Saturday, September 21, 2024
spot_img
More

    Latest Posts

    ಹನುಮನ ಸನ್ನಿಧಿಯಲ್ಲಿ ಗಾಣಿಗ ಸಮುದಾಯದಿಂದ ದಂಡಾವಳಿ ಪೂಜೆ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಶಾಂತಿಕಾಂಬಾ ದೇವಸ್ಥಾನದಲ್ಲಿನ ಚಂದಾವರ ಸೀಮೆಯ ಹನುಮಂತನ ಸನ್ನಿಧಾನದಲ್ಲಿ ಗಾಣಿಗ ಸಮುದಾಯದವರಿಂದ ದಂಡಾವಳಿ ಪೂಜೆ ನೆರವೇರಿದೆ.

    ಕುಮಟಾ ಗಾಣಿಗ ಯುವ ಬಳಗ (ರಿ.) ನೇತೃತ್ವದಲ್ಲಿ ಜುಲೈ 2ರಂದು ಈ ಪೂಜೆ ನಡೆದಿದ್ದು, ಬಳಗದ ಪದಾಧಿಕಾರಿಗಳು ಮಾತ್ರವಲ್ಲದೆ ಸಮಾಜದ ಅನೇಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.

    ಅಂದು ಶನಿವಾರ ಬೆಳಗ್ಗೆ ಫಲಪಂಚಾಮೃತ ಅಭಿಷೇಕ ಸೇವೆಯನ್ನು ನಡೆಸಿದರು. ನಂತರ ರಾತ್ರಿ 9 ಗಂಟೆಗೆ ದಂಡಾವಳಿ ಪೂಜೆಯನ್ನು ನೆರವೇರಿಸಲಾಯಿತು.

    ಹನುಮಂತನಿಗೆ ಕೈಗೊಂಡ ಈ ಸೇವೆಯಲ್ಲಿ ಬಳಗದ ಪದಾಧಿಕಾರಿಗಳು, ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಆಂಜನೇಯನ ಅನುಗ್ರಹಕ್ಕೆ ಪಾತ್ರರಾದರು. ಈ ಪೂಜಾ ಕಾರ್ಯಕ್ಕೆ ಸ್ವ-ಇಚ್ಛೆಯಿಂದ ಬಳಗದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ದೇಣಿಗೆಯನ್ನು ನೀಡಿದ್ದು ಅವರಿಗೆ ಬಳಗದ ವತಿಯಿಂದ ಧನ್ಯವಾದವನ್ನು ಅರ್ಪಿಸುತ್ತಿದ್ದೇವೆ ಎಂದು ಯುವ ಬಳಗದ ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು..

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಸಂಬಂಧಿತ ಸುದ್ದಿ: ನ. 14ರಂದು ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಗಾಣಿಗರ ದೀಪೋತ್ಸವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!