Saturday, September 21, 2024
spot_img
More

    Latest Posts

    ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

    ಬೆಂಗಳೂರು: ಉಡುಪಿ ಜಿಲ್ಲೆಯ ಬಾರಕೂರಿನ ಮೂಡುಕೇರಿಯಲ್ಲಿರುವ ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿಯ ʼಪ್ರೇರಣ: ಅರಿವಿನ ದೀಪʼ ಕಾರ್ಯಕ್ರಮ ನ.6ರಂದು ನಡೆಯಿತು. ಬಾರಕೂರಿನ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದ ಶ್ರೀವೆಂಕಟೇಶ್ವರ ಸಭಾಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.

    ಪ್ರೇರಣ-2022 ಸಮಾರಂಭವನ್ನು ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್‌ ಮ್ಯಾನೇಜರ್‌ ಗೋಪಾಲ ಗಾಣಿಗ ಮಟಪಾಡಿ ಉದ್ಘಾಟಿಸಿದರು. ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್‌ ಸೊಸೈಟಿ ಅಧ್ಯಕ್ಷ ರಾಜೇಂದ್ರ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ. ನರಸಿಂಹ, ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ. ರಾವ್, ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ದಾಮೋದರ ಶೆಟ್ಟಿ, ನಿವೃತ್ತ ಜೀವವಿಮಾ ವಿಭಾಗಾಧಿಕಾರಿ ಎ. ರವಿರಾಜ್ ಕುಂಭಾಶಿ, ರಕ್ಷಣಾ ಸಂಶೋಧನಾ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣ ಎಂ.ಜಿ. ಹವರಾಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಮಾಡ್ತಾರು, ಮುಂಬೈನ ಯಶ್‌ ಒ ಟೆಕ್‌ ಇಂಜಿನಿಯರಿಂಗ್‌ ಕಂಪನಿಯ ವಿಜಯೇಂದ್ರ ಗಾಣಿಗ, ಕೋಡಿಬೆಂಗ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಸತೀಶ ಕೆಮ್ಮಣ್ಣು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಬಾರಕೂರು ಇದರ ನಿಕಟಪೂರ್ವ ಅಧ್ಯಕ್ಷ ವಾಸುದೇವ ಬೈಕಾಡಿ, ಸಂಪರ್ಕ ಸುಧಾ ಪತ್ರಿಕೆ ಅಧ್ಯಕ್ಷ ಎಸ್.ಕೆ. ಪ್ರಾಣೇಶ್, ಕಾರ್ಯದರ್ಶಿ ಕೆ. ಉದಯ ಕುಮಾರ್, ಶ್ರೀ ವೇಣುಗೋಪಾಲಕೃಷ್ಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಬಾರಕೂರು ಇದರ ಅಧ್ಯಕ್ಷ ಕೆ.ವಿಜಯ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪರಮೇಶ್ವರ ಗಾಣಿಗ, ಬಾರಕೂರು ಶ್ರೀ ಅನ್ನಪೂಣೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ ಬೈಕಾಡಿ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಬಾರಕೂರು ಇದರ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕೋಟ, ಕಾರ್ಯದರ್ಶಿ ನಾಗರಾಜ್‌ ಗಾಣಿಗ ಮಾಲ್ತಾರು ಅವರ ಗೌರವ ಉಪಸ್ಥಿತಿ ಇತ್ತು. ಸಮಾಜದ ಪ್ರತಿಭಾವಂತ 150 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ/ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದ ಆರಂಭದಲ್ಲಿ ರಾಜ್ಯೋತ್ಸವ ನೃತ್ಯ

    ಸಂಬಂಧಿತ ಸುದ್ದಿ: ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ

    ಸಂಬಂಧಿತ ಸುದ್ದಿ: ಗಾಣಿಗರ ಯಾನೆ ಸಫಲಿಗ ಸೇವಾ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ, ಅಭಿನಂದನಾ ಸಮಾರಂಭ

    ಸಂಬಂಧಿತ ಸುದ್ದಿ: ಇಲ್ಲಿ ಎಲ್ಲ ಕೋರ್ಸ್‌ಗಳಿಗೂ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. 50 ರಿಯಾಯಿತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!