Sunday, September 22, 2024
spot_img
More

    Latest Posts

    ಇದೇ ರವಿವಾರ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ವಾರ್ಷಿಕ ಸಭೆ…

    ಬೆಂಗಳೂರು: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವು ಇದೇ ರವಿವಾರ ಅಂದರೆ ಡಿ.12ರಂದು ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯಲಿದೆ.

    ಅಂದು ಬೆಳಗ್ಗೆ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಆರಂಭವಾಗಲಿದ್ದು, ವಾರ್ಷಿಕ ಮಹಾಸಭೆ ಬೆಳಗ್ಗೆ 11ಕ್ಕೆ ನಡೆಯಲಿದೆ. ನಂತರ 11.30ರ ಸುಮಾರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

    ಈ ಸಮಾರಂಭದ ಉದ್ಘಾಟನೆಯನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮಾಜದವರೇ ಆದ ಕೆ. ದಿನಕರ ಶೆಟ್ಟಿ ಅವರು ನೆರವೇರಿಸಲಿದ್ದಾರೆ. ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಆರ್. ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು ಶ್ರೀ ಗಾಣಿಗ ವಿದ್ಯಾಜ್ಯೋತಿ-3 ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

    ಮೈಸೂರು ಮಾನಸ ಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರೊ.ಜಿ. ವಿಶ್ವನಾಥಪ್ಪ ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಟ್ರಸ್ಟ್ ಕಾರ್ಯಾಧ್ಯಕ್ಷ ಟಿ.ವಿ. ವೇಣುಗೋಪಾಲ್, ಉಪಾಧ್ಯಕ್ಷ ಎನ್‌.ಸಿ. ನಾಗರಾಜ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್‌.ಟಿ. ನರಸಿಂಹ, ಪೀಪಲ್ ಟ್ರೀ ಗ್ರೂಪ್ ಆಫ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎಸ್. ಜ್ಯೋತಿ‌ ನೀರಜ, ಗಾಣಿಗ ಸಮುದಾಯದ ದೇವನಹಳ್ಳಿ ಮುಖಂಡ ಡಾ.ಜಿ.ಎನ್. ವೇಣುಗೋಪಾಲ್, ಹೊಸಕೋಟೆಯ ಶ್ರೀ ವೆಂಕಟೇಶ್ವರ ಸರ್ವಿಸ್ ಸ್ಟೇಷನ್ ಮತ್ತು ದೈವಿಕ್ ಸುಜುಕಿ ಶೋರೂಮ್‌ನ ಟಿ.ಎಂ. ಅಶೋಕ್ ಕುಮಾರ್, ಶಿವಮೊಗ್ಗ ಶಿಕಾರಿಪುರದ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸಾಹು ಚೌಪಾಲ್‌ನ ರಾಷ್ಟ್ರೀಯ ಅಧ್ಯಕ್ಷ ಸಾಹಿಬ್ ಶರಣ್ ಸಾಹು, ಸಾಹು ಚೌಪಾಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಕೃಷ್ಣಕುಮಾರ್ ಸಾಹು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಸನ್ಮಾನಿತರಾಗಲಿರುವ ಸಮಾಜದ ಗಣ್ಯರು

    • ಬಿ.ವಿ. ವಾಸಂತಿ ಅಮರ್: ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಬೀಜ ನಿಗಮ
    • ವಿಶ್ವನಾಥ ಭಾಸ್ಕರ ಗಾಣಿಗ: ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್, ಕುಂದಾಪುರ.
    • ಕಾರ್ತಿಕ್ ಎಸ್. ಕಟೀಲ್: ಸಂಸ್ಥಾಪಕ ಅಧ್ಯಕ್ಷ, ಸ್ವರಕ್ಷಾ ಫಾರ್ ವುಮನ್ ಟ್ರಸ್ಟ್, ಕಟೀಲು, ಮಂಗಳೂರು.
    • ಜಿ. ಜಯಲಕ್ಷ್ಮಿ: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಟು, ಬಂಟ್ವಾಳ
    • ಡಾ.ಪೂರ್ಣಿಮಾ: ಸ್ತ್ರೀರೋಗ ತಜ್ಞೆ, ಪೂರ್ಣಿಮಾ ಆಸ್ಪತ್ರೆ, ಮೈಸೂರು.
    • ಡಾ.ಎಸ್. ಪ್ರದೀಪ: ಪ್ರೊಫೆಸರ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು
    • ಭುವನೇಶ್ವರಿ: ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಉಡುಪಿ
    • ಎಂ.ಆರ್. ನಾರಾಯಣ್: ಪ್ರಗತಿಪರ ರೈತ, ಶ್ರೀನಿವಾಸಸಂದ್ರ, ಕೆಜಿಎಫ್
    • ಡಾ.ಎಸ್.ಎಂ.ಕುಮಾರ್: ಹೃದಯ ಶಸ್ತ್ರಚಿಕಿತ್ಸಕ, ಜಯದೇವ ಆಸ್ಪತ್ರೆ, ಬೆಂಗಳೂರು.
    • ಸಂಗೀತ ವಿದ್ವಾನ್ ವರದರಾಜು: ಅಧ್ಯಕ್ಷ, ಪಲ್ಲವಿ ಎಸ್. ಚಂದ್ರಪ್ಪನವರ ಸ್ಮಾರಕ ಗಾನಸಭಾ, ಬೆಂಗಳೂರು.
    • ರೇಖಾ ವೇಣುಗೋಪಾಲ್: ಅಧ್ಯಕ್ಷೆ, ನಗರಸಭೆ, ದೇವನಹಳ್ಳಿ

    ಸಂಬಂಧಿತ ಸುದ್ದಿ: ಸೀ ರಾಕ್‌ ಜನಾರ್ದನ ಅವರ ಸ್ಮರಣಾರ್ಥ ಶಾಶ್ವತ ದತ್ತಿನಿಧಿಗೆ 2 ಲಕ್ಷ ರೂಪಾಯಿ ದೇಣಿಗೆ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!