Saturday, September 21, 2024
spot_img
More

    Latest Posts

    ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 108 ದಿನಗಳ ಸಂಧ್ಯಾ ಭಜನೆಗೆ ಚಾಲನೆ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಜಪೆಯ ಅದ್ಯಪಾಡಿ ಬೀಬಿಲಚ್ಚಿಲ್‌ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 108 ದಿನಗಳ ಸಂಧ್ಯಾ ಭಜನೆಯೆಂಬ ವಿನೂತನ ಪರಿಕಲ್ಪನೆಯೊಂದಿಗೆ ದೇಗುಲದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳಿಗೆ ಅ.17ರಂದು ಚಾಲನೆ ನೀಡಲಾಯಿತು.

    ಅದ್ಯಪಾಡಿಗುತ್ತು ರಾಜೀವ ಆಳ್ವ ಅವರು ದೀಪ ಪ್ರಜ್ವಲನೆಗೊಳಿಸಿ ಸಂಧ್ಯಾ ಭಜನೆಗೆ ಶುಭ ಕೋರಿದರು. ಕ್ಷೇತ್ರದ ಆಡಳಿತ ಮೊಕ್ತಸರ ಮೋನಪ್ಪ ಮೇಸ್ತ್ರಿ, ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್, ಕೊಳಂಬೆ-ತಳಕಲ ಶ್ರೀ ಕಾಶೀ ವಿಶ್ವನಾಥೇಶ್ವರ ದೇವಸ್ಥಾನದ ಅರ್ಚಕ ದಿನೇಶ್ ಭಟ್, ಕರ್ಣಾಟಕ ಬ್ಯಾಂಕ್ ಅದ್ಯಪಾಡಿ ಶಾಖಾ ಪ್ರಬಂಧಕ ಹಿತೇಶ್ ಕುಮಾರ್, ಪ್ರಮುಖರಾದ ಸುಂದರ ಬಂಗೇರ, ದೇವದಾಸ್ ನಾಯಕ್, ಶೇಖರ ಸಫಲಿಗ ಮತ್ತಿತರರು ಉಪಸ್ಥಿತರಿದ್ದರು. ತಿಲಕ್ ಶೆಟ್ಟಿ ಪೆರಾರ ಕಾಠ್ಯಕ್ರಮ ನಿರೂಪಿಸಿದರು.

    108 ತಂಡಗಳು ಭಾಗಿ: ಈ ಸಂಧ್ಯಾ ಭಜನೆ 2023ರ ಜು.31ರವರೆಗೆ ಪ್ರತಿನಿತ್ಯವೂ ನಡೆಯಲಿದೆ. ಪ್ರತಿದಿನ ಸಂಜೆ 5ರಿಂದ 7ರವರೆಗೆ ದಿನಕ್ಕೊಂದು ತಂಡದಂತೆ 108 ದಿನಗಳಲ್ಲಿ 108 ತಂಡಗಳು ಸಂಧ್ಯಾ ಭಜನೆಯಲ್ಲಿ ಪಾಲ್ಗೊಳ್ಳಲಿವೆ.

    ಏಕಾಹ ಭಜನೆ: 108 ದಿನಗಳ ಸಂಧ್ಯಾ ಭಜನೆ 2023ರ ಜ.31ರಂದು ಮುಕ್ತಾಯಗೊಂಡು ಫೆ.1ರ ಸೂರ್ಯೋದಯದವರೆಗೆ ಏಕಾಹ ಭಜನೆ ನಡೆಯಲಿದ್ದು, ನಾಡಿನ ಹಲವು ಪ್ರಸಿದ್ಧ ಭಜನಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. 2023ರ ಫೆ.2ರಂದು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ.

    ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ

    ಸಂಬಂಧಿತ ಸುದ್ದಿ: ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ, ಬ್ರಹ್ಮ ನಾಗಮಂಡಲ

    ಸಂಬಂಧಿತ ಸುದ್ದಿ:ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!