್ಲದೆ ಬಾರ್ಕೂರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆಯ್ದ 50 ಬಡ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ ಆಗುತ್ತಿದೆ. ಶ್ರೀ ವೇಣುಗೋಪಾಲಕೃಷ್ಣ ಹಾಗೂ ಶ್ರೀ ಅನ್ನಪೂರ್ಣೇಶ್ವರಿಯ ಪ್ರಸಾದ ರೂಪದಲ್ಲಿ ಈ ಅನ್ನಸಂತರ್ಪಣೆ ನೆರವೇರುತ್ತಿದ್ದು, ಇದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಭಕ್ತರು ಸೇವೆಯ ರೂಪದಲ್ಲಿ ನೀಡಬಹುದು. ಅಲ್ಲದೆ ಭಕ್ತರು ಮನೆಯಲ್ಲಿ ಬೆಳೆದ ತರಕಾರಿಗಳನ್ನು ಕೂಡ ದೇಗುಲದ ಈ ಪ್ರಸಾದ ಸೇವೆಗೆ ಅರ್ಪಿಸಬಹುದು ಎಂದು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ ತಿಳಿಸಿದರು.

    ಅನ್ನಸಂತರ್ಪಣೆ ಸಂದರ್ಭ ಸಾಲಾಗಿ ನಿಂತಿರುವ ವಿದ್ಯಾರ್ಥಿಗಳು

    ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಜತೆ ಕಾರ್ಯದರ್ಶಿ ರಾಮಕೃಷ್ಣ ಹಾರಾಡಿ, ಆಡಳಿತ ಮಂಡಳಿ ಸದಸ್ಯರಾದ ರವಿ ಮಹಾಬಲ ಗಾಣಿಗ, ಜಯರಾಮ್ ಉಡುಪಿ ಹಾಗೂ ದೇಗುಲದ ಅರ್ಚಕ ಗುರುರಾಜ್ ಭಟ್, ಸದಾಶಿವ ಭಟ್ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ

    ಸಂಬಂಧಿತ ಸುದ್ದಿ: ಬಾರ್ಕೂರು ಗಾಣಿಗ ಸಂಘದ ಅಧ್ಯಕ್ಷರಾಗಿ ವಾಸುದೇವ ಬೈಕಾಡಿ ಅವಿರೋಧ ಆಯ್ಕೆ 

    ಸಂಬಂಧಿತ ಸುದ್ದಿ: ತಿರುಪತಿ ವೆಂಕಟೇಶ್ವರನಾಗಿ ಕಂಗೊಳಿಸಿದ ಬಾರ್ಕೂರು ವೇಣುಗೋಪಾಲಕೃಷ್ಣ 

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ದೀಪ-ಸಂಭ್ರಮ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!