Sunday, September 22, 2024
spot_img
More

    Latest Posts

    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಡ ಸೆರಗಿನ ಸೂಡಿಯ ಭುಗಿಲು

    ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಡ ಸೆರಗಿನ ಸೂಡಿಯು ಭುಗಿಲು ಏಳಲಿದೆ. ಅರ್ಥಾತ್, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಾದಂಬರಿ ‘ಕಾಡ ಸೆರಗಿನ ಸೂಡಿ’ ಆಧಾರಿತ ಸಿನಿಮಾ ‘ಭುಗಿಲು’ ಪ್ರದರ್ಶನ ಕಾಣಲಿದೆ.

    ವಿಶೇಷವೆಂದರೆ ಈ ಕಾದಂಬರಿಯ ಲೇಖಕ, ಈ ಸಿನಿಮಾದ ನಿರ್ದೇಶಕ ಇಬ್ಬರೂ ನಮ್ಮ ಸಮಾಜದವರೇ. ‘ಕಾಡ ಸೆರಗಿನ ಸೂಡಿ’ ಕಾದಂಬರಿಯನ್ನು ಆಧರಿಸಿ ಚಂದ್ರಕಾಂತ ಕೊಡಪಾಡಿ ಅವರು ‘ಭುಗಿಲು’ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಕಥೆ-ಸಂಭಾಷಣೆ ರಚಿಸುವ ಜೊತೆಗೆ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ.

    ಪತ್ರಕರ್ತ, ಕಾದಂಬರಿಕಾರ ಮಂಜುನಾಥ ಚಾಂದ್

    ಮಹಾತ್ಮ ಗಾಂಧೀಜಿ ಅವರು ಕುಂದಾಪುರಕ್ಕೆ ಬಂದಾಗಿನ ಕಾಲಘಟ್ಟದ ಸನ್ನಿವೇಶವನ್ನು ಆಧರಿಸಿ, ಚಾಂದ್ ಅವರು ‘ಕಾಡ ಸೆರಗಿನ ಸೂಡಿ’ ಕಾದಂಬರಿ ರಚಿಸಿದ್ದಾರೆ. ಅಂದಿನ ಕಾಲದ ಸ್ಥಳ-ಸನ್ನಿವೇಶದ ಚಿತ್ರಣ ನೀಡುವ ಈ ಕಾದಂಬರಿ ಈಗಾಗಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಾರ್ಚ್ 3ರಿಂದ 8ರವರೆಗೆ ನಡೆಯಲಿದೆ. ಅದರಲ್ಲಿ ಇಂಡಿಯನ್ ಸಿನಿಮಾ ಕಾಂಪಿಟಿಷನ್-2020 (ಚಿತ್ರಭಾರತಿ) ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ 14 ಸಿನಿಮಾಗಳ ಪೈಕಿ ‘ಭುಗಿಲು’ ಕೂಡ ಇದೆ.

    ಸಂಬಂಧಿತ ಸುದ್ದಿ: ಪತ್ರಕರ್ತ-ಕಾದಂಬರಿಕಾರ ಮಂಜುನಾಥ್ ಚಾಂದ್ ಅವರಿಗೆ ಬರಗೂರು ಪುಸ್ತಕ ಪ್ರಶಸ್ತಿ

    ಸಂಬಂಧಿತ ಸುದ್ದಿ: ‘ಸೂಡಿ’ ಬೆಳಕಲ್ಲಿ.. ‘ಕುಂದಾಪುರಕ್ಕೆ ಬಂದಿದ್ದ ಗಾಂಧಿ..’!

    ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!