Sunday, September 22, 2024
spot_img
More

    Latest Posts

    ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್

    ಬೆಂಗಳೂರು: ನಿರ್ದೇಶಕ ಭರತ್‌ ಎಸ್.‌ ನಾವುಂದ ಇದೀಗ ಯುಗಾದಿಯಂದು ಬೇವು-ಬೆಲ್ಲದ ಜೊತೆ ಟೀಸರ್‌ ಕೂಡ ಕೊಟ್ಟಿದ್ದಾರೆ. ಅರ್ಥಾತ್‌ ಭರತ್ ನಾವುಂದ ನಿರ್ದೇಶನದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನುರಂಜನ್‌ ರವಿಚಂದ್ರನ್‌- ನೂತನ ನಟಿ ಕಯಾದು ಮೋಹನ್‌ ಲೋಹರ್‌ ಅಭಿನಯದ ‘ಮುಗಿಲ್‌ ಪೇಟೆ’ ಚಿತ್ರದ ಟೀಸರ್‌ ಇದೇ ಯುಗಾದಿಯಂದು ಅಂದರೆ ಏ. ೧೩ರಂದು ಬಿಡುಗಡೆ ಆಗಿದೆ.

    ಇದು ಭರತ್‌ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಮನುರಂಜನ್‌ ಅವರ ಮೂರನೇ ಸಿನಿಮಾ. ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿರುವ ಭರತ್‌, ಕೊರೊನಾ ಅಡಚಣೆ ನಡುವೆಯೂ ತಮ್ಮ ಎರಡನೇ ಸಿನಿಮಾ ‘ಮುಗಿಲ್‌ ಪೇಟೆ’ಯ ಚಿತ್ರೀಕರಣ ಮುಗಿಸಿದ್ದು, ಇದೀಗ ಟೀಸರ್‌ ಕೂಡ ಬಿಟ್ಟಿದ್ದಾರೆ.

    ನಿರ್ದೇಶಕ ಭರತ್‌ ನಾವುಂದ

    ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಮನುರಂಜನ್‌ ಅವರು ಮೂರು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಗಡ್‌ ಹಾಗೂ ಲವರ್‌ ಬಾಯ್‌ ಎರಡು ಲುಕ್‌ಗಳ ಬಗ್ಗೆ ಮಾಹಿತಿ ನೀಡಿರುವ ಭರತ್‌, ಮೂರನೇ ಲುಕ್‌ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ್ದರಿಂದ ಕುತೂಹಲ ಮೂಡಿದೆ. ವಿಶೇಷವೆಂದರೆ ಇದಕ್ಕೂ ಮೊದಲು ಮನೋರಂಜನ್‌ ರವಿಚಂದ್ರನ್‌ ಆಗಿದ್ದ ಜೂನಿಯರ್ ಕ್ರೇಜಿಸ್ಟಾರ್‌ ಈ ಚಿತ್ರದ ಮೂಲಕ ಹೆಸರು ಬದಲಿಸಿಕೊಂಡು ಮನುರಂಜನ್‌ ರವಿಚಂದ್ರನ್‌ ಆಗಿದ್ದಾರೆ. ‘ಮುಗಿಲ್‌ ಪೇಟೆ’ ಮೂಲಕ ಅವರು ತಮ್ಮ ಬದಲಾದ ಹೆಸರಿನಲ್ಲಿ ಎಂದರೆ ಮನುರಂಜನ್‌ ರವಿಚಂದ್ರನ್‌ ಎಂದೇ ಗುರುತಿಸಿಕೊಳ್ಳಲಿದ್ದಾರೆ.

    ಮುಗಿಲ್‌ ಪೇಟೆ ಚಿತ್ರದ ನಾಯಕ ಮನುರಂಜನ್‌ ರವಿಚಂದ್ರನ್

    ಈ ಸಿನಿಮಾದ ನಾಯಕಿಯ ಪಾತ್ರಕ್ಕಾಗಿ ಅಸ್ಸಾಮಿ ಬೆಡಗಿಯನ್ನು ಕರೆದುಕೊಂಡು ಬಂದಿರುವ ಭರತ್‌, ‘ಮುಗಿಲ್‌ ಪೇಟೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಟಿಯೊಬ್ಬರನ್ನು ಪರಿಚಯಿಸಿದ್ದಾರೆ. ಕನ್ನಡದಲ್ಲಿ ಇದು ಕಯಾದು ಅವರ ಮೊದಲ ಸಿನಿಮಾ ಆಗಿದ್ದು, ಚಿತ್ರೀಕರಣ ಆರಂಭಕ್ಕೂ ಮುನ್ನವೇ ನಾಯಕಿಗೆ ಕನ್ನಡ ಕಲಿಯುವಂತೆ ಮಾಡಿ, ಅದಕ್ಕಾಗಿ ತರಗತಿ ವ್ಯವಸ್ಥೆಯನ್ನೂ ಮಾಡಿದ ಹೆಗ್ಗಳಿಕೆ ನಿರ್ದೇಶಕ ಭರತ್‌ ಅವರದು.

    ಮುಗಿಲ್‌ ಪೇಟೆ ಚಿತ್ರದ ನಾಯಕಿ ಕಯಾದು ಲೋಹರ್‌

    ಸುಂದರ ಪರಿಸರದ ರಮಣೀಯ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಇದಕ್ಕೆಂದೇ ಕೊಲ್ಲೂರು ಬಳಿಯ ಕೊಡಚಾದ್ರಿಯಲ್ಲಿ ‘ಮುಗಿಲ್‌ ಪೇಟೆ’ಯ ವಿಶೇಷ ಸೆಟ್‌ ಕೂಡ ಹಾಕಿಸಿ ಶೂಟಿಂಗ್‌ ನಡೆಸಿದ್ದಾರೆ ಭರತ್.‌ ಅವರ ಈ ಮತ್ತೊಂದು ಸಾಹಸಕ್ಕೆ ‘ಗ್ಲೋಬಲ್‌ ಗಾಣಿಗ’ ಅಭಿನಂದನೆ ಸಲ್ಲಿಸುತ್ತಿದ್ದು, ‘ಮುಗಿಲ್‌ ಪೇಟೆ’ ತಂಡಕ್ಕೆ ಶುಭವನ್ನೂ ಹಾರೈಸುತ್ತಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    G-Mail ID: [email protected]

    ಮುಗಿಲ್‌ ಪೇಟೆ ಚಿತ್ರದ ಟೀಸರ್‌ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್ಕಿಸಿ.

    ಸಂಬಂಧಿತ ಸುದ್ದಿ: ಎರಡೆರಡು ಗನ್‌ನಲ್ಲಿ ಲುಕ್ ಕೊಟ್ಟ ಗುರು; ದತ್ತ ಈಗ 1999ರತ್ತ… 

    ಸಂಬಂಧಿತ ಸುದ್ದಿ: ಅಭಿನಯದ ಅಲೆಗಳಲ್ಲಿ ‘ತೇಲಿ’ಸಿದ್ದ ನಟ ಶನಿಮಹದೇವಪ್ಪ ಇನ್ನು ಬರೀ ನೆನಪು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!