Saturday, September 21, 2024
spot_img
More

    Latest Posts

    ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ ನೂತನ ಅಧ್ಯಕ್ಷರಾಗಿ ಆರ್.‌ ನಾಗರಾಜ ಶೆಟ್ಟಿ ಮರು ಆಯ್ಕೆ

    ಬೆಂಗಳೂರು: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ವಾರ್ಷಿಕ ಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದ್ದು, ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ಆರ್.‌ ನಾಗರಾಜ ಶೆಟ್ಟಿ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಡಿ.12ರಂದು ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

    ನೂತನ ಪದಾಧಿಕಾರಿಗಳ ವಿವರ

    • ಆರ್‌. ನಾಗರಾಜ ಶೆಟ್ಟಿ: ಅಧ್ಯಕ್ಷ
    • ಎನ್‌.ಸಿ. ನಾಗರಾಜ್‌: ಉಪಾಧ್ಯಕ್ಷ
    • ಕೆ.ಎಂ. ನಾರಾಯಣಪ್ಪ: ಕಾರ್ಯಾಧ್ಯಕ್ಷ
    • ಟಿ.ವಿ. ವೇಣುಗೋಪಾಲ್‌: ಕಾರ್ಯಾಧ್ಯಕ್ಷ
    • ಸೋಮಶೇಖರ್‌: ಕಾರ್ಯದರ್ಶಿ
    • ಕೆ. ದೀಪಕ್:‌ ಖಜಾಂಚಿ
    • ಬಿ.ಎಲ್.‌ ನರಸಿಂಹಮೂರ್ತಿ: ಸಹ ಕಾರ್ಯದರ್ಶಿ
    ಕರ್ನಾಟಕ ಬೀಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ವಾಸಂತಿ ಅಮರ್‌ ಅವರಿಗೆ ಸನ್ಮಾನ

    ವಾರ್ಷಿಕ ಸಭೆಯ ಸಂದರ್ಭದಲ್ಲೇ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಉದ್ಘಾಟನೆಯನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮಾಜದವರೇ ಆದ ಕೆ. ದಿನಕರ ಶೆಟ್ಟಿ ಅವರು ನೆರವೇರಿಸಬೇಕಾಗಿತ್ತು, ಆದರೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ಕಾರಣದಿಂದಾಗಿ ಅವರು ಆಗಮಿಸಲು ಆಗಿರಲಿಲ್ಲ. ಹೀಗಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು ಅವರು ಸಮಾರಂಭವನ್ನು ಉದ್ಘಾಟಿಸಿದರು.

    ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ ಭಾಸ್ಕರ ಗಾಣಿಗ ಅವರಿಗೆ ಸನ್ಮಾನ

    ವಿದ್ಯಾಜ್ಯೋತಿ ವಾರ್ಷಿಕ ಸಂಚಿಕೆ ಬಿಡುಗಡೆ: ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಆರ್. ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಮೈಸೂರು ಮಾನಸ ಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರೊ.ಜಿ. ವಿಶ್ವನಾಥಪ್ಪ ಅವರು ಸಾಧಕರನ್ನು ಸನ್ಮಾನಿಸಿದ್ದು, ಟ್ರಸ್ಟ್ ಕಾರ್ಯಾಧ್ಯಕ್ಷ ಟಿ.ವಿ. ವೇಣುಗೋಪಾಲ್, ಉಪಾಧ್ಯಕ್ಷ ಎನ್‌.ಸಿ. ನಾಗರಾಜ್ ವಿದ್ಯಾರ್ಥಿಗಳಿಗೆ ವಿದ್ಯಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು ಶ್ರೀ ಗಾಣಿಗ ವಿದ್ಯಾಜ್ಯೋತಿ-3 ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದರು.

    ವಿದ್ಯಾಜ್ಯೋತಿ ವಾರ್ಷಿಕ ಸಂಚಿಕೆ

    ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಾಣಿಗ ಸಮಾಜದ 11 ಮಂದಿ ಸಾಧಕರಿಗೆ ಸನ್ಮಾನ ಮಾಡಿ ವಿದ್ಯಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿರುವವರಿಗೆ ವಿದ್ಯಾರ್ಥಿ ವೇತನ ಮತ್ತು ಪ್ರಶಂಸನಾ ಪತ್ರ ನೀಡಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

    ಆರ್ಥಿಕ ನೆರವು: ತಂದೆಯ ಅಕಾಲಿಕ ಮರಣದಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಅನುಭವಿಸುತ್ತಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಸ್.ಎಂ. ಅನುಷಾ ಅವರಿಗೆ ಟ್ರಸ್ಟ್‌ನ ಬಡವಿದ್ಯಾರ್ಥಿಗಳ ಕಲ್ಯಾಣ ಅಭಿವೃದ್ಧಿ ಯೋಜನೆಯಡಿ ಕಾಲೇಜು ಬೋಧನಾ ಶುಲ್ಕಕ್ಕಾಗಿ 20 ಸಾವಿರ ರೂಪಾಯಿಯ ಚೆಕ್‌ ನೀಡಿ, ಸಹಾಯ ಮಾಡಲಾಗಿದೆ.

    ಮುಖ್ಯ ಅತಿಥಿಗಳು: ಈ ಸಮಾರಂಭದಲ್ಲಿ ಗಾಣಿಗ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಾಣಿಗ ಸಮಾಜದ ಉದ್ಯಮಿಗಳು, ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್‌.ಟಿ. ನರಸಿಂಹ, ಪೀಪಲ್ ಟ್ರೀ ಗ್ರೂಪ್ ಆಫ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎಸ್. ಜ್ಯೋತಿ‌ ನೀರಜ, ಗಾಣಿಗ ಸಮುದಾಯದ ದೇವನಹಳ್ಳಿ ಮುಖಂಡ ಡಾ.ಜಿ.ಎನ್. ವೇಣುಗೋಪಾಲ್, ಹೊಸಕೋಟೆಯ ಶ್ರೀ ವೆಂಕಟೇಶ್ವರ ಸರ್ವಿಸ್ ಸ್ಟೇಷನ್ ಮತ್ತು ದೈವಿಕ್ ಸುಜುಕಿ ಶೋರೂಮ್‌ನ ಟಿ.ಎಂ. ಅಶೋಕ್ ಕುಮಾರ್, ಶಿವಮೊಗ್ಗ ಶಿಕಾರಿಪುರದ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸಾಹು ಚೌಪಾಲ್‌ನ ರಾಷ್ಟ್ರೀಯ ಅಧ್ಯಕ್ಷ ಸಾಹಿಬ್ ಶರಣ್ ಸಾಹು, ಸಾಹು ಚೌಪಾಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಕೃಷ್ಣಕುಮಾರ್ ಸಾಹು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಗಾಣಿಗ ಸಮಾಜದ ಹಲವಾರು ಗಣ್ಯರು-ಸಾಧಕರನ್ನು ಸನ್ಮಾನಿಸಲಾಯಿತು. ಆ ಪೈಕಿ ತೋಟಗಾರಿಕಾ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕಿ ಭುವನೇಶ್ವರಿ ಅವರು ಆಗಮಿಸಿರದ ಕಾರಣ ಅವರನ್ನು ಹೊರತು ಪಡಿಸಿದ ಉಳಿದೆಲ್ಲ ಗಣ್ಯರು ಸಾಧಕರನ್ನು ಸನ್ಮಾನಿಸಲಾಯಿತು.

    ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ ಪಟು ಜಿ. ಜಯಲಕ್ಷ್ಮೀ ಅವರಿಗೆ ಸನ್ಮಾನ

    ಸನ್ಮಾನಿತ ಗಣ್ಯರು-ಸಾಧಕರು

    • ಬಿ.ವಿ. ವಾಸಂತಿ ಅಮರ್: ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಬೀಜ ನಿಗಮ
    • ವಿಶ್ವನಾಥ ಭಾಸ್ಕರ ಗಾಣಿಗ: ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್, ಕುಂದಾಪುರ.
    • ಕಾರ್ತಿಕ್ ಎಸ್. ಕಟೀಲ್: ಸಂಸ್ಥಾಪಕ ಅಧ್ಯಕ್ಷ, ಸ್ವರಕ್ಷಾ ಫಾರ್ ವುಮನ್ ಟ್ರಸ್ಟ್, ಕಟೀಲು, ಮಂಗಳೂರು.
    • ಜಿ. ಜಯಲಕ್ಷ್ಮಿ: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಟು, ಬಂಟ್ವಾಳ
    • ಡಾ.ಪೂರ್ಣಿಮಾ: ಸ್ತ್ರೀರೋಗ ತಜ್ಞೆ, ಪೂರ್ಣಿಮಾ ಆಸ್ಪತ್ರೆ, ಮೈಸೂರು.
    • ಡಾ.ಎಸ್. ಪ್ರದೀಪ: ಪ್ರೊಫೆಸರ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು
    • ಎಂ.ಆರ್. ನಾರಾಯಣ್: ಪ್ರಗತಿಪರ ರೈತ, ಶ್ರೀನಿವಾಸಸಂದ್ರ, ಕೆಜಿಎಫ್
    • ಡಾ.ಎಸ್.ಎಂ.ಕುಮಾರ್: ಹೃದಯ ಶಸ್ತ್ರಚಿಕಿತ್ಸಕ, ಜಯದೇವ ಆಸ್ಪತ್ರೆ, ಬೆಂಗಳೂರು.
    • ಸಂಗೀತ ವಿದ್ವಾನ್ ವರದರಾಜು: ಅಧ್ಯಕ್ಷ, ಪಲ್ಲವಿ ಎಸ್. ಚಂದ್ರಪ್ಪನವರ ಸ್ಮಾರಕ ಗಾನಸಭಾ, ಬೆಂಗಳೂರು.
    • ರೇಖಾ ವೇಣುಗೋಪಾಲ್: ಅಧ್ಯಕ್ಷೆ, ನಗರಸಭೆ, ದೇವನಹಳ್ಳಿ

    ಸನ್ಮಾನಿತ ಪದವೀಧರರು

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!