Sunday, September 22, 2024
spot_img
More

    Latest Posts

    ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಆನ್‌ಲೈನ್ ಸ್ಪರ್ಧೆ

    ಬೆಂಗಳೂರು: ಭಟ್ಕಳ ತಾಲೂಕು ಗಾಣಿಗ ಸೇವಾ ಸಂಘವು ಭಟ್ಕಳದ ಶ್ರೀಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಹಾಗೂ ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮೋತ್ಸವ-2021 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಆನ್‌ಲೈನ್ ಸ್ಪರ್ಧೆ ಆಯೋಜಿಸಲಾಗಿದೆ. ಮಾತ್ರವಲ್ಲ ವಿಜೇತರಿಗೆ ಒಟ್ಟು 30 ಸಾವಿರ ರೂಪಾಯಿಗೂ ಅಧಿಕ ಮೊತ್ತದ ಬಹುಮಾನವನ್ನು ನೀಡಲಿದೆ.

    ಗಾಣಿಗ ಸಮಾಜದ ಆರು ವರ್ಷದೊಳಗಿನ ಅಂದರೆ 31-07-2015ರ ಬಳಿಕ ಜನಿಸಿದ ಮಕ್ಕಳು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಸ್ಪರ್ಧಾಳುಗಳ ಫೋಟೋವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವುದು. ಮುದ್ದು ರಾಧಾ-ಮುದ್ದು ಕೃಷ್ಣ ಫೋಟೋಗಳನ್ನು ಅಪ್‌ಲೋಡ್ ಮಾಡಲು 25-08-2021 ಕೊನೆಯ ದಿನ.

    ಮಕ್ಕಳ ಫೋಟೋವನ್ನು ನಿಗದಿತ ಲಿಂಕ್ ಮೂಲಕ ಅಪ್‌ಲೋಡ್ ಮಾಡಿ ಅದನ್ನು ಗಾಣಿಗ ಸೇವಾ ಸಂಘದ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡುವುದು. ಸ್ಪರ್ಧೆಗೆ ಮುನ್ನ ಪ್ರವೇಶ ಶುಲ್ಕವಾಗಿ 100 ರೂಪಾಯಿಯನ್ನು 9611449603 ನಂಬರ್‌ಗೆ ಡಿಜಿಟಲಿ ಟ್ರಾನ್ಸ್‌ಫರ್ ಮಾಡಿ, ಅದರ ಸ್ಕ್ರೀನ್‌ಶಾಟ್ ಜೊತೆಗೆ ಒಂದು ಫೋಟೋ ಹಾಗೂ ಜನನ‌ ಪ್ರಮಾಣಪತ್ರ ವಾಟ್ಸ್‌ಆ್ಯಪ್ ಮಾಡುವುದು.

    ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 3 ಸಾವಿರ, ತೃತೀಯ ಬಹುಮಾನವಾಗಿ 2 ಸಾವಿರ ರೂಪಾಯಿ ಮಾತ್ರಲ್ಲದೆ ಇತರ ಹತ್ತು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಅಲ್ಲದೆ ಫೇಸ್‌ಬುಕ್‌ನಲ್ಲಿ ಅತಿಹೆಚ್ಚು ಲೈಕ್ ಪಡೆದ ಸ್ಪರ್ಧಿಗೆ ವಿಶೇಷ ಬಹುಮಾನ ನೀಡಲಾಗುವುದು. ಜೊತೆಗೆ ಎಲ್ಲ ಸ್ಫರ್ಧಾಳುಗಳಿಗೂ ಇ-ಪ್ರಶಸ್ತಿ ಪತ್ರ ನೀಡಲಾಗುತ್ತದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಫಲಿತಾಂಶ ಆಗಸ್ಟ್ 30ರಂದು ಬೆಳಗ್ಗೆ 9ಕ್ಕೆ ಭಾವನಾ ವಾಹಿನಿಯಲ್ಲಿ ಪ್ರಕಟವಾಗಲಿದೆ.

    ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಈ ಲಿಂಕ್ ಕ್ಲಿಕ್ಕಿಸಿ.
    https://forms.gle/n1Ux1gmR7Q2eos4D7

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆಗಳು: 8073043565, 9448530583, 9620102258

    ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಸಂಬಂಧಿತ ಸುದ್ದಿ: ಮಾಜಿ ಸಿಎಂ ಯಡಿಯೂರಪ್ಪ-ಶಾಸಕ ದಿನಕರ ಶೆಟ್ಟಿ ಭೇಟಿ; ಗಾಣಿಗ ಸಮುದಾಯದಲ್ಲಿ ಗರಿಗೆದರಿದ ನಿರೀಕ್ಷೆ!

    ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!