Saturday, September 21, 2024
spot_img
More

    Latest Posts

    ಬಾರ್ಕೂರು ದೇವಸ್ಥಾನದಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಂದು ಹಾಗೂ ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಇದು ಮೂಡುಕೇರಿ ಶ್ರೀವೇಣುಗೋಪಾಲಕೃಷ್ಣ ಯುವಕ ಸಂಘ (ರಿ.) ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಯೋಜಿಸುತ್ತಿರುವ 25ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ಆಚರಣೆ.

    ಶ್ರೀ ಕೃಷ್ಣ ಜನ್ಮಾಷ್ಟಮಿಯ ರಜತ ಮಹೋತ್ಸವದ ಈ ಸಂಭ್ರಮ ಇಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ವೇಣುಗೋಪಾಲಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಸಹಸ್ರ ತುಳಸಿ ಅರ್ಚನೆಯೊಂದಿಗೆ ಆರಂಭಗೊಂಡಿದೆ. ರಾತ್ರಿ ಏಳು ಗಂಟೆಗೆ ಭಜನೆ ಇರಲಿದ್ದು, ಮಧ್ಯರಾತ್ರಿ 12.03ಕ್ಕೆ ಚಂದ್ರೋದಯ ಅರ್ಘ್ಯಪ್ರದಾನ ನೆರವೇರಲಿದೆ.

    ರಾಜೇಂದ್ರ ಗಾಣಿಗ ಮತ್ತಿತರರಿಂದ ಉದ್ಘಾಟನೆ

    ಶ್ರೀಕೃಷ್ಟ ಜನ್ಮಾಷ್ಟಮಿಯ ಸಂಭ್ರಮದ ಅಂಗವಾಗಿ ನಾಳೆ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ 9.30ರಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ‌. ಜಾರುವ ಕಂಬವೇರಿ ಮೊಸರು ಕುಡಿಕೆ ಒಡೆಯವ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆಯಲಿದೆ. ಆ ಬಳಿಕ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುದ್ದುಕೃಷ್ಣ ಪ್ರದರ್ಶನ ಇರಲಿದೆ.

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ

    ಸಂಬಂಧಿತ ಸುದ್ದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಬಾರ್ಕೂರು ದೇವಳದಲ್ಲಿ ಧ್ವಜಾರೋಹಣ, ಶ್ರಮದಾನ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯುತ್ಸವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!