ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ, ಗಾಣಿಗ ಸಮಾಜದ ರಾಷ್ಟ್ರಮಟ್ಟದ ನಾಯಕ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಅವರ ಜನ್ಮದಿನ ಇಂದು ಆಚರಣೆ ಆಗುತ್ತಿದ್ದು, ಸಮಸ್ತ ಗಾಣಿಗ ಸಮಾಜದ ಪರವಾಗಿ ಅವರಿಗೆ ಗ್ಲೋಬಲ್ ಗಾಣಿಗ.ಕಾಮ್ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರುತ್ತಿದೆ.
ದಾಮೋದರ ದಾಸ್ ಮೋದಿ ಹಾಗೂ ಹೀರಾಬೆನ್ ಮೋದಿ ದಂಪತಿಯ ಕಿರಿಯ ಪುತ್ರ ಆಗಿರುವ ಇವರು 1953ರಲ್ಲಿ ಗುಜರಾತ್ನಲ್ಲಿ ಜನಿಸಿದ್ದರು. ಅಹಮದಾಬಾದ್ನಲ್ಲಿ ವರ್ತಕ ಆಗಿರುವ ಇವರು ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಷನ್ನ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಪ್ರಧಾನಮಂತ್ರಿ ಜನಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಗಾಣಿಗ ಸಮಾಜದ ಕುರಿತು ವಿಶೇಷ ಅಭಿಮಾನ ಹಾಗೂ ಕಾಳಜಿಯನ್ನು ಹೊಂದಿದ್ದಾರೆ.
ರಾಷ್ಟ್ರಾದ್ಯಂತ ಇರುವ ವಿವಿಧ ಗಾಣಿಗ ಸಂಘಟನೆಗಳ ಮುಖ್ಯಸ್ಥರ ಜೊತೆ ಸಂಪರ್ಕ ಹೊಂದಿರುವ ಇವರು ಸಮಾಜಕ್ಕಾಗಿ ಸಾಕಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಸುದೀರ್ಘ ಆಯುಷ್ಯ, ಉತ್ತಮ ಆರೋಗ್ಯ ಲಭಿಸಲಿ ಎಂದು ಗ್ಲೋಬಲ್ ಗಾಣಿಗ.ಕಾಮ್ ಹಾರೈಸುತ್ತಿದೆ.
ಸಂಬಂಧಿತ ಸುದ್ದಿ: ಗಾಣಿಗ ಸಮಾಜದಿಂದ ವಿಶ್ವಕ್ಕೇ ಬೆಳಕು: ಮೋದಿ
ಸಂಬಂಧಿತ ಸುದ್ದಿ: ತುಮಕೂರಿಗೆ ಬಂದಿದ್ದ ಮೋದಿ, ಗೋವುಗಳ ಕುರಿತು ಹೇಳಿದ್ದೇನು?
ಸಂಬಂಧಿತ ಸುದ್ದಿ: ತಿರುಪತಿಯಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ