Saturday, September 21, 2024
spot_img
More

    Latest Posts

    ಜ. 13ರಂದು ವಿಶ್ವ ಗಾಣಿಗ ಸಮುದಾಯ ಚಾರಿಟಬಲ್‌ ಟ್ರಸ್ಟ್‌ ಸರ್ವ ಸದಸ್ಯರ ಸಭೆ, ವೈಕುಂಠ ಏಕಾದಶಿ ಆಚರಣೆ

    ಬೆಂಗಳೂರು: ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ನಗರೂರಿನಲ್ಲಿ ಇರುವ ವಿಶ್ವ ಗಾಣಿಗ ಸಮುದಾಯ ಚಾರಿಟಬಲ್‌ ಟ್ರಸ್ಟ್‌ (ರಿ.) ಇದರ ಸರ್ವ ಸದಸ್ಯರ ಸಭೆ ಹಾಗೂ ವೈಕುಂಠ ಏಕಾದಶಿ ಆಚರಣೆಯು ಜ. 13ರಂದು ಟ್ರಸ್ಟ್‌ ಸಭಾಭವನದಲ್ಲಿ ನಡೆಯಲಿದೆ.

    ಅಂದು ಬೆಳಗ್ಗೆ 6ರಿಂದ 12ರ ವರೆಗೆ ವೈಕುಂಠ ಏಕಾದಶಿಯ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 9.30ಕ್ಕೆ ಕಟ್ಟಡದ ದಾನಿಗಳ ನಾಮಫಲಕಗಳ ಉದ್ಘಾಟನೆ ಆಗಲಿದೆ. ಜನಾಂಗದ ಮೊದಲನೇ ಐಎಎಸ್‌ ಅಧಿಕಾರಿ ವಾಸಂತಿ ಅಮರ್‌ನಾಥ್‌ ಅವರಿಗೆ ಪೂಜ್ಯರಿಂದ ಆಶೀರ್ವಾದ ನೀಡಲಾಗುವುದು. ಮಧ್ಯಾಹ್ನ 12ಕ್ಕೆ ಕಟ್ಟಡದ ದಾನಿಗಳು, ಮಹಾಪೋಷಕರು, ಪೋಷಕರು ಹಾಗೂ ಆಜೀವ ಸದಸ್ಯರಿಗೆ ಸನ್ಮಾನ ಜರುಗಲಿದೆ. ಮಧ್ಯಾಹ್ನ 12.30ರಿಂದ 2.30ರ ವರೆಗೆ ಸರ್ವಸದಸ್ಯರ ಸಭೆ ಹಾಗೂ ಗುರುಪೀಠದ ಪೀಠಾಧಿಪತಿಯವರ ಪಟ್ಟಾಭಿಷೇಕ ಸಮಾರಂಭದ ಪೂರ್ವಭಾವಿ ಸಿದ್ಧತೆಯ ಚರ್ಚೆ ನಡೆಯಲಿದೆ.

    ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮವು ಟ್ರಸ್ಟ್‌ ಆವರಣದಲ್ಲಿರುವ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಟ್ರಸ್ಟ್‌ ಉಪಾಧ್ಯಕ್ಷ ಟಿ.ರಂಗರಾಜು ಹಾಗೂ ಇತರ ಟ್ರಸ್ಟಿಗಳು ಮತ್ತು ದಾನಿಗಳ ಸಹಾಯ-ಸಹಕಾರದಿಂದ ಇದುವರೆಗೆ ನಡೆದುಕೊಂಡು ಬಂದಿದೆ. ಈ ಬಾರಿಯ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ಟಿ.ರಂಗರಾಜು ವಹಿಸಿಕೊಂಡಿರುತ್ತಾರೆ. ಪೂಜಾ ಕಾರ್ಯಕ್ರಮವು ರಾಮನಗರದ ಎಂ.ಪಿ. ಗಣೇಶ ಭಟ್ಟ ಮತ್ತು ತಂಡದಿಂದ ನೆರವೇರಲಿದೆ. ಈ ಕಾರ್ಯಕ್ರಮದ ಕುರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯ ಮಾಡಲು ಬಯಸುವ ಆಸಕ್ತರು ರಂಗರಾಜು (9845591161) ಅವರನ್ನು ಸಂಪರ್ಕಿಸಬಹುದು.

    ಬಿ.ಜೆ. ಪುಟ್ಟಸ್ವಾಮಿ

    ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಈ ಟ್ರಸ್ಟ್‌ ರಚಿಸಿದ್ದು, ಅವರು ಇದರ ಸಂಸ್ಥಾಪಕ ಅಧ್ಯಕ್ಷರೂ ಆಗಿರುತ್ತಾರೆ. ಅವರ ನೇತೃತ್ವದಲ್ಲಿ ಟ್ರಸ್ಟ್‌ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದೆ.

    ಸಂಬಂಧಿತ ಸುದ್ದಿ: ರೈತರ ಆದಾಯ ದ್ವಿಗುಣಗೊಳಿಸಲು, ಉದ್ಯೋಗಾವಕಾಶ ಕಲ್ಪಿಸಲು ಪೂರ್ವಭಾವಿ ಸಭೆ ನಡೆಸಿದ ಬಿ.ಜೆ. ಪುಟ್ಟಸ್ವಾಮಿ

    ಸಂಬಂಧಿತ ಸುದ್ದಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ ಬಿ.ಜೆ. ಪುಟ್ಟಸ್ವಾಮಿ

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!