Sunday, September 22, 2024
spot_img
More

    Latest Posts

    ಶ್ರೀ ಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ

    ಬೆಂಗಳೂರು: ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಗಾಣಿಗ ಸಮಾಜದ ಸಭಾಭವನದಲ್ಲಿ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲಾಗಿದೆ.

    ಹುನಗುಂದದ ಅಮರಾವತಿ ರಸ್ತೆಯಲ್ಲಿರುವ ಗಾಣಿಗ ಸಮಾಜ ಭವನದಲ್ಲಿ ಮಾ. 19ರಿಂದ ಮಾ. 21ರ ವರೆಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಪಾದಯಾತ್ರೆಯಲ್ಲಿಎಲ್ಲ ಸಮುದಾಯದವರು ಇದ್ದರೂ ಗಾಣಿಗ ಸಮಾಜದವರು ಶೇ.75ರಷ್ಟು ಇರುವುದರಿಂದ ಗಾಣಿಗ ಸಮಾಜ ಭವನದಲ್ಲಿ ಸಮಾಜಬಾಂಧವರು ಈ ಅನ್ನಸಂತರ್ಪಣೆ, ಹಣ್ಣುಹಂಪಲು ವಿತರಣೆ ಹಮ್ಮಿಕೊಂಡಿದ್ದರು.

    ಹುನಗುಂದ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ, ತಾಲೂಕು ಒಬಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯ್ಯನಗೌಡ ಶೇ ಲೆಕ್ಕಿಹಾಳ, ಜ್ಯೋತಿ ಬ್ಯಾಂಕ್ ಡೈರೆಕ್ಟರ್ ಹುಲ್ಲನಗೌಡ ಪಾಟೀಲ್, ಗಾಣಿಗ ಸಮಾಜದ ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಮೇಟಿ, ಹುನಗುಂದ ತಾಲೂಕು ಬಿಜೆಪಿ ಯುವ ಮೋರ್ಚಾ  ಉಪಾಧ್ಯಕ್ಷ ಬಸನಗೌಡ ಶೇ ಪರತಗೌಡರ, ಬಸವರಾಜ್ ಸಜ್ಜನ, ಮಂಜುನಾಥ ಮಾ ವಂದಾಲಿ, ಅಂಬರೀಶ ಹುಬ್ಬಳ್ಳಿ, ನಾಗರಾಜ್ ಸಜ್ಜನ, ಶ್ರೀನಿವಾಸ್ ಹೊಸಮನಿ, ಶರಣಪ್ಪ ಲಕ್ಷಕೊಪದ  ಮತ್ತು ಸಮಾಜದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಶರಣು ರಾಮನಗೌಡ ಲೆಕ್ಕಿಹಾಳ ಅವರ ಜೊತೆಗೆ ಹುನಗುಂದ ಮತ್ತು ಇಳಕಲ್ಲ ಗಾಣಿಗ ಸಮಾಜದ ಯುವ ಮುಖಂಡರು ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

    ಸಂಬಂಧಿತ ಸುದ್ದಿ: ಚಾಮರಾಜಪೇಟೆಗಾಗಿ ಸಂಸದರು-ಶಾಸಕರಿಂದ ಮಾಸಿಕ ಸಭೆ: ಪಿ.ಸಿ.ಮೋಹನ್‌ ಭರವಸೆ

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಸಂಬಂಧಿತ ಸುದ್ದಿ: ಅಂತಾರಾಷ್ಟ್ರೀಯ ಸೈಕ್ಲಿಂಗ್ ಸಾಧಕ ರಾಜು ಭಾಟಿಗೆ ಏಕಲವ್ಯ ಪ್ರಶಸ್ತಿ ಪ್ರದಾನ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!