Sunday, September 22, 2024
spot_img
More

    Latest Posts

    ಕುಮಟಾ ಗಾಣಿಗ ಯುವಬಳಗದ ಮುದ್ದುಕೃಷ್ಣ ಆನ್​ಲೈನ್​ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

    ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕುಮಟಾದ ಗಾಣಿಗ ಯುವಬಳಗ (ರಿ.) ಗಾಣಿಗ ಸಮುದಾಯದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಿದೆ.

    ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಣವ್ ಗೋಪಾಲಕೃಷ್ಣ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಕಾರ್ತಿಕೇಯ ಕಿರಣ್ ಶೆಟ್ಟಿ ಹಾಗೂ ತೃತೀಯ ಸ್ಥಾನ ಪಡೆದ ಆರಿಧ್ಯಾ ವಿನಾಯಕ ಶೆಟ್ಟಿ ಅವರಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ನಾಲ್ಕನೇ ಸ್ಥಾನ ಪಡೆದ ಎ.ವಿವಾನ್ ಹಾಗೂ ಐದನೇ ಸ್ಥಾನ ಪಡೆದ ಎಸ್. ಉಜ್ವಲ್ ಅವರಿಗೆ ಬಹುಮಾನ ತಲಪಿಸಲಾಗುವುದು ಎಂದು ಯುವಬಳಗ ತಿಳಿಸಿದೆ.

    ಪ್ರಣವ್ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ಪ್ರಥಮ ಬಹುಮಾನ ವಿತರಣೆ

    ಮೊದಲನೆಯ ಬಹುಮಾನವಾಗಿ 7,777 ರೂ., ಎರಡನೆಯ ಬಹುಮಾನವಾಗಿ 5,555 ರೂ. ಮತ್ತು ಮೂರನೆಯ ಬಹುಮಾನವಾಗಿ 3,333 ರೂ. ನೀಡಲಾಗಿದೆ. ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದವರಿಗೆ ಸಮಾಧಾನಕರ ಬಹುಮಾನವಾಗಿ ಆಕರ್ಷಕ ಉಡುಗೊರೆ ನೀಡಲಾಗುವುದು. ಗಾಣಿಗ ಸಮಾಜದ ಏಳು ವರ್ಷಗಳ ಒಳಗಿನ ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸುಮಾರು 70 ಸ್ಪರ್ಧಿಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಬಳಗ ತಿಳಿಸಿದೆ.

    ಕಾರ್ತಿಕೇಯ ಕಿರಣ್ ಶೆಟ್ಟಿ ಅವರಿಗೆ ದ್ವಿತೀಯ ಬಹುಮಾನ ವಿತರಣೆ

    ಗಾಣಿಗ ಯುವ ಬಳಗವು ಇದೇ ಮೊದಲ ಸಲ ಆನ್​ಲೈನ್ ಮೂಲಕ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಿದ್ದು, ಫೇಸ್​ಬುಕ್ ಪೇಜ್ ಲೈಕ್​ ಹಾಗೂ ನಿರ್ಣಾಯಕರು ನೀಡುವ ಅಂಕ ಎರಡನ್ನೂ ಸಮಾನವಾಗಿ ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಹಲವಾರು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ನಿರ್ಣಾಯಕರ ತಂಡ ಈ ಫಲಿತಾಂಶವನ್ನು ನೀಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲ ಮಕ್ಕಳಿಗೂ, ಈ ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ, ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಒದಗಿಸಿದ ಸಮಾಜ ಬಾಂಧವರು ಮತ್ತು ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಎಲ್ಲ ಪೋಟೋ ಎಡಿಟಿಂಗ್ ಮಾಡಿದ ಯುವ ಬಳಗದ ಪ್ರೋತ್ಸಾಹಕರಲ್ಲೊಬ್ಬರಿಗೆ ಧನ್ಯವಾದಗಳು ಎಂದು ಯುವಬಳಗದ ಅಧ್ಯಕ್ಷ ಎನ್. ಗಣೇಶಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

    ಆರಿಧ್ಯಾ ಶೆಟ್ಟಿ ಪರವಾಗಿ ತೃತೀಯ ಬಹುಮಾನ ಸ್ವೀಕಾರ

    ಹಾಗೆಯೇ ಈ ಸ್ಪರ್ಧೆಯ ಫಲಿತಾಂಶವನ್ನು ಸಮಯಕ್ಕೆ ಸರಿಯಾಗಿ ಪ್ರಕಟಿಸಿದ www.globalganiga.com ಮುಖ್ಯಸ್ಥರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ, ಜೊತೆಗೆ ಫೇಸ್​ಬುಕ್ ಪೇಜ್ ಮೆಚ್ಚುಗೆ ಎಣಿಕೆ ಕಾರ್ಯಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಸಮಾಜ ಬಾಂಧವರಿಗೆ ಮತ್ತು ಯುವ ಬಳಗದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಈ ಸ್ಪರ್ಧಾ ಕಾರ್ಯಕ್ರಮದ ವಿಷಯವನ್ನು ಪ್ರಚಾರ ಪಡಿಸಿದ ಮಾಧ್ಯಮ ಮಿತ್ರರಿಗೆ ಹಾಗೂ ಈ ಕಾರ್ಯಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಗಾಣಿಗ ಯುವ ಬಳಗ ( ರಿ) ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಎಂದು ಗಣೇಶಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಗಾಣಿಗ ಯುವಬಳಗ ಆಯೋಜಿಸಿದ್ದ ಮುದ್ದುಕೃಷ್ಣ ಆನ್​ಲೈನ್​ ಸ್ಪರ್ಧೆ ಫಲಿತಾಂಶ ಇಲ್ಲಿದೆ..

    ಸಂಬಂಧಿತ ಸುದ್ದಿ: ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!