Sunday, September 22, 2024
spot_img
More

    Latest Posts

    ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮವನ್ನು ಹಚ್ಚಹಸಿರಾಗಿಸಿದ ವನಮಹೋತ್ಸವ

    ಬೆಂಗಳೂರು: ಈ ಸಲದ ಸ್ವಾತಂತ್ರ್ಯೋತ್ಸವ ಸಮಾರಂಭದ ಜೊತೆಜೊತೆಗೇ ವನಮಹೋತ್ಸವವನ್ನು ಆಚರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪನ್ನು ಹಚ್ಚಹಸಿರಾಗಿಸಿಯೇ ಉಳಿಸುವಂಥ ಪ್ರಯತ್ನ ಮಾಡಲಾಗಿದೆ.

    ಲಯನ್ಸ್ ಕ್ಲಬ್ ಪರ್ಕಳ ಹಾಗೂ ಜ್ಞಾನ ಜ್ಯೋತಿ ಭಜನಾ ಮಂದಿರದ ಸಹಯೋಗದಲ್ಲಿ ಮಲ್ಪೆಯಲ್ಲಿ ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಇಂಥದ್ದೊಂದು ಅಪರೂಪದ ಕಾರ್ಯಕ್ರಮದ ಮೂಲಕ ಸ್ಮರಣೀಯವಾಗಿದೆ.

    ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಡೆದ ವನಮಹೋತ್ಸವದಲ್ಲಿ ಸಸಿ ನೆಟ್ಟ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ

    ಸ್ವಾತಂತ್ರ್ಯೋತ್ಸವ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ವಲಯದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಧ್ವಜವಂದನೆ ಸಲ್ಲಿಸಿದರು. ಜೊತೆಗೆ ವನಮಹೋತ್ಸವದ ಮಹತ್ವವನ್ನು ವಿವರಿಸಿ, ಸಾರ್ವಜನಿಕರು ಹೆಚ್ಚುಹೆಚ್ಚು ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಬೇಕು, ಕಾಡನ್ನು ಉಳಿಸಬೇಕು ಎಂದು ಕೋರಿದರು.

    ಸಮಾರಂಭದಲ್ಲಿ ಸುರೇಶ್ ಗಾಣಿಗ ಅವರಿಗೆ ಸನ್ಮಾನ

    ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ ಕುಂದರ್, ಜಿಲ್ಲಾ ಅಯ್ಯಪ್ಪ ಭಕ್ತ ಸೇವಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ, ಸೋಮಕ್ಷತ್ರಿಯ ಗಾಣಿಗ ಸಮಾಜದ ಉಡುಪಿ ಪ್ರತಿನಿಧಿ ಜಿ. ಜಯರಾಮ ಮತ್ತು ಭಜನಾ ಮಂದಿರದ ಪದಾಧಿಕಾರಿಗಳು, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಭಜನಾ ಮಂದಿರದ ಮಕ್ಕಳಿಂದ ದೇಶಭಕ್ತಿಗೀತೆ
    ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ

    ಸಂಬಂಧಿತ ಸುದ್ದಿ: ಕುಮಟಾದಲ್ಲಿ ವಿಸ್ಟಾಡೋಮ್​ ರೈಲನ್ನು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಸಂಬಂಧಿತ ಸುದ್ದಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!