Saturday, September 21, 2024
spot_img
More

    Latest Posts

    ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಾಗಿ ಕರಿಯರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್

    ಬೆಂಗಳೂರು: ಗಾಣಿಗ ಸಮಾಜಕ್ಕಾಗಿ ಈಗಾಗಲೇ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿರುವ ಶ್ರೀ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ (ಎಸ್‌ಜಿಇಸಿಟಿ) ಇದೀಗ ಸಮಾಜದ ವಿದ್ಯಾರ್ಥಿಗಳಿಗಾಗಿ ಕರಿಯರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ ನಡೆಸಲು ಮುಂದಾಗಿದೆ.

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗ ಬಯಸುವ ವಿದ್ಯಾರ್ಥಿಗಳಿಗಾಗಿ ಕರಿಯರ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮವನ್ನು ನಡೆಸಲು ಎಸ್‌ಜಿಇಸಿಟಿ ಯೋಜನೆ ಹಾಕಿಕೊಂಡಿದೆ. ವಾರಾಂತ್ಯಗಳಲ್ಲಿ ನಡೆಸಲಿರುವ ಈ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಈ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಸಮರ್ಥ ಸಂಪನ್ಮೂಲ ವ್ಯಕ್ತಿಗಳು ಸಮುದಾಯದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಯುಪಿಎಸ್‌ಸಿ, ಕೆಪಿಎಸ್‌ಸಿ ಮಾತ್ರವಲ್ಲದೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವುದು.

    ಗಾಣಿಗ ಸಮಾಜದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ, ಇದರ ಪ್ರಯೋಜನ ಪಡೆಯಬಹುದಾಗಿದೆ. ಆನ್‌ಲೈನ್‌ ಕರಿಯರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ ಕುರಿತ ಹೆಚ್ಚಿನ ಮಾಹಿತಿಗಾಗಿ ಎಸ್‌ಜಿಇಸಿಟಿಯ ಟ್ರಸ್ಟೀ ಮತ್ತು ಸಂಚಾಲಕ ಎನ್‌.ಯು. ಸಂದೇಶ್‌ (ಬಿಇ, ಎಂ.ಟೆಕ್‌-ಪಿಎಚ್‌.ಡಿ) ಇವರನ್ನು ಸಂಪರ್ಕಿಸಬಹುದು. ಕರೆ ಮಾಡಬೇಕಾದ ಮೊಬೈಲ್‌ಫೋನ್‌ ಸಂಖ್ಯೆ 8951123424.

    ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಗೂಗಲ್‌ ಫಾರ್ಮ್‌ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್‌ 30. ನೋಂದಣಿ ಬಳಿಕ ಈ ಕೆಳಗೆ ನೀಡಲಾಗಿರುವ ವಾಟ್ಸ್ಯಾಪ್‌ ಗ್ರೂಪ್‌ ಲಿಂಕ್‌ ಮೂಲಕ ಗ್ರೂಪನ್ನು ಸೇರಿಕೊಳ್ಳಬೇಕು. ಹಾಗೆಯೇ ಎಸ್‌ಜಿಇಸಿಟಿ ಯೂ-ಟ್ಯೂಬ್‌ ಚಾನೆಲ್‌ಗೂ ಸಬ್‌ಸ್ಕೈಬ್‌ ಮಾಡಿಕೊಂಡು ಆಗಾಗ ಅಪ್‌ಡೇಟ್‌ ಪಡೆಯಬಹುದು ಎಂಬುದಾಗಿ ಎಸ್‌ಜಿಇಸಿಟಿ ಮ್ಯಾನೇಜಿಂಗ್‌ ಟ್ರಸ್ಟೀ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ಆರ್.‌ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಗೂಗಲ್‌ ಫಾರ್ಮ್‌ ಲಿಂಕ್: https://forms.gle/WfNg1EwDovuUYCJ69

    ವಾಟ್ಸ್ಯಾಪ್‌ ಗ್ರೂಪ್‌ ಲಿಂಕ್: https://chat.whatsapp.com/EqkITnv7RTDD3OPaqBVLPM

    ಎಸ್‌ಜಿಇಸಿಟಿ ಯೂ-ಟ್ಯೂಬ್‌ ಚಾನೆಲ್ ಲಿಂಕ್: https://www.youtube.com/channel/UCRo4RytTvccYMB_J5pDhu-Q?sub_confirmation=1

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    G-Mail ID:‌ [email protected]

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ ಮಹಾಸಭೆ, ನೂರಾರು ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ‘ವಿದ್ಯಾಜ್ಯೋತಿ’ ಪ್ರಶಸ್ತಿ ಪ್ರದಾನ 

    ಸಂಬಂಧಿತ ಸುದ್ದಿ: ಬಾಗೇಪಲ್ಲಿ ತಾಲೂಕು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ

    ಸಂಬಂಧಿತ ಸುದ್ದಿ: ನಾಲ್ಕು ಜಿಲ್ಲೆಗಳ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!