Saturday, September 21, 2024
spot_img
More

    Latest Posts

    ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ

    ಬೆಂಗಳೂರು: ಪುರಾಣಪ್ರಸಿದ್ಧ ಗೋಕರ್ಣ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಕಾರ್ತಿಕ ಪೂಜೆಯಲ್ಲಿ ಪ್ರಥಮ ಪೂಜೆ ಗಾಣಿಗ ಸಮುದಾಯದಿಂದ ನಡೆಯುವುದು ಸಂಪ್ರದಾಯ. ಅದೇ ರೀತಿ ಈ ಸಲದ ಪ್ರಥಮ ಕಾರ್ತಿಕ ಪೂಜೆ ಗಾಣಿಗ ಸಮಾಜದವರಿಂದ ನೆರವೇರಿದೆ.

    ದೀಪಾವಳಿಯ ಬಲಿಪಾಡ್ಯದ ದಿನ ಪ್ರತಿವರ್ಷದಂತೆ ಈ ವರ್ಷವೂ ಈ ಪೂಜೆ ಆಯೋಜಿಸಲಾಗಿದ್ದು, ಅ.26ರಂದು ನೆರವೇರಿದೆ. ಗೋಕರ್ಣದ ಮೇಲಿನ ಕೇರಿ ನಾಗೇಶ್ ನಾರಾಯಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆದ ಈ ಕಾರ್ತಿಕ ಪೂಜೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮುದಾಯದವರಾದ ಕೆ.ದಿನಕರ ಶೆಟ್ಟಿ ಅವರೂ ಪಾಲ್ಗೊಂಡಿದ್ದರು. ಜೊತೆಗೆ ಕುಮಟಾದ ಗಾಣಿಗ ಯುವ ಬಳಗ (ರಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದರು.

    ಗೋಕರ್ಣದ ಮಹೇಶ್ ಶೆಟ್ಟಿ, ಶಿರಸಿ ಗಾಣಿಗ ಸಮಾಜ ಯುವಕ ಮಂಡಳದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕುಮಟಾ ಹಾಗೂ ಗೋಕರ್ಣ ಭಾಗದ ಗಾಣಿಗ ಸಮಾಜದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕುಮಟಾ ತಾಲೂಕಿನಿಂದ ಈ ಪೂಜಾ ಕಾರ್ಯಕ್ಕೆ ತೆರಳಲು ಕುಮಟಾ ಗಾಣಿಗ ಯುವ ಬಳಗವು ಸಮಾಜ ಬಾಂಧವರಿಗಾಗಿ ವಾಹನದ ವ್ಯವಸ್ಥೆ ಮಾಡಿತ್ತು.

    ಸಂಬಂಧಿತ ಸುದ್ದಿ: ಶೀಘ್ರದಲ್ಲೇ ಗಾಣಿಗ ನಿಗಮ-ಮಂಡಳಿಗಾಗಿ ಬೃಹತ್‌ ಹೋರಾಟ; ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

    ಸಂಬಂಧಿತ ಸುದ್ದಿ: ರಾಜ್ಯೋತ್ಸವ ಕೊಡುಗೆ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಿಲ್ಲಿ ಕಂಪ್ಯೂಟರ್‌ ಕೋರ್ಸ್‌ ಉಚಿತ

    ಸಂಬಂಧಿತ ಸುದ್ದಿ: ಥಾಣೆ ನಿತ್ಯಾನಂದ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗಾಣಿಗ ಪುನರಾಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!