ಬೆಂಗಳೂರು: ಕಂಪ್ಯೂಟರ್ ತರಬೇತಿ ನೀಡಲೆಂದೇ ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವ ಎಸ್ಜಿಇಸಿಟಿ ಅಕಾಡೆಮಿ ಜುಲೈ 31ರಂದು ಸಚಿವ ಕೆ. ಗೋಪಾಲಯ್ಯ ಅವರಿಂದ ಉದ್ಘಾಟನೆಗೊಂಡಿದೆ.
ಆಗಸ್ಟ್ 1ರಿಂದ ಈ ಅಕಾಡೆಮಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಆ.15ರ ಒಳಗೆ ಆಫ್ಲೈನ್ ಕ್ಲಾಸ್ಗಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಶುಲ್ಕ ವಿನಾಯಿತಿ ಇರುತ್ತದೆ. ಆ ಬಳಿಕ ನೋಂದಣಿ ಮಾಡಿಕೊಳ್ಳುವವರು ಆಯಾ ಕೋರ್ಸ್ಗೆ ಸಂಬಂಧಿತ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಗಣೇಶ್ ಬ್ಲಾಕ್ನ ಜೆ.ಬಿ. ಕಾವಲ್ನ ನಂ. 14/5ರಲ್ಲಿನ ಎಸ್ಜಿಇಸಿಟಿ ಕಚೇರಿಯಲ್ಲಿ ಈ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿಯಡಿ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.
ಅಕಾಡೆಮಿಯಲ್ಲಿನ ಕೋರ್ಸ್ಗಳು
ಬಿಸಿಸಿ: ಶುಲ್ಕ- 1,500 ರೂ., ಪರೀಕ್ಷಾ ಶುಲ್ಕ- 250 ರೂ.
ಸಿಸಿಸಿ: ಶುಲ್ಕ- 3,000 ರೂ., ಪರೀಕ್ಷಾ ಶುಲ್ಕ- 400 ರೂ.
ಸಿಸಿಸಿ ಪ್ಲಸ್: ಶುಲ್ಕ- 5,000 ರೂ., ಪರೀಕ್ಷಾ ಶುಲ್ಕ- 550 ರೂ.
ಇಸಿಸಿ: ಶುಲ್ಕ 7,000 ರೂ., ಪರೀಕ್ಷಾ ಶುಲ್ಕ- 600 ರೂ.
ಎಸ್ಸಿ-ಎಸ್ಟಿ ಮತ್ತು ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 25 ರಿಯಾಯಿತಿ ಇರಲಿದೆ. ಗಾಣಿಗ ಸಮದಾಯದ ವಿದ್ಯಾರ್ಥಿಗಳಿಗೆ ಶುಲ್ಕದ ಮೊತ್ತದ ಶೇ. 50ರಷ್ಟು ಸ್ಕಾಲರ್ಶಿಪ್ ನೀಡಲಾಗುವುದು.
ನೋಂದಣಿಗೆ ಈ ಲಿಂಕ್ ಕ್ಲಿಕ್ ಮಾಡಿ: https://docs.google.com/forms/d/e/1FAIpQLSd1AnwVsjlT2EVxTlo9a9ZVjvPkT0tYX3kXm3Fs8YfI88dlNw/viewform
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆಗಳು
9739583550/ 9483141411
ಸಂಬಂಧಿತ ಸುದ್ದಿ: ಸಚಿವ ಗೋಪಾಲಯ್ಯ ಅವರಿಂದ ಎಸ್ಜಿಇಸಿಟಿ ಅಕಾಡೆಮಿ ಉದ್ಘಾಟನೆ
ಸಂಬಂಧಿತ ಸುದ್ದಿ: ಬಾಲರ್ಕ ಫಿಟ್ನೆಸ್ ಟೀಮ್ ಚಾಂಪಿಯನ್; ಬಾಲರ್ಕ ಪವರ್ಲಿಫ್ಟರ್ಸ್ ಸ್ಟ್ರಾಂಗ್..
ಸಂಬಂಧಿತ ಸುದ್ದಿ: ಗಾಣಿಗ-ಗಾಣಿಗೇರ್ ಬೇರೆಯಲ್ಲ, ಹಿಂದೂ ಲಿಂಗಾಯತ-ಗಾಣಿಗ ಲಿಂಗಾಯತ ಎರಡೂ ಒಂದೇ..