Saturday, September 21, 2024
spot_img
More

    Latest Posts

    ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ

    ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿಯ ಯಲ್ಲಾಪುರ ನಾಕಾದ ಗಾಣಿಗ ಸಮುದಾಯ ಭವನದಲ್ಲಿನ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಈಗಾಗಲೇ ಕಾರ್ತಿಕ ಪೂಜೆ ಆರಂಭಗೊಂಡಿದ್ದು, ಡಿಸೆಂಬರ್ 4ರ ವರೆಗೂ ನಡೆಯಲಿದೆ ಎಂದು ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ತಿಳಿಸಿದೆ.

    ಪ್ರತಿವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಪ್ರತಿದಿನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪೂಜೆ ನಡೆಯಲಿದೆ. ಆಸಕ್ತ ಭಕ್ತರು 300 ರೂಪಾಯಿ ನೀಡಿ, ಪೂಜೆಯ ದಿನಾಂಕವನ್ನು ಅರ್ಚಕರು ಅಥವಾ ಕಾರ್ಯದರ್ಶಿ ಅವರ ಬಳಿ ತಿಳಿಸಿದರೆ, ಆ ದಿನದಂದು ಅವರ ಪ್ರಯುಕ್ತ ಪೂಜೆ ನಡೆಸಲಾಗುವುದು.

    ಪೂಜೆಯಲ್ಲಿ ಪಾಲ್ಗೊಳ್ಳುವವರು ಪೂಜೆಯ ದಿನ 15 ನಿಮಿಷ ಮುಂಚಿತವಾಗಿ ದೇವಸ್ಥಾನದಲ್ಲಿ ಹಾಜರಿರಬೇಕು. ಬರಲು ಸಾಧ್ಯವಾಗದವರಿಗೆ ಅವರ ಹೆಸರಿನಲ್ಲಿ ಪೂಜೆ ನಡೆಸಿ, ಪ್ರಸಾದ ಕಳಿಸಲಾಗುವುದು. ಸ್ಥಳಾಭಾವದ ಕಾರಣ ದಿನಕ್ಕೆ ಐದು ಪೂಜೆಗೆ ಮಾತ್ರ ಅವಕಾಶವಿದ್ದು, ಭಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂಬುದಾಗಿ ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ವಿನಂತಿಸಿಕೊಂಡಿದೆ.

    ಡಿಸೆಂಬರ್‌ 4ರ ಶನಿವಾರ ಸಂಜೆ 6.30ಕ್ಕೆ ಶ್ರೀ ಲಕ್ಷ್ಮೀನಾರಾಯಣ ದೇವರ ಕಾರ್ತಿಕ ದೀಪೋತ್ಸವ ನಡೆಯಲಿದೆ. ಇದರಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಅರ್ಚಕ ರವೀಂದ್ರ ಭಟ್ (9901661179) ಅವರನ್ನು ಸಂಪರ್ಕಿಸಬಹುದು. 9886144909, 9449164312 ಅಥವಾ 9448331548 ಕೂಡ ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರ ಪ್ರಥಮ ಪೂಜೆ; ನ. 5ರಂದು ಏಕದಶ ರುದ್ರಾಭಿಷೇಕ, ದೀಪೋತ್ಸವ

    ಸಂಬಂಧಿತ ಸುದ್ದಿ: ಅಂತ್ಯಸಂಸ್ಕಾರಕ್ಕೂ ಸಹಾಯ ಮಾಡಲಿದೆ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ನಾಲ್ವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!