Saturday, September 21, 2024
spot_img
More

    Latest Posts

    ಕೃತಜ್ಞತಾಪೂರ್ವಕವಾಗಿ ನಡೆಯಿತು ಗಾಣದೇವಿಗೆ ಉಡಿತುಂಬುವ ಪೂಜೆ

    ಬೆಂಗಳೂರು: ಕಾರ ಹುಣ್ಣಿಮೆ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಗಾಣದೇವಿಯ ಉಡಿತುಂಬವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಗವಾಗಿ ನೆರವೇರಿತು.

    ಕಾರಹುಣ್ಣಿಮೆಯ ದಿನ ಗಾಣದ ಎತ್ತುಗಳನ್ನು ಸಿಂಗರಿಸಿ ಪೂಜಿಸಿ ಗಾಣದೇವಿಯ ಉಡಿಯ ತುಂಬಿ ಪೂಜೆ ಮಾಡುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

    ಅನ್ನ ನೀಡಿದ ದೇವತೆ ಗಾಣದೇವಿ ಪೂಜೆ ಮಾಡಿ ಉಡಿಯ ತುಂಬುವುದರಿಂದ ಕುಲದೇವತೆಯ ಆಶೀರ್ವಾದ ವರ್ಷಪೂರ್ತಿ ಇರುತ್ತದೆ ಎಂದು ನಂಬಿಕೆಯೊಂದಿಗೆ ಈ ಸಂಪ್ರದಾಯ ನಡೆದುಬಂದಿದೆ.

    ರಾಜ್ಯದ ಹಲವು ಹಳ್ಳಿಗಳಲ್ಲಿ ಕಲ್ಲಿನ ಗಾಣಗಳು ಇಂದಿಗೂ ಇವೆ. ಆಧುನಿಕತೆಯ ಭರಾಟೆಯಲ್ಲಿ ಎತ್ತುಗಳು ಇಲ್ಲದಿದ್ದರೂ ಈ ಗಾಣಗಳು ಕುಲಕಸುಬಿನ ಕುರುಹುಗಳಾಗಿದ್ದು, ಇದು ಗಾಣಿಗರಿಗೆ ಅನ್ನ ನೀಡಿದ ಗಾಣದೇವಿ ಎಂದೇ ಹೇಳುವ ಜನರು ಕಾರಹುಣ್ಣಿಮೆಯಂದು ಉಡಿತುಂಬಿ ಪೂಜಿಸುತ್ತಾರೆ.

    ಈ ಕಾರಹುಣ್ಣಿಮೆಯಂದು ಹೀಗೆ ಪೂಜಿಸಿದ ಗಾಣಿಗ ಸಮಾಜದ ಬಂಧುಗಳು, ಹಿರಿಯರು ಗಾಣದೇವಿಗೆ ನಮಿಸಿ ಆಶೀರ್ವಾದ ಕೃಪೆಗೆ ಪಾತ್ರರಾದರು.

    ಸಂಬಂಧಿಸಿದ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…

    ಸಂಬಂಧಿಸಿದ ಸುದ್ದಿ: ಅದ್ಧೂರಿ ಗಾಣದ ಕೊಟ್ಯದ ಪ್ರವೇಶೋತ್ಸವ ಮತ್ತು ಶನಿಪೂಜೆ

    ಸಂಬಂಧಿಸಿದ ಸುದ್ದಿ: ಶತಾಯುಷ್ಯದ ಹೊಸ್ತಿಲಲ್ಲಿ ತಾಯಿ; ನೂರನೇ ಜನ್ಮದಿನದ ಶುಭಾಶಯ‌ ಕೋರಿದ ಪುತ್ರ ಮೋದಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!