Saturday, September 21, 2024
spot_img
More

    Latest Posts

    ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿಯು ನ. 14ರಂದು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಿದೆ.

    ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಾಲಯದ ವೆಂಕಟೇಶ್ವರ ಸಭಾಭವನದಲ್ಲಿ ನಡೆದ ಈ ಸಮಾರಂಭವನ್ನು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಕೆ.ಗೋಪಾಲ್‌ ಅವರು ಉದ್ಘಾಟಿಸಿದರು. ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಯ ಉದ್ದೇಶ ಇರಿಸಿಕೊಂಡು ಈ ಸೊಸೈಟಿ ಸ್ಥಾಪಿಸಲಾಗಿದೆ. ನಿರೀಕ್ಷೆಯಂತೆಯೇ ಇದು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಶ್ರೀವೇಣುಗೋಪಾಲಕೃಷ್ಣ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷ ರಾಜೇಂದ್ರ ಗಾಣಿಗ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ನೆರವಾಗಲು ಸಾಧ್ಯವಾಗಿದೆ. ಶೈಕ್ಷಣಿಕ  ನೆರವು ಧಾರ್ಮಿಕ ಸೇವೆಯಷ್ಟೇ ಪವಿತ್ರವಾದುದು ಎಂದು ರಾಜೇಂದ್ರ ಗಾಣಿಗ ಅವರು ವಿದ್ಯಾರ್ಥಿಗಳಿಗೆ ಸಮಾಜ ನೆರವಾಗಬೇಕಾದ ಮಹತ್ವ ಹಾಗೂ ಅಗತ್ಯವನ್ನು ತಿಳಿಸಿದರು.

    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನ, ಸಹಕಾರ ಸ್ಮರಣೆ ಕಾರ್ಯಕ್ರಮಗಳು ಕೂಡ ಇದೇ ಸಂದರ್ಭದಲ್ಲಿ ನೆರವೇರಿದವು. ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿರುವ ಕೆ. ಕಾರ್ತಿಕ್‌ ಕಡೂರು, ಸಿಂಚನಾ ತಗ್ಗರ್ಸೆ, ಮಯೂರಿ ಬ್ರಹ್ಮಾವರ ಅವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಪರ್ಕ ಸುಧಾ ಪತ್ರಿಕೆ ಆಯೋಜಿಸಿದ್ದ 2020ನೇ ಸಾಲಿನ ಮುದ್ದುಕಂದ ಸ್ಪರ್ಧೆಯ ಬಹುಮಾನಗಳನ್ನು ಸಹ ಇದೇ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಗಾಣಿಗ ಅಚ್ಲಾಡಿ, ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ.ರಾವ್‌, ಮಾಜಿ ಅಧ್ಯಕ್ಷ ಜಗನ್ನಾಥ ಗಾಣಿಗ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ ಮಾಲ್ತಾರು, ವಕೀಲ ಬಾಲಚಂದ್ರ ಗಾಣಿಗ, ಕೆನರಾ ಬ್ಯಾಂಕ್‌ ಡಿವಿಜನಲ್‌ ಮ್ಯಾನೇಜರ್‌ ರತ್ನಾಕರ ಗಾಣಿಗ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ, ರಾಷ್ಟ್ರೀಯ ಮಾನವಹಕ್ಕು ಆಯೋಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್‌ ಗಾಣಿಗ ಕೋಟ, ಗುತ್ತಿಗೆದಾರ ಶೇವಧಿ ಸುರೇಶ್‌ ಗಾಣಿಗ, ಸಂಪರ್ಕ ಸುಧಾ ಪತ್ರಿಕೆ ಅಧ್ಯಕ್ಷ ಎಸ್.ಕೆ.ಪ್ರಾಣೇಶ್‌, ಕಾರ್ಯದರ್ಶಿ ಕೆ. ಉದಯ್‌, ವೇಣುಗೋಪಾಲಕೃಷ್ಣ ಸೌಹಾರ್ದ ಸಹಕಾರಿ ಸಿಇಒ ಪರಮೇಶ್ವರ್‌, ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿ ಕಾರ್ಯದರ್ಶಿ ಗಣೇಶ್‌ ಜಿ. ಚಲ್ಲೆಮಕ್ಕಿ, ಜಂಟಿ ಕಾರ್ಯದರ್ಶಿ ನಾರಾಯಣ ಎಚ್.‌ ಐರೋಡಿ, ಖಜಾಂಚಿ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಗೋಪಾಲಕೃಷ್ಣ ಕುಂಭಾಶಿ, ಯೋಗೀಶ್‌ ಕೊಳಲಗಿರಿ, ರಘುರಾಮ್‌ ಬೈಕಾಡಿ ಮುಂತಾದವರು ಉಪಸ್ಥಿತರಿದ್ದರು.

    ಶೈಕ್ಷಣಿಕ ದತ್ತಿನಿಧಿ ಸಮರ್ಪಣೆ

    • ದಿವಂಗತ ಎಚ್‌.ಕೆ. ಅಚ್ಯುತ್‌ ಮಾಸ್ಟರ್‌, ಬೆಂಗಳೂರು ಇವರ ಸ್ಮರಣಾರ್ಥ, ಮಕ್ಕಳ ಕೊಡುಗೆ: 5,01,000 ರೂ.
    • ರಾಜೇಂದ್ರ ಗಾಣಿಗ ಬೆಂಗಳೂರು: 3,00,000 ರೂ.
    • ಕಲ್ಯಾಣಿ ನರಸಿಂಹ ಗಾಣಿಗ ಬಾರ್ಕೂರು ಇವರ ಪರವಾಗಿ ಮಕ್ಕಳಿಂದ ದತ್ತಿನಿಧಿ: 50,000 ರೂ.
    • ದಿವಂಗತ ನಾಗಮ್ಮಜ್ಜಿ ಉದ್ದಾಲ್‌ಗುಡ್ಡೆ ಬಾರ್ಕೂರು ಇವರ ಸ್ಮರಣಾರ್ಥ, ಮಕ್ಕಳು-ಮೊಮ್ಮಕ್ಕಳ ಕೊಡುಗೆ: 40,000 ರೂ.
    • ದಿವಂಗತ ಶ್ರೀನಿವಾಸ ರಾವ್‌ ಸಾಗರ, ಇವರ ಸ್ಮರಣಾರ್ಥ ಪತ್ನಿ ಯಶೋದ ಮತ್ತು ಮಕ್ಕಳ ಕೊಡುಗೆ: 25,000 ರೂ.
    • ಶಾಂತ ಅಣ್ಣಪ್ಪ ಗಾಣಿಗ ಪರವಾಗಿ ಸುರೇಶ್‌ ಕುಮಾರ್‌ ಹಾರಾಡಿ: 25,000 ರೂ.
    • ರತ್ನಾಕರ ಗಾಣಿಗ, ಡಿಜಿಎಂ, ಕೆನರಾ ಬ್ಯಾಂಕ್‌, ಕುಂದಾಪುರ: 11,111 ರೂ.
    • ರಾಮ ಗಾಣಿಗ ಬಾರ್ಕೂರು ಇವರ ಪರವಾಗಿ ಪುತ್ರ ಗೋಪಾಲಕೃಷ್ಣ: 10,000 ರೂ.

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ ನೂತನ ಅಧ್ಯಕ್ಷರಾಗಿ ಆರ್.‌ ನಾಗರಾಜ ಶೆಟ್ಟಿ ಮರು ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!