Sunday, September 22, 2024
spot_img
More

    Latest Posts

    ಕೋಟ ದಿನೇಶ್ ಗಾಣಿಗರಿಗೆ ಹುಟ್ಟೂರ ಸಮ್ಮಾನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ  ದಿನೇಶ್ ಗಾಣಿಗ ಕೋಟ ಅವರಿಗೆ ಗಾಣಿಗ ಯುವ ಸಂಘಟನೆ ಹಾಗೂ ಮಹಿಳಾ ಸಂಘಟನೆ ಕೋಟ ಘಟಕ ಆಶ್ರಯದಲ್ಲಿ ಹುಟ್ಟೂರ ಸಮ್ಮಾನ ನಡೆಸಲಾಯಿತು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟತಟ್ಟು ಅಘೋರೇಶ್ವರ ಸಭಾಂಗಣದಲ್ಲಿ ಸೆ.12ರಂದು ಈ ಸಮಾರಂಭ ನಡೆದಿದ್ದು, ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ ಜರಗಿತು.

    ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ. ರಾವ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಣಿಗ ಸಮಾಜದ ಯುವ ಸಂಘಟನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಕೋಟ ಘಟಕ ತನ್ನ ಸಮಾಜಮುಖಿ ಸೇವೆಯಲ್ಲಿ ಮುಂಚೂಣಿಯಲ್ಲಿದೆ.  ಸಮಾಜದ  ಬೆಳವಣಿಗೆಗಾಗಿ ಎಲ್ಲರೂ ಒಟ್ಟಾಗಿ ಒಂದಾಗಿ ದುಡಿಯುವ ಎಂದು ಅವರು ಹೇಳಿದರು.

    ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್‌ ಗಾಣಿಗರಿಗೆ ಹುಟ್ಟೂರ ಸನ್ಮಾನ.

    ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ದಿನೇಶ್ ಗಾಣಿಗ ಕೋಟ ಅವರ ಸಾಮಾಜಿಕ ಹೋರಾಟಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿ, ಸಮ್ಮಾನಿಸಿ ಗೌರವಿಸಲಾಯಿತು. ಎಸ್ಎಸ್ಎಲ್‌ಸಿ-ಪಿಯುಸಿಯಲ್ಲಿ ಶೇ. ೮೫ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

    ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    ಸಂಘಟನೆಯ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇಣುಗೋಪಾಲಕೃಷ್ಣ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚಲ್ಲೆಮಕ್ಕಿ, ಉದ್ಯಮಿ ಸುರೇಶ್ ಗಾಣಿಗ ಶೇವಧಿ ಕೋಟ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಮಟಪಾಡಿ ಸೂರ್ಯನಾರಾಯಣ ಗಾಣಿಗ, ಸಂಪರ್ಕ ಸುಧಾ ಪತ್ರಿಕೆಯ ಆಡಳಿತ ಮಂಡಳಿ ಅಧ್ಯಕ್ಷ  ಎಸ್.ಕೆ. ಪ್ರಾಣೇಶ್, ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಬಿ.ಎ. ಅಭಿಲಾಷ್, ಕೋಟ ಗಾಣಿಗ ಯುವ ಸಂಘಟನೆ ಕಾರ್ಯದರ್ಶಿ ಗಣೇಶ್ ಗಾಣಿಗ ಚಿತ್ರಪಾಡಿ ಉಪಸ್ಥಿತರಿದ್ದರು.

    ಮಹಿಳಾ ಸಂಘಟನೆಯ ಅಧ್ಯಕ್ಷೆ ಅನಿತಾ ಶ್ರೀಧರ್ ಗಾಣಿಗ ಗುಂಡ್ಮಿ ಸ್ವಾಗತಿಸಿದರು. ಜಿಲ್ಲಾ ಗಾಣಿಗ ಸಮಾಜದ ಮಾಜಿ ಪ್ರಧಾನ  ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕ ಮಾತನಾಡಿ, ಕೋಟ ಘಟಕದ ಖಜಾಂಚಿ ಗಿರೀಶ್ ಬೆಟ್ಲಕ್ಕಿ ಕಾರ್ಯಕ್ರಮ ನಿರೂಪಿಸಿ, ರಾಜೇಶ್ ಅಚ್ಲಾಡಿ ವಂದಿಸಿದರು.

    ಮುದ್ದುಕೃಷ್ಣ ಸ್ಪರ್ಧೆ ವಿಜೇತರು

    ಗಾಣಿಗ ಯುವ ಸಂಘಟನೆ ಹಾಗೂ ಮಹಿಳಾ ಸಂಘಟನೆ ಕೋಟ ಘಟಕ ಆಶ್ರಯದಲ್ಲಿ ಜರುಗಿದ ಮುದ್ದುಕೃಷ್ಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಭವಿನ್ ಗಾಣಿಗ ಉಡುಪಿ ಪ್ರಥಮ, ನಮಿಶ್ ಕೋಟ ಹಾಗೂ ಆಧ್ಯ ರವೀಂದ್ರ ದ್ವಿತೀಯ, ಸಂಪ್ರೀತ್ ಸುರತ್ಕಲ್ ತೃತೀಯ ಹಾಗೂ ಹಿರಿಯರ ವಿಭಾಗದಲ್ಲಿ ಅದಿತ್ರಿ ಬೆಂಗಳೂರು ಪ್ರಥಮ, ಸಾಕ್ಷತ್ ಆರ್. ಕೋಟೇಶ್ವರ ದ್ವಿತೀಯ, ಭೂಮಿಕಾ ಚಿತ್ರಪಾಡಿ ತೃತೀಯ ಬಹುಮಾನ ಗಳಿಸಿದರು.

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಾಗಿ ಬೃಹತ್‌ ಹಾಸ್ಟೆಲ್‌ ನಿರ್ಮಾಣ ಭರವಸೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ೪೮ ಸಾವಿರ ಸಿಬ್ಬಂದಿಯ ಯೋಗಕ್ಷೇಮವೇ ನನ್ನ ಪ್ರಥಮ ಆದ್ಯತೆ ಎಂದ ಸಜ್ಜನರ್‌

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!