Saturday, September 21, 2024
spot_img
More

    Latest Posts

    ಮಾರ್ಚ್ 8ರಂದು ಗಾಣಿಗರ ಮೂಲ ನಾಗಬನದ ಪುನಃ ಪ್ರತಿಷ್ಠಾ ವರ್ಧಂತ್ಯುತ್ಸವ

    ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಳ್ಕೂರು ಕಳುವಿನಬಾಗಿಲಿನಲ್ಲಿರುವ ಗಾಣಿಗರ ಮೂಲ ನಾಗಬನದಲ್ಲಿ ಶ್ರೀ ನಾಗದೇವರ ಪುನಃ ಪ್ರತಿಷ್ಠಾ ವರ್ಧಂತ್ಯುತ್ಸವ ಮಾರ್ಚ್ 8ರಂದು ನೆರವೇರಲಿದೆ.

    ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬೆಳಗ್ಗೆ 11.30ಕ್ಕೆ ನಾಗದೇವರ ದರ್ಶನ ಇರಲಿದ್ದು, ಬಳಿಕ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

    ಬಳ್ಕೂರು ಕಳುವಿನಬಾಗಿಲು ಗಾಣಿಗ ಕುಟುಂಬಸ್ಥರ ಮೂಲ ನಾಗಬನ

    ನಾಗದೇವರ ಈ ಕಾರ್ಯಕ್ಕೆ ಈ ನಾಗಬನವನ್ನು ನಂಬಿರುವ ಕುಟುಂಬಸ್ಥರು ಹಾಗೂ ಸುತ್ತಮುತ್ತಲ ಭಕ್ತರು ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಬಳ್ಕೂರು ಕಳುವಿನಬಾಗಿಲು ಗಾಣಿಗ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ನಾಗಬನವನ್ನು ಜೀರ್ಣೋದ್ಧಾರಗೊಳಿಸಿ 2020ರ ಮಾರ್ಚ್ 8ರಂದು ಪುನಃ ಪ್ರತಿಷ್ಠಾಪನೆ ಮಾಡಲಾಗಿತ್ತು.

    ಸಂಬಂಧಿತ ಸುದ್ದಿ: ಎಡೇರಿಯಲ್ಲಿ ಪಂಜುರ್ಲಿ-ಹೈಗುಳಿ ದೈವಗಳ ಪ್ರತಿಷ್ಠಾಪನೆ

    ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!