Sunday, September 22, 2024
spot_img
More

    Latest Posts

    ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ವಿಧ್ಯುಕ್ತ ಉದ್ಘಾಟನೆ

    ಬೆಂಗಳೂರು:  ಗಾಣಿಗ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದಾತ್ತ ಉದ್ದೇಶದಿಂದ ಸ್ಥಾಪಿಸಲಾಗಿರುವ ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ (ರಿ.) ಏಪ್ರಿಲ್‌ 14ರಂದು ವಿಧ್ಯುಕ್ತವಾಗಿ ಉದ್ಘಾಟನೆಯಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಟ್‌ಬೇಲ್ತೂರಿನಲ್ಲಿರುವ ಶ್ರೀರಾಮಲಕ್ಷ್ಮಣ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಯುವ ಮಾನಸ ಗಾಣಿಗ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಎಚ್. ಸುಬ್ಬಯ್ಯ ಗಾಣಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ಅತಿಥಿ

    ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟಬಲ್‌ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟೀ ಆರ್. ನಾಗರಾಜ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಅಧ್ಯಕ್ಷ ವಾಸುದೇವ ಬೈಕಾಡಿ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಕುಂದಾಪುರ ತಾಲೂಕು ಗಾಣಿಗಾ ಸೇವಾ ಸಂಘ (ರಿ.) ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರಕನ್ನಡ ಜಿಲ್ಲಾ ಗಾಣಿಗ ಸಂಘ (ರಿ.) ಅಧ್ಯಕ್ಷ ದಾಮೋದರ ಕೆ. ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘ (ರಿ.) ಅಧ್ಯಕ್ಷ ನಾಗರಾಜ, ಶಿರಸಿಯ ಕೆಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಶೆಟ್ಟಿ, ಬೆಂಗಳೂರಿನ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಗೋಪಾಲಕೃಷ್ಣ, ಸಂಪರ್ಕ ಸುಧಾ ಸಂಪಾದಕ ರಘುರಾಮ ಬೈಕಾಡಿ, ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಣೇಶ ಚೆಲ್ಲಿಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ ಗಾಣಿಗ, ಉದ್ಯಮಿ  ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಮಾಲ್ತಾರು, ಹೊನ್ನಾವರ ಬಾಸ್ಕೇರಿಯ ಜೀವನ್ ಸುಪಾರಿಯ ಸುರೇಶ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು.

    ವಿದ್ಯೆಯನ್ನು ಪರಿಶ್ರಮದಿಂದ ಪಡೆಯುವುದೇ ವಿನಹ ಆಲಸಿತನದಿಂದ ಅಲ್ಲ. ಭವಿಷ್ಯವನ್ನು ರೂಪಿಸಿಕೊಳ್ಳಬಹುದಾದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು.

    | ಬಿ. ಮಂಜುನಾಥ, ಸಂಸ್ಥಾಪಕ, ಸಾಧನಾ ಅಕಾಡೆಮಿ, ಶಿಕಾರಿಪುರ, ಶಿವಮೊಗ್ಗ

    ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ಮರಳಿ ಕೊಡುತ್ತೇವೆ ಎನ್ನುವುದೇ ಮುಖ್ಯ. ಇದಕ್ಕೆ ನಿದರ್ಶನವಾಗಿ ನಮ್ಮ ಮುಂದಿರುವ ಸುಬ್ಬಯ್ಯ ಗಾಣಿಗ ಅವರ ಸಮಾಜಮುಖಿ ಕಾರ್ಯವೇ ಸಾಕ್ಷಿ. ಇಳಿವಯಸ್ಸಿನಲ್ಲೂ  ಗಾಣಿಗ ಸಮುದಾಯದ ಬಗ್ಗೆ ಇವರಿಗೆ ಇರುವ ಅಭಿಮಾನ ಕಾಳಜಿ ನಮಗೆಲ್ಲರಿಗೂ ಸ್ಫೂರ್ತಿ ಹಾಗೂ ಮಾದರಿ.

    | ಸುಭಾಷ್‌ ಎಂ. ಶೆಟ್ಟಿ, ಟ್ರಸ್ಟ್‌ ಸದಸ್ಯ.

    ಭವಿಷ್ಯ ಚೆನ್ನಾಗಿರಬೇಕೆಂದರೆ ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಇರಬಹುದು, ಸ್ಪರ್ಧಾತ್ಮಕ ಪರೀಕ್ಷೆ ಇರಬಹುದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಶ್ರಮದಿಂದ ಮುಂದುವರಿಯಬೇಕು.

    | ಬಿ.ಕೆ. ಬಸವರಾಜ್‌, ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ.

    ಟ್ರಸ್ಟ್‌ ಉದ್ಘಾಟನಾ ಸಮಾರಂಭ

    ಟ್ರಸ್ಟ್‌ಗೆ ದೇಣಿಗೆ

    ಟ್ರಸ್ಟ್‌ಗೆ ದೇಣಿಗೆಯಾಗಿ ಮಂಜುನಾಥ ಸೇಲಂ ಅವರಿಂದ ಒಂದು ಲಕ್ಷ ರೂಪಾಯಿ ಚೆಕ್‌ ಹಸ್ತಾಂತರ

    ಮಂಜುನಾಥ್ ಸೇಲಂ ಅವರು ಒಂದು ಲಕ್ಷ ರೂಪಾಯಿ, ಶ್ರೀನಿವಾಸ ರಾವ್‌ ಅವರು 50 ಸಾವಿರ ರೂ., ಸಂತೋಷ್‌ ಆನಂದ್‌ ಅವರು 25 ಸಾವಿರ ರೂ. ಹಾಗೂ ನಾಗರಾಜ್‌ ಮಾಲ್ತಾರು ಅವರು 5 ಸಾವಿರ ರೂಪಾಯಿಯನ್ನು ಟ್ರಸ್ಟ್‌ಗೆ ದೇಣಿಗೆಯಾಗಿ ನೀಡಿದರು.

    ಸನ್ಮಾನ

    ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ತಜ್ಞ ಡಾ.ಎಸ್. ಎಂ. ಜೈಕುಮಾರ, ಬೈಂದೂರು ಪೋಲಿಸ್ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಕಾಣಿ, ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನಾಗಭೂಷಣ ಕಲ್ಮನೆ, ‘ಯಕ್ಷ ಸಿರಿ’ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗ, ರಾಜ್ಯ ಮಾನವ ಹಕ್ಕು ಆಯೋಗ ಕಾರ್ಯದರ್ಶಿ ದಿನೇಶ ಕೋಟ, ಸಾಗರದ ಹಿರಿಯ ವಕೀಲ-ಪತ್ರಕರ್ತ ಎಂ. ರಾಘವೇಂದ್ರ, ಮಣಿಪಾಲ ಎಮ್‌ಐಟಿಯ ಡಾ.ಪೂರ್ಣಿಮಾ ಪಾಂಡುರಂಗ ಕುಂದಾಪುರ, ಭದ್ರಾವತಿ ವಿಐಎಸ್ಎಲ್‌ನ ನಿವೃತ್ತ ಇಂಜಿನಿಯರ್‌ ಕುಸುಮಾಕರ, ಮುಂಬೈನ ಡಾ.ರಕ್ಷಾ ರತ್ನಾಕರ ಗಾಣಿಗ, ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ವಿಶ್ವನಾಥ ಭಾಸ್ಕರ ಗಾಣಿಗ, ಬೈಂದೂರಿನ ಡಾ.ಸರಸ್ವತಿ, ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ, ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶೇಖರ ಗಾಣಿಗ ಬೀಜಮಕ್ಕಿ, ಚಿತ್ರಕಲಾ ಕಲಾವಿದ ತಗ್ಗರ್ಸೆ ಗಿರೀಶ ಗಾಣಿಗ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಸನ್ಮಾನಿತರ ಪರವಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಡಾ.ಎಸ್.ಎನ್. ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಶುಭಹಾರೈಸಿದರು. ಕೆಪಿಟಿಸಿಎಲ್‌ ಇಂಜಿನಿಯರ್‌ ಸ್ಮಿತಾ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿ ಆಗಿ ನಮಗೆಲ್ಲರಿಗೂ ಸ್ಪೂರ್ತಿಯಂತಿದ್ದಾರೆ, ಎಂದು ಅವರನ್ನು ಇದೇ ಸಂದರ್ಭದಲ್ಲಿ ಸಮಾಜಕ್ಕೆ ಪರಿಚಯಿಸಲಾಯಿತು.

    ಪುಸ್ತಕ ಲೋಕಾರ್ಪಣೆ

    ಉತ್ತರ ಸನ್ನಿಧಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡಪ್ರಭದ ನಿವೃತ್ತ ಹಿರಿಯ ಸುದ್ದಿ ಸಂಪಾದಕ ಡಾ.ಎಂ.ವಾಸುದೇವ ಶೆಟ್ಟಿ

    ಯುವ ಮಾನಸ ಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ, ಶಿವಮೊಗ್ಗದ ಎಚ್. ಸುಬ್ಬಯ್ಯ ಗಾಣಿಗರು ಬರೆದಿರುವ ಹಾಗೂ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿರುವ ʼಉತ್ತರದ ಸನ್ನಿಧಿʼ ಪುಸ್ತಕವನ್ನು ಕನ್ನಡಪ್ರಭದ ನಿವೃತ್ತ ಹಿರಿಯ ಸುದ್ದಿ ಸಂಪಾದಕ ಡಾ.ಎಂ.ವಾಸುದೇವ ಶೆಟ್ಟಿಯವರು ಲೋಕಾರ್ಪಣೆ ಮಾಡಿದರು.

    ಸಮಾರೋಪ ಸಮಾರಂಭ

    ಬಳಿಕ ಯುಪಿಎಸ್‌ಸಿ-ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಎನ್ನುವ ಕುರಿತು ಸಾಧನಾ ಅಕಾಡೆಮಿಯ ಬಿ. ಮಂಜುನಾಥ ಅವರು ಉಪನ್ಯಾಸ ನೀಡಿದರು.  ಮಧ್ಯಾಹ್ನ 3ರಿಂದ ಟ್ರಸ್ಟ್ ವಿಚಾರವಾಗಿ ವಿಚಾರ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಿತು.

    ಮಂಜುನಾಥ ಶಿಕಾರಿಪುರ ಅವರು ಸುಮಾರು 200 ವಿದ್ಯಾರ್ಥಿಗಳಿಗೆ ಮುಂದಿನ ಓದಿಗೆ ಅಗತ್ಯವುಳ್ಳ 350 ರೂ. ಬೆಲೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು.

    ಕಾರ್ಯಕ್ರಮದ ನಿರೂಪಕ ಕೆ.ಎಂ. ಶೇಖರ್ ಟ್ರಸ್ಟ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಟ್ರಸ್ಟ್ ಸಂಸ್ಥಾಪಕರಾದ ಸುಬ್ಬಯ್ಯ ಅವರ ಅಭಿಲಾಷೆಯಂತೆ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುತುವರ್ಜಿ ವಹಿಸಿ ಐಎಎಸ್-ಐಪಿಎಸ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ಮನವಿ ಮಾಡಿದರು.

    ಉದ್ಘಾಟನಾ ಸಮಾರಂಭದ ಕಾರ್ಯಕ್ರಮಕ್ಕೆ ಸಭಾಭವನವನ್ನು ಒದಗಿಸಿ, ಉಪಚಾರವನ್ನು ಉಚಿತವಾಗಿ ಏರ್ಪಡಿಸಿದ ಗಾಣಿಗ ಸಮುದಾಯದ ಕೆ.ಎಂ. ರಾಮ, ಕೆ.ಎಂ.ಲಕ್ಷ್ಮಣ, ಕೆ.ಎಂ. ಶೇಖರ ಅವರ ಕೊಡುಗೆಯನ್ನು ಸ್ಮರಿಸಿ ಧನ್ಯವಾದ ಸಲ್ಲಿಸಲಾಯಿತು.

    ಟ್ರಸ್ಟ್‌ಗೆ ದೇಣಿಗೆ ನೀಡುವವರು ಈ ಕೆಳಗಿನ ಖಾತೆಗೆ ಹಣ ರವಾನಿಸಬಹುದು.

    • ಖಾತೆ ಹೆಸರು: YUVAMANASA GANIGA EDUCATIONAL AND CHARITABLE TRUST UPPUNDA
    • ಖಾತೆ ಸಂಖ್ಯೆ: 9712000100006701
    • ಐಎಫ್‌ಎಸ್‌ಸಿ ಕೋಡ್: KARB000971       
    • ಬ್ಯಾಂಕ್‌ ಹೆಸರು, ಶಾಖೆ: ಕರ್ನಾಟಕ ಬ್ಯಾಂಕ್‌, ಬೈಂದೂರು

    ಸಂಬಂಧಿತ ಸುದ್ದಿ: ಆ ದಿನಗಳ ʼಗಾಣಿಗರ ಬಂಧುʼ..!

    ಸಂಬಂಧಿತ ಸುದ್ದಿ: ಪುಟ್ಟ ಸ್ವಾಮಿಯನ್ನು ಕೂರಿಸಲು ಹೋಗಿ ತಾವೇ ಪೂರ್ಣ ಸ್ವಾಮಿ ಆಗಿದ್ದೇಕೆ?

    ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ವುಶು ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದ ಅವ್ನಿ-ಅನ್ಶಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!