Sunday, September 22, 2024
spot_img
More

    Latest Posts

    ಗಾಣಿಗರ ಯಾನೆ ಸಪಲಿಗ ಸಂಘದಿಂದ ವಿದ್ಯಾರ್ಥಿ ವೇತನ, ಗೌರವಾರ್ಪಣೆ, ಸನ್ಮಾನ ಸಮಾರಂಭ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಿಜಾರ್- ಎಡಪದವು ಗಾಣಿಗರ ಯಾನೆ ಸಪಲಿಗ ಸೇವಾ ಸಂಘವು ದಿವಂಗತ ಕೆ.ವಿ.ಮಿಜಾರ್ ಹಾಗೂ ವೆಂಕಮ್ಮ ಇವರ ಸ್ಮರಣಾರ್ಥ ಜಲಜಾಕ್ಷಿ ಮತ್ತು ಲಕ್ಷ್ಮೀಶ ಕೆ. ಮಿಜಾರ್ ದಂಪತಿಗಳ ಸಹಭಾಗಿತ್ವದಲ್ಲಿ ಡಿ.25ರಂದು ತೆಂಕ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಭವನದಲ್ಲಿ ವಿದ್ಯಾರ್ಥಿವೇತನ, ಗೌರವಾರ್ಪಣೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿತ್ತು.

    ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡುವ ಜೊತೆಗೆ ಬಡಗ ಎಡಪದವು ಪಂಚಾಯತ್ ಉಪಾಧ್ಯಕ್ಷೆ ಯಶೋದಾ ಸುರೇಶ್, ಸದಸ್ಯೆ ಸವಿತಾ ಪ್ರವೀಣ್ , ತೆಂಕ ಎಡಪದವು ಪಂಚಾಯತ್ ಸದಸ್ಯ  ಗಣೇಶ್ ಕುಮಾರ್ ಅವರಿಗೆ ಗೌರವ ಅರ್ಪಣೆ ಮಾಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗೇಶ್ ಶೇರಿಗಾರ್, ಪ್ರಶಸ್ತಿ ಪುರಸ್ಕೃತ ಗಾಯಕಿ ಚೈತ್ರಾ ಗಾಣಿಗ ಕಲ್ಲಡ್ಕ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಮೂಡಬಿದಿರೆ ಸಪಲಿಗ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಬಂಗೇರ, ಸಫಲ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ – ಕೈಕಂಬ ಇದರ ಗೌರವ ಸಲಹೆಗಾರ ಹರಿದಾಸ್, ವ್ಯವಸ್ಥಾಪಕ ಪ್ರಮೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಧ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಸಪಲಿಗ, ಕಾರ್ಯದರ್ಶಿ  ನಾರಾಯಣ ಎಸ್. ಮಿಜಾರ್, ಕೋಶಾಧಿಕಾರಿ ಸದಾನಂದ್ ಎಸ್. ಕನ್ನೋರಿ , ಉಪ ಕಾರ್ಯದರ್ಶಿ  ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು . ಎಸ್. ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು, ಪ್ರಸಾದ್ ಕುಮಾರ್ ಸ್ವಾಗತಿಸಿದರು, ಎಸ್. ನಾರಾಯಣ ಅವರು ಧನ್ಯವಾದ ಸಮರ್ಪಿಸಿದರು. ವಿಶ್ವ ಗಾಣಿಗರ ಚಾವಡಿಯ ಸಂಚಾಲಕ ದೇವಿಪ್ರಸಾದ್ ಬ್ರಹ್ಮರಕೂಟ್ಲು ಉಪಸ್ಥಿತರಿದ್ದರು.

    ಅನಾರೋಗ್ಯದಿಂದ ಬಳಲುತ್ತಿರುವ ಎಡಪದವು ರಾಜೇಶ್ ಸಪಲಿಗರ ಚಿಕಿತ್ಸೆಗಾಗಿ ಧನಸಹಾಯ ನೀಡಲಾಯಿತು. ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಸಹಕರಿಸಿದ ಲಕ್ಷ್ಮೀಶ ಕೆ. ಮಿಜಾರ್ ದಂಪತಿಗೆ ಹಾಗೂ  ಕೊಡುಗೆ ನೀಡಿರುವ ಕೊಡುಗೈ ದಾನಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. ಅಂಗನವಾಡಿ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಇರುವ ವಿದ್ಯಾರ್ಥಿಗಳಿಗೆ 1.2 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

    ಸಂಬಂಧಿತ ಸುದ್ದಿ: ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದಂದು ಅವರನ್ನು ನೆನಪಿಸಿಕೊಂಡ ರಘುನಾಥ್‌

    ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ

    ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!