Saturday, September 21, 2024
spot_img
More

    Latest Posts

    ಸೀ ರಾಕ್‌ ಜನಾರ್ದನ ಅವರ ಸ್ಮರಣಾರ್ಥ ಶಾಶ್ವತ ದತ್ತಿನಿಧಿಗೆ 2 ಲಕ್ಷ ರೂಪಾಯಿ ದೇಣಿಗೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ವಿದ್ಯಾನಿಧಿ ಸಲುವಾಗಿ ಇರುವ ಶಾಶ್ವತ ದತ್ತಿ ನಿಧಿಗೆ ಸಮಾಜದ ಹಲವು ಗಣ್ಯರು ದೇಣಿಗೆ ನೀಡುತ್ತ ಬಂದಿದ್ದು, ಇದು ಪ್ರತಿವರ್ಷವೂ ಮುಂದುವರಿಯುತ್ತಿದೆ. ಅಂತೆಯೇ ಗಾಣಿಗ ಸಮಾಜದ ಸಂಘಟನೆಗಾಗಿ ಬಹಳಷ್ಟು ಶ್ರಮಿಸಿದ್ದ ಹೋಟೆಲ್‌ ಉದ್ಯಮಿ, ಬೆಂಗಳೂರಿನ ಸೀ ರಾಕ್‌ ರೆಸ್ಟೋರೆಂಟ್‌ ಮಾಲೀಕ ಜನಾರ್ದನ ಎಸ್.‌ ರಾವ್‌ ಅವರ ಸ್ಮರಣಾರ್ಥ ಅವರ ಪ‌ತ್ನಿ ಶಾರದಾ ಹಾಗೂ ಪುತ್ರ ರಮೇಶ್‌ ಜೆ. ರಾವ್‌ ಅವರು ಶಾಶ್ವತ ವಿದ್ಯಾನಿಧಿಗೆ 2 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

    ಸಮಾಜದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾಕಾಂಕ್ಷಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಸಲುವಾಗಿ ಸೋಮಕ್ಷತ್ರಿಯ ಗಾಣಿಗ ಸಮಾಜವು ಶಾಶ್ವತ ವಿದ್ಯಾ ನಿಧಿಯನ್ನು ಸ್ಥಾಪಿಸಿದ್ದು, ಇದಕ್ಕೆ ಈಗಾಗಲೇ ಹಲವಾರು ಗಣ್ಯರು ದೇಣಿಗೆ ನೀಡಿದ್ದಾರೆ. ಸೀ ರಾಕ್‌ ಜನಾರ್ದನ ಅವರ ಹೆಸರಿನಲ್ಲಿರುವ ಈ ವಿದ್ಯಾನಿಧಿಯು ಎರಡನೇ ಅತಿದೊಡ್ಡ ದೇಣಿಗೆಯಾಗಿದೆ.

    ರಮೇಶ್‌ ಜೆ. ರಾವ್‌ ಅವರಿಗೆ ಬಿ.ಎಸ್‌. ಮಂಜುನಾಥ ಮತ್ತು ಎಚ್.ಟಿ. ನರಸಿಂಹ ಅವರಿಂದ ಅಭಿನಂದನೆ

    ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಶ್ವತ ವಿದ್ಯಾನಿಧಿಗೆ ದೊಡ್ಡ ಮೊತ್ತವನ್ನು ನೀಡಿರುವ ಸೀ ರಾಕ್‌ ಜನಾರ್ದನ ಅವರ ಪುತ್ರ ರಮೇಶ್‌ ಜೆ. ರಾವ್‌ ಅವರನ್ನು ಡಿ. 5ರಂದು ನಡೆದ ಸೋಮಕ್ಷತ್ರಿಯ ಗಾಣಿಗ ಸಮಾಜದ ವಾರ್ಷಿಕ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಎಸ್.‌ ಮಂಜುನಾಥ ಮತ್ತು ಅಧ್ಯಕ್ಷ ಎಚ್.ಟಿ. ನರಸಿಂಹ ಅವರು ಸನ್ಮಾನಿಸಿ ಧನ್ಯವಾದಗಳನ್ನು ವ್ಯಕ್ತಪಡಿಸಿದರು.

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ಬ್ರಾಹ್ಮೀ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಗಾಣಿಗ ಸಮಾಜದ ಮುಖಂಡರಿಗೆ ಸನ್ಮಾನ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!