Saturday, September 21, 2024
spot_img
More

    Latest Posts

    ರಜತ ಮಹೋತ್ಸವ ಸಂಭ್ರಮದಲ್ಲಿ ‘ಸಂಪರ್ಕ ಸುಧಾ’

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಸಿಕ ಪತ್ರಿಕೆ ‘ಸಂಪರ್ಕ ಸುಧಾ’ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಅರ್ಥಾತ್, ‘ಸಂಪರ್ಕ ಸುಧಾ’ ಪತ್ರಿಕೆ ಆರಂಭವಾಗಿ 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಅದರ ಬೆಳ್ಳಿಹಬ್ಬವು ಇದೇ ಫೆಬ್ರವರಿ 27ರಂದು ನಡೆಯಲಿದೆ.

    ಇಂದಿನ ನಿವೃತ್ತ ಎಸಿಎಫ್​ಒ ಸಂಜೀವ ಗಾಣಿಗ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ‘ಗಾಣಿಗ ಪ್ರಕಾಶನ’ದ ಮೂಲಕ ಆರಂಭವಾದ ‘ಸಂಪರ್ಕ ಸುಧಾ’ 25 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಮಾಜದ ಹಲವರನ್ನು ಬೆಸೆದಿದ್ದು, ಸಂಘಟನೆ ಹಾಗೂ ಸಂವಹನಕ್ಕೆ ಪ್ರಮುಖ ಕೊಂಡಿಯಾಗಿದೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವೆಡೆ ಇರುವ ಸಮಾಜಬಾಂಧವರನ್ನು ಸಮಾಜದೊಂದಿಗೆ ನಿರಂತರವಾಗಿ ಸಂಪರ್ಕದಿಂದ ಇರುವಂತೆ ಮಾಡುವಲ್ಲಿ ಈ ‘ಸಂಪರ್ಕ ಸುಧಾ’ದ ಪಾತ್ರ ಅತ್ಯಂತ ಮಹತ್ವದ್ದು. ಅಂದು ಕೆಲವೇ ಮಂದಿಯ ಸಹಕಾರದಲ್ಲಿ ಹಾಗೂ ಸಹಾಯದಿಂದ ಆರಂಭವಾದ ‘ಸಂಪರ್ಕ ಸುಧಾ’ ಸಮಾಜದ ಬೆಸುಗೆಯ ಸುಧೆಯಾಗಿ ಹೊಮ್ಮಿದ್ದು, ಇದು ಇದಕ್ಕೆ ಒತ್ತಾಸೆಯಾಗಿ ಹಲವಾರು ಮಂದಿ ಜೊತೆಗಿದ್ದಾರೆ.

    ಕೆ.ಉದಯಕುಮಾರ್ ದಂಪತಿಯಿಂದ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಪರ್ಕ ಸುಧಾ ರಜತ ಮಹೋತ್ಸವ ಆಹ್ವಾನ ಪತ್ರಿಕೆ ಪೂಜೆ.

    ಅಂಥ ‘ಸಂಪರ್ಕ ಸುಧಾ’ದ ರಜತ ಮಹೋತ್ಸವ ಸಮಾರಂಭವು ಫೆ. 27ರಂದು ಉಡುಪಿ ಜಿಲ್ಲೆಯ ಕುಂದಾಪುರದ ಶ್ರೀವ್ಯಾಸರಾಜ ಕಲಾಮಂದಿರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಂದು ದಿನವಿಡೀ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಮಾತ್ರವಲ್ಲದೆ, ದೇಶದ ಹಲವೆಡೆ ಇರುವ ಸಮಾಜಬಾಂಧವರು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪಾಲ್ಗೊಳ್ಳಲಿದ್ದಾರೆ.

    ‘ಸಂಪರ್ಕ ಸುಧಾ’ ಪತ್ರಿಕೆಯ ಈಗಿನ ಅಧ್ಯಕ್ಷರಾಗಿರುವ ಎಸ್.ಕೆ. ಪ್ರಾಣೇಶ್, ಕಾರ್ಯದರ್ಶಿ ಕೆ. ಉದಯಕುಮಾರ್ ಮತ್ತಿತರರು ಈ ಸಮಾರಂಭಕ್ಕೆ ಗಣ್ಯರು-ಅತಿಥಿಗಳು ಹಾಗೂ ಸಮಾಜ ಬಾಂಧವರನ್ನು ಆಹ್ವಾನಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸದ್ಯ ಆ ಸಲುವಾಗಿ ಬೆಂಗಳೂರು ಪ್ರವಾಸದಲ್ಲಿದ್ದಾರೆ.

    ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್​. ಮಂಜುನಾಥ ಅವರಿಗೆ ಆತ್ಮೀಯ ಆಹ್ವಾನ
    ಉದ್ಯಮಿ, ಹಳ್ಳಿಮನೆ ಹೋಟೆಲ್ ಮಾಲೀಕ ನೀಲಾವರ ಎಂ. ಸಂಜೀವ ರಾವ್ ಅವರಿಗೆ ಆತ್ಮೀಯ ಆಹ್ವಾನ
    ಉದ್ಯಮಿ, ಅಭಿನಯ ಗ್ರೂಪ್ ಆಫ್​ ಹೋಟೆಲ್ಸ್​​ನ ಬಿ.ಎ.ನರಸಿಂಹಮೂರ್ತಿ ಅವರಿಗೆ ಆತ್ಮೀಯ ಆಹ್ವಾನ
    ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು ಉಪಾಧ್ಯಕ್ಷ ಕೆ.ಎಂ. ಲಕ್ಷ್ಮಣ ಮತ್ತು ಸಹೋದರ ಕೆ.ಎಂ. ರಾಮ ಅವರಿಗೆ ಆತ್ಮೀಯ ಆಹ್ವಾನ

    ‘ಸಂಪರ್ಕ ಸುಧಾ’ ಪತ್ರಿಕೆಯ ರಜತ ಮಹೋತ್ಸವ ಆಹ್ವಾನ ಪತ್ರಿಕೆಯನ್ನು ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾದ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿ ಆಮಂತ್ರಣ ಕಾರ್ಯವನ್ನು ಕೈಗೊಳ್ಳಲಾಗಿದೆ.

    ಎಸ್​.ಕೆ.ಪ್ರಾಣೇಶ್​, ಕೆ.ಉದಯಕುಮಾರ್ ಅವರ ಜೊತೆಗೆ ಶ್ರೀವೇಣುಗೋಪಾಕೃಷ್ಣ ಕ್ರೆಡಿಟ್​ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿ ರಾಜಾ ಪಡುಕೋಣೆ ಅವರು ಆಹ್ವಾನಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಸಂಪರ್ಕ ಸುಧಾ ರಜತ ಮಹೋತ್ಸವದ ಆಹ್ವಾನ ಪತ್ರಿಕೆ

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!