Saturday, September 21, 2024
spot_img
More

    Latest Posts

    ಗಾಣಿಗರಿಗೆ ಪ್ರತ್ಯೇಕ ಅನುದಾನ ಮಂಜೂರು ಮಾಡುವಂತೆ ಸಿಎಂ ಬಿಎಸ್‌ವೈಗೆ ‘ಬಿಜೆಪಿ’ ಮನವಿ

    ಬೆಂಗಳೂರು: ಗಾಣಿಗರಿಗೆ ಪ್ರತ್ಯೇಕ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಬಿಜೆಪಿ’ ಅರ್ಥಾತ್ ಬಿ.ಜೆ. ಪುಟ್ಟಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿರುವ ಬಿ‌.ಜೆ. ಪುಟ್ಟಸ್ವಾಮಿ ಅವರು ಮಹಾಶಿವರಾತ್ರಿ ದಿನವಾದ ಮಾ.11ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

    ಬೇಡಿಕೆ ಈಡೇರಿಲ್ಲ: ಸಿಎಂ ಬಿಎಸ್‌ವೈ ಅವರು ಮಂಡಿಸಿರುವ 2021-22ನೇ ಸಾಲಿನ ಬಜೆಟ್‌ ಬಗ್ಗೆ ಮೆಚ್ಚುಗೆ ಸೂಚಿಸಿರುವ ಬಿ.ಜೆ. ಪುಟ್ಟಸ್ವಾಮಿ, ಹಿಂದುಳಿದ ವರ್ಗಗಳ ಸಮುದಾಯಗಳ ಪರವಾಗಿ ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕೆಲವು ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ನೀಡಿರುತ್ತೀರಿ‌. ಸಮಾಜದಲ್ಲಿ ಅತ್ಯಂತ ಸಣ್ಣ ಹಾಗೂ ದನಿ ಇರದ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ಅಂಥ ಸಮುದಾಯಗಳಿಗೆ ಸ್ವತಂತ್ರವಾಗಿ ಹಣ ನೀಡಬೇಕು ಎಂಬುದಾಗಿ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಕೋರಿಕೊಂಡಿದ್ದೆನು. ಆದರೆ ಆ ಬೇಡಿಕೆ ಈಡೇರಿಲ್ಲ. ಹೀಗಾಗಿ ಸ್ವತಂತ್ರ ಅಭಿವೃದ್ಧಿ ನಿಗಮ ಇರದ ಸಮುದಾಯಗಳಿಗೆ ಆಯಾ ಸಮುದಾಯಗಳ ಹೆಸರಿನಲ್ಲಿ ಆಯವ್ಯಯಕ್ಕೆ ಉತ್ತರ ನೀಡುವ ಸಮಯದಲ್ಲಿ ಅನುದಾನ ಘೋಷಣೆ ಮಾಡಬೇಕು ಎಂದು ಕೋರಿದರು.

    ಗಾಣಿಗ, ಬಲಿಜ, ಕುಂಬಾರ, ನೇಕಾರ/ದೇವಾಂಗ, ಕ್ಷತ್ರಿಯ, ತಿಗಳ, ಮೊದಲಿಯಾರ್/ನಾಯರ್ ಹಾಗೂ ವರ್ಗ 1 ಮತ್ತು 2ರಲ್ಲಿ ಬರುವ ಅತ್ಯಂತ ಸಣ್ಣ ಇತರ 200 ಸಮುದಾಯಗಳಿಗೆ ಅನುದಾನ ಘೋಷಿಸಬೇಕು ಎಂದು ಕೋರಿ ಬಿಎಸ್‌ವೈಗೆ ‘ಬಿಜೆಪಿ’ ಮನವಿ ಪತ್ರ ನೀಡಿದ್ದಾರೆ.

    ಸಂಬಂಧಿತ ಸುದ್ದಿ: ಬಿ.ಜೆ. ಪುಟ್ಟಸ್ವಾಮಿ, ಪಿ.ಜೆ. ರಾಮಮೋಹನ್ ಅವರಿಗೆ ಸನ್ಮಾನ 

    ಸಂಬಂಧಿತ ಸುದ್ದಿ: ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಬಿ.ಜೆ. ಪುಟ್ಟಸ್ವಾಮಿ ಮನವಿ 

    ಸಂಬಂಧಿತ ಸುದ್ದಿ: ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಶ್ರೀ ಕಲ್ಲಿನಾಥ ಸ್ವಾಮೀಜಿ ಮನವಿ 

    ಸಂಬಂಧಿತ ಸುದ್ದಿ: ರಾಜ್ಯ ಯೋಜನಾ ಮಂಡಳಿಗೆ ಹೊಸ ಹೆಸರು, ಹೊಸ ಕಸುವು 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!