Saturday, September 21, 2024
spot_img
More

    Latest Posts

    ಎಸ್‌ಜಿಇಸಿಟಿ ವತಿಯಿಂದ ಶೀಘ್ರದಲ್ಲೇ ಕಂಪ್ಯೂಟರ್‌ ತರಬೇತಿ ಕೇಂದ್ರ ಆರಂಭ

    ಬೆಂಗಳೂರು: ಗಾಣಿಗ ಸಮಾಜಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ರಿ.) ಇದರ ಆಡಳಿತ ಮಂಡಳಿಯ ಸಭೆಯು ಜುಲೈ 9ರಂದು ಬೆಂಗಳೂರಿನಲ್ಲಿ ನಡೆಯಿತು.

    ಮಹಾಲಕ್ಷ್ಮಿ ಬಡಾವಣೆಯ ನಂದಿನಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ಗಣೇಶ್‌ ಬ್ಲಾಕ್‌ನಲ್ಲಿರುವ ಶಾಖಾ ಕಚೇರಿಯಲ್ಲಿ ನಡೆದ ಮೊದಲ ಸಭೆ ಇದಾಗಿದೆ.

    ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಇನ್‌ಫಾರ್ಮೇಷನ್‌ ಟೆಕ್ನಾಲಜಿಯಡಿ ಕಂಪ್ಯೂಟರ್‌ ತರಬೇತಿ ಕೇಂದ್ರವನ್ನು ಇಲ್ಲಿ ತೆರೆಯಲು ಉದ್ದೇಶಿಸಲಾಗಿದ್ದು, ಈ ಕೇಂದ್ರವು ಇದೇ ತಿಂಗಳ 31ರಂದು ಉದ್ಘಾಟನೆಗೊಳ್ಳಲಿದೆ. ಈ ಕೇಂದ್ರಕ್ಕೆ ಪ್ರವೇಶಾತಿ ಆಗಸ್ಟ್‌ 1ರಂದು ಆರಂಭಗೊಳ್ಳಲಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಆರ್.‌ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

    ಈ ಶಾಖೆಗೆ ಸಂಬಂಧಿಸಿದಂತೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಅಧಿಕಾರಾವಧಿ 3 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವ ಜೊತೆಗೆ ಕಂಪ್ಯೂಟರ್‌ ತರಬೇತಿ ಕೇಂದ್ರದ ಆರಂಭ ಹಾಗೂ ಅದು ಸುಸೂತ್ರವಾಗಿ ಕಾರ್ಯನಿರ್ವವಹಿಸುವ ನಿಟ್ಟಿನಲ್ಲಿಯೂ ತೊಡಗಿಕೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ. ಹಾಗೇಯ ಸಮಿತಿಯ ಎಲ್ಲ ನಿರ್ಧಾರಗಳನ್ನು ಆಡಳಿತ ಟ್ರಸ್ಟಿಗಳ ಮುಂದಿರಿಸಿ ಅನುಮೋದನೆ ಪಡೆಯಬೇಕು ಎಂಬುದಾಗಿಯೂ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಆರ್.ನಾಗರಾಜ ಶೆಟ್ಟಿ ಅವರಿಂದ ಮಾಹಿತಿ

    ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು

    • ಅಧ್ಯಕ್ಷ: ಆರ್.‌ ನಾಗರಾಜ ಶೆಟ್ಟಿ, ಮ್ಯಾನೇಜಿಂಗ್‌ ಟ್ರಸ್ಟೀ.
    • ನಿರ್ದೇಶಕ: ಬಿ.ಕೆ.ಬಸವರಾಜ, ನಿವೃತ್ತ ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ.
    • ಉಪ ನಿರ್ದೇಶಕ: ಡಾ.ಜಿ.ವಿಶ್ವನಾಥಪ್ಪ, ಪ್ರೊಫೆಸರ್‌, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು.
    • ಕಾರ್ಯದರ್ಶಿ: ಸೋಮಶೇಖರ, ಟ್ರಸ್ಟೀ
    • ಜಂಟಿ ಕಾರ್ಯದರ್ಶಿ: ನರಸಿಂಹಮೂರ್ತಿ, ಟ್ರಸ್ಟೀ
    • ಕೋಶಾಧಿಕಾರಿ: ದೀಪಕ್‌ ಕೆ., ಟ್ರಸ್ಟೀ
    • ತರಬೇತಿ ಕೇಂದ್ರದ ಮುಖ್ಯಸ್ಥ: ಆರ್.ವಿ.ನಾಗಭೂಷಣ, ಟ್ರಸ್ಟೀ
    • ಲೆಕ್ಕಪರಿಶೋಧಕ: ಆರ್. ಸತೀಶ್‌, ಸಿಎ.
    • ಕಾನೂನು ಸಲಹೆಗಾರ: ಕೆ.ಬಿ.ಸದಾಶಿವಪ್ಪ, ವಕೀಲ.
    • ಮುಖ್ಯ ಸಲಹೆಗಾರರು: ಕೆ.ಎಂ.ನಾರಾಯಣಪ್ಪ, ಟಿ.ವಿ.ವೇಣುಗೋಪಾಲ, ಎನ್‌.ಸಿ.ನಾಗರಾಜ.

    ಸಂಬಂಧಿತ ಸುದ್ದಿ: ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು..

    ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಯುವಕ ಮಂಡಳದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಸಂಘಟನೆಗಾಗಿ ಶೀಘ್ರವೇ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಅವರಿಂದ ರಾಜ್ಯಾದ್ಯಂತ ಪ್ರವಾಸ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!