Saturday, September 21, 2024
spot_img
More

    Latest Posts

    ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಾಗಿ ಬೃಹತ್‌ ಹಾಸ್ಟೆಲ್‌ ನಿರ್ಮಾಣ ಭರವಸೆ

    ಬೆಂಗಳೂರು: ಹುಬ್ಬಳ್ಳಿ-ಧಾರವಾಡದಲ್ಲಿ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗಾಗಿ ಬೃಹತ್‌ ಹಾಸ್ಟೆಲ್‌ ನಿರ್ಮಾಣ ಮಾಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಸದಸ್ಯ ತಿಪ್ಪಣ್ಣ ಮಜ್ಜಗಿ ತಿಳಿಸಿದ್ದಾರೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಾರ್ಡ್‌ ಸಂಖ್ಯೆ 38ರಿಂದ ಸ್ಪರ್ಧಿಸಿ ವಿಜೇತರಾದ ತಿಪ್ಪಣ್ಣ ಮಜ್ಜಗಿ ಅವರನ್ನು ಗಾಣಿಗ ಸಮುದಾಯದ ಮುಖಂಡರು ಭೇಟಿಯಾಗಿ ಅಭಿನಂದಿಸಿ, ಸನ್ಮಾನಿಸಿದ ಸಂದರ್ಭದಲ್ಲಿ ಅವರು ಈ ಭರವಸೆ ನೀಡಿದ್ದಾರೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಸದಸ್ಯ ತಿಪ್ಪಣ್ಣ ಮಜ್ಜಗಿ ಅವರಿಗೆ ಗಾಣಿಗ ಸಮಾಜದವರಿಂದ ಸನ್ಮಾನ

    ರಾಜ್ಯ ಗಾಣಿಗ ನೌಕರರ ಸಂಘದ ಮಹಾಪೋಷಕರೂ ಆಗಿರುವ ತಿಪ್ಪಣ್ಣ ಮಜ್ಜಗಿ ಅವರು, ತಮಗೆ ಅಭಿನಂದನೆ ಸಲ್ಲಿಸಿದ ಗಾಣಿಗ ಸಮಾಜದ ಮುಖಂಡರಿಗೆ ಧನ್ಯವಾದ ಅರ್ಪಿಸಿದ್ದಲ್ಲದೆ, ಮುಂದೆಯೂ ಸಮಾಜಕ್ಕಾಗಿ, ಸಮುದಾಯಕ್ಕಾಗಿ ತಮ್ಮ ಸಹಾಯ, ಸಹಕಾರ, ಕೊಡುಗೆಗಳು ಮುಂದುವರಿಯಲಿವೆ ಎಂದೂ ಹೇಳಿದರು.

    ಗಾಣಿಗ ಸಮಾಜದ ಮುಖಂಡರಾದ ಆರ್. ಆರ್. ಬಿರಾದಾರ, ಕೆ.ಬಿ. ಕುರಹಟ್ಟಿ, ಅಶೋಕ ನಾಗಸಮುದ್ರ ದಂಪತಿ, ಬಿಸೇರೊಟ್ಟಿ ಸಹೋದರರು, ಬಿ.ಜಿ. ಬಶೆಟ್ಟಿ, ಜಿ.ಎನ್. ನಾಗಶೆಟ್ಟಿ, ರವಿಕುಮಾರ್ ಸಜ್ಜನ ಮುಂತಾದವರು ಈ ಸನ್ಮಾನದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಗಾಣಿಗ ಸಮುದಾಯದವರ ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣ ಮಜ್ಜಗಿ

    ಸಂಬಂಧಿತ ಸುದ್ದಿ: ‌ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!