Saturday, September 21, 2024
spot_img
More

    Latest Posts

    ಅದ್ಧೂರಿ ಗಾಣದ ಕೊಟ್ಯದ ಪ್ರವೇಶೋತ್ಸವ ಮತ್ತು ಶನಿಪೂಜೆ

    ಬೆಂಗಳೂರು: ಮಂಗಳೂರು ಪಡುಬದಿನಡಿ ಶ್ರೀ ಅರಸು ಮುಂಡಿತ್ತಾಯ ಧೂಮಾವತಿ ದೈವಸ್ಥಾನಕ್ಕೆ ಸಂಬಂಧಿಸಿದ, ನೂತನವಾಗಿ ನಿರ್ಮಾಣಗೊಂಡಿರುವ ಗಾಣದ ಕೊಟ್ಯದ ಪ್ರವೇಶೋತ್ಸವ ಇಂದು ಅದ್ಧೂರಿಯಾಗಿ ನೆರವೇರಿದೆ.

    ಬೆಳಗ್ಗೆ 10.30ಕ್ಕೆ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಈ ಗಾಣದ ಕೊಟ್ಯದ ಪ್ರವೇಶೋತ್ಸವ ಜರುಗಿದೆ. ನೀರುಮಾರ್ಗ ಬೊಂಡಂತಿಲದ ಪಡು ಗಾಣದಕೊಟ್ಯದಲ್ಲಿ ನಡೆದ ಈ ಗಾಣ ಪ್ರತಿಷ್ಠೆ ಸಮಾರಂಭದಲ್ಲಿ ಗಾಣಿಗ ಸಮುದಾಯದವರಲ್ಲದೆ ಸುತ್ತಮುತ್ತಲ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.

    ಪ್ರತಿಷ್ಠಾಪನೆಗೊಂಡಿರುವ ನೂತನ ಗಾಣ

    ಇದೇ ಸಂದರ್ಭದಲ್ಲಿ ಶನಿಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಶನಿಪೂಜೆ ಬಳಿಕ ಗಾಣದ ಕುತ್ತಿಗೆ ತೆಂಗಿನೆಣ್ಣೆ ಹಾಕುವ ಅವಕಾಶ ಭಕ್ತಾದಿಗಳಿಗೆ ಕಲ್ಪಿಸಲಾಗಿದೆ ಎಂದು ಆಯೋಜಕರಾಗಿರುವ ಆಡಳಿತ ಮಂಡಳಿ ಹಾಗೂ ಪಡುಬದಿನಡಿ ಗಾಣದ ಕೊಟ್ಯದ ಗಾಣಿಗ ಸಂಸಾರದವರು ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಕ್ಯಾಪ್ಟನ್ ಭರತ್ ಯೋಗೇಂದ್ರ: ಆರ್ಮಿ ಸೆಲೆಕ್ಷನ್​ನಲ್ಲಿ ಪ್ರಥಮ ಸ್ಥಾನ, ಬೆಳ್ಳಿ ಪದಕ!

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ

    ಸಂಬಂಧಿತ ಸುದ್ದಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!