Sunday, September 22, 2024
spot_img
More

    Latest Posts

    ಕೂತು ತಿಂದರೂ ಸವೆಯದ ಆಸ್ತಿ ಮಾಡಿದ ಬರಿಗೈ ಮಾಲೀಕ!

    ಬೆಂಗಳೂರು: ‘ಬರಿಗೈ ಮಾಲೀಕ ಕೂತು ತಿಂದರೂ ಸವೆಯದಂಥ ಆಸ್ತಿ ಮಾಡಿದ’ ಎಂದರೆ ಅದೇನೂ ತಮಾಷೆಯ ಸಂಗತಿಯಲ್ಲದಿದ್ದರೂ, ಅಂಥ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಆದರೆ ನಾವು ಇಲ್ಲಿ ಹೇಳುತ್ತಿರುವುದು ಬೇರೆಯದೇ ವಿಷಯ. ಇಲ್ಲಿಯೂ ಬರಿಗೈ ಮಾಲೀಕ ಕೂತು ತಿಂದರೂ ಸವೆಯದ ಆಸ್ತಿ ಮಾಡಿದ್ದಾನೆ. ಅಸಲಿಗೆ ಇದು ತಮಾಷೆಯ ಸಂಗತಿಯೇ. ಅದಾಗ್ಯೂ ಈ ತಮಾಷೆಯಲ್ಲಿ ಸಂತೋಷವಿದೆ, ಸಂದೇಶವೂ ಇದೆ.

    ನಿಜ.. ನಾವೀಗ ಹೇಳಲು ಹೊರಟಿರುವುದು ನೈಜ ಸಂಗತಿಯಲ್ಲ. ಆದರೆ ಈ ಕಾಲ್ಪನಿಕ ದೃಶ್ಯಾವಳಿಯಲ್ಲೂ ನೈಜತೆ ಇದೆ. ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ನಿಜಜೀವನಕ್ಕೆ ಹತ್ತಿರವಾದ ವಾಸ್ತವ ಅಂಶವಿದೆ. ಇಂಥ ಕಟುವಾಸ್ತವದಲ್ಲೂ ಮನುಷ್ಯ ನಿತ್ಯ ಆನಂದವಾಗಿರಬೇಕು ಎಂಬ ಸೂಕ್ಷ್ಮ ಸಂದೇಶವೂ ಇದೆ. ಇಷ್ಟೆಲ್ಲ ಹೇಳಬೇಕಾಗಿರುವುದು ಉಜಿರೆಯ ಎಸ್​ಡಿಎಂ ಕಾಲೇಜ್ ಆಫ್ ಎಜುಕೇಷನ್​ನ ಪ್ರಾಂಶುಪಾಲ, ಪ್ರೊ. ನಿತ್ಯಾನಂದ ಕೃಷ್ಣ ಹಾಗೂ ಅವರ ಪುತ್ರ ಪ್ರಧಾನ್ ನಂದ ಅವರು ಇತ್ತೀಚೆಗೆ ಮಾಡಿರುವ ಕಿರುಚಿತ್ರಗಳ ಕುರಿತು.

    ಪ್ರಧಾನ್ ನಂದ, ನಿತ್ಯಾನಂದ ಕೃಷ್ಣ

    ಪ್ರಧಾನ್ ನಂದ ತಮ್ಮ ಯೂ-ಟ್ಯೂಬ್ ಚಾನೆಲ್​​ನಲ್ಲಿ ಕಿರುಚಿತ್ರಗಳನ್ನು ಮಾಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ತಂದೆ-ಮಗನ ಜೋಡಿಯೇ ಇದರಲ್ಲಿ ಅಭಿನಯಿಸುತ್ತಿದ್ದು, ಚಿಕ್ಕಚಿಕ್ಕ ವಿಷಯಗಳನ್ನೇ ಆರಿಸಿಕೊಂಡು ಚೊಕ್ಕದಾಗಿ ಒಂದು ಮನರಂಜನಾತ್ಮಕ ಕಿರುಚಿತ್ರವನ್ನಾಗಿಸಿ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಗಮನ ಸೆಳೆಯುವಂಥದ್ದು ಒಂದು ‘ಬರಿಗೈ ಮಾಲೀಕ’ ಹಾಗೂ ಇನ್ನೊಂದು ‘ಕೂತು ತಿಂದರೂ ಸವೆಯದ ಆಸ್ತಿ’ ಎಂಬ ಎರಡು ಕಿರುಚಿತ್ರಗಳು.

    ಕೂಲಿಯಾಳುಗಳಿಂದ ಕೆಲಸ ಮಾಡಿಸಿಕೊಳ್ಳುವವರ ಸ್ವಾರ್ಥ, ಕೆಲಸಕ್ಕೆ ತಕ್ಕ ಸಂಬಳ ಕೇಳಿದಾಗ ಅವರು ತೋರುವ ಉಡಾಫೆತನವನ್ನು ‘ಬರಿಗೈ ಮಾಲೀಕ’ ಕಿರುಚಿತ್ರದಲ್ಲಿ ಹೇಳಿರುವ ಈ ಜೋಡಿ, ಕೊನೆಗೆ ಒಂದು ಪ್ರಮುಖ ಪ್ರಶ್ನೆ ಕಾಡುವಂತೆ ಕ್ಲೈಮ್ಯಾಕ್ಸ್​ ಸೃಷ್ಟಿಸಿ, ಚಿಂತನೆಗೆ ಹಚ್ಚುವಂತೆ ಮುಗಿಸಿದ್ದಾರೆ. ಈ ಲಾಕ್​ಡೌನ್​ ಅವಧಿಯಲ್ಲಿ ಕೆಲಸ ಕಳೆದುಕೊಂಡ, ಉದ್ಯೋಗದಾತರೇ ನಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಕೆಲಸ ಮಾಡಿದರೂ ಸಂಬಳ ಸಿಗುವುದೇ ಕಷ್ಟವಾಗಿರುವಂಥ ಈಗಿನ ಪರಿಸ್ಥಿತಿಯನ್ನು ಬಿಂಬಿಸುವಂತಿದ್ದಾನೆ ಈ ‘ಬರಿಗೈ ಮಾಲೀಕ’.

    ಇನ್ನು ‘ಕೂತು ತಿಂದರೂ ಸವೆಯದ ಆಸ್ತಿ’ ಕಿರುಚಿತ್ರದಲ್ಲಿ ಆಸ್ತಿ-ಅಂತಸ್ತುಗಳ ಕುರಿತು ತಮಾಷೆಯಾಗಿಯೇ ಹೇಳುವ ಜೊತೆಗೆ ಮುಖ ನೋಡಿ ಮಣೆ ಹಾಕಬಾರದು ಎಂಬ ಗಾದೆಯನ್ನೂ ನೆನಪಿಸುತ್ತಾರೆ. ಒಟ್ಟಿನಲ್ಲಿ ಈ ತಂದೆ-ಮಗ ಜೋಡಿಯ ಸೃಜನಶೀಲತೆ ಮನರಂಜನೆ ನೀಡುತ್ತಿದ್ದು, ಮೆಚ್ಚುಗೆಯನ್ನೂ ಗಳಿಸುತ್ತಿದೆ. ಅವರ ಈ ಕಿರುಚಿತ್ರಗಳನ್ನು ನೀವೂ ನೋಡಿ ಆನಂದಿಸಿ, ಪ್ರೋತ್ಸಾಹಿಸಿ. ಇವರಿಂದ ಇಂಥ ಮತ್ತಷ್ಟು ಸೃಜನಾತ್ಮಕ ವಿಡಿಯೋಗಳು ಮೂಡಿಬರಲಿ ಎಂದು ಗ್ಲೋಬಲ್ ಗಾಣಿಗ ಹಾರೈಸುತ್ತಿದೆ.

    ಬರಿಗೈ ಮಾಲೀಕ

    ಕೂತು ತಿಂದರೂ ಮುಗಿಯದ ಆಸ್ತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!