Sunday, September 22, 2024
spot_img
More

    Latest Posts

    ಗಾಣಿಗ ಸಮಾಜದಿಂದ ನಾಳೆ ನಡೆಯಬೇಕಿದ್ದ ಮಹಾಸಭೆ ಮುಂದೂಡಿಕೆ

    ಬೆಂಗಳೂರು: ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ನಿರ್ಬಂಧ ಇರುವುದರಿಂದ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಹಮ್ಮಿಕೊಂಡಿರುವ ಮಹಾಸಭೆಯನ್ನು ಮುಂದೂಡಲಾಗಿದೆ.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಮೂಡುಕೇರಿ ಬಾರ್ಕೂರು ಇದರ ಆಡಳಿತ ಮಂಡಳಿಯ ಮಹಾಸಭೆ ಸೆ. 5ರ ರವಿವಾರದಂದು ನಡೆಸುವುದು ಎಂಬುದಾಗಿ ಈ ಹಿಂದೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಈ ಮಧ್ಯೆ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಆಗಿರುವುದರಿಂದ ಮಹಾಸಭೆ ನಡೆಸಲು ಅಸಾಧ್ಯವಾಗಿದೆ.

    ಅದಾಗ್ಯೂ ಮಹಾಸಭೆ ನಡೆಸುವ ಸಲುವಾಗಿ ಆಡಳಿತ ಮಂಡಳಿಯ ಸದಸ್ಯರು ಸೆ. 3ರ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರನ್ನು ಭೇಟಿಯಾಗಿದ್ದರು. ಮಹಾಸಭೆಯು ಪೂರ್ವನಿಗದಿತ ಕಾರ್ಯಕ್ರಮವಾದ್ದರಿಂದ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರನ್ನು ಕೋರಿದ್ದರು.

    ಈಗಾಗಲೇ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಕೂಡ ರದ್ದುಪಡಿಸಲಾಗಿದ್ದು ತಮಗೆ ವಿಶೇಷವಾಗಿ ಅನುಮತಿ ನೀಡಲು ಸಾಧ್ಯವಿಲ್ಲ. ಸಭೆಯನ್ನು ಮುಂದೂಡಿ‌ ಎಂದು ಜಿಲ್ಲಾಧಿಕಾರಿಯವರು ಹೇಳಿರುವುದರಿಂದ ಮಹಾಸಭೆಯನ್ನು ಮುಂದೂಡಲಾಗಿದೆ. ಸಭೆಯ ಪರಿಷ್ಕೃತ ದಿನಾಂಕವನ್ನು ಶೀಘ್ರವಾಗಿ ಪತ್ರ ಮುಖೇನ ತಿಳಿಸಲಾಗುವುದು ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ತಿಳಿಸಿದ್ದಾರೆ.

    ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರನ್ನು ಭೇಟಿಯಾದ ಸಮಾಜದ ಮುಖಂಡರು

    ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ, ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಜತೆ ಕಾರ್ಯದರ್ಶಿ ರಾಮಕೃಷ್ಣ ಹಾರಾಡಿ, ಆಡಳಿತ ಸಮಿತಿ ಸದಸ್ಯ ಗೋಪಾಲ ಹ್ಯಾಂಗ್ಯೋ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ

    ಸಂಬಂಧಿತ ಸುದ್ದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಬಾರ್ಕೂರು ದೇವಳದಲ್ಲಿ ಧ್ವಜಾರೋಹಣ, ಶ್ರಮದಾನ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!