Sunday, September 22, 2024
spot_img
More

    Latest Posts

    ಎಸ್‌ಜಿಇಸಿಟಿಯಿಂದ ವಿವಿಧ ಕೋರ್ಸ್ ಆರಂಭ; ಸಮುದಾಯದ ಅಭ್ಯರ್ಥಿಗಳಿಗೆ ಶೇ.25 ರಿಯಾಯಿತಿ

    ಬೆಂಗಳೂರು: ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಚಟುವಟಿಕೆಯಲ್ಲಿರುವ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ರಿ) ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗ (KVIC – Professional Training Associate)ದ ಸಹಯೋಗದಲ್ಲಿ ಎಸ್‌ಜಿಸಿಇಟಿ ಅಕಾಡೆಮಿಯಿಂದ ವಿವಿಧ ಕೋರ್ಸ್‌ ಹಮ್ಮಿಕೊಂಡಿದ್ದು, ತರಗತಿಗಳು ಏ.24ರಂದು ಆರಂಭಗೊಳ್ಳಲಿವೆ.

    ಈ ಕೋರ್ಸ್‌ಗೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕ, ಎಸ್‌ಜಿಇಸಿಟಿ ಅಕಾಡೆಮಿ ನಿರ್ದೇಶಕ ಬಿ.ಕೆ. ಬಸವರಾಜ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಒಂದು ತಿಂಗಳ ಬ್ಯೂಟಿಷಿಯನ್ ಬೇಸಿಕ್ ಕೋರ್ಸ್, ಬ್ಯೂಟಿಷಿಯನ್ ಅಡ್ವಾನ್ಸ್ ಕೋರ್ಸ್, ಕಂಪ್ಯೂಟರ್ ಬೇಸಿಕ್ ಕೋರ್ಸ್ ಹಾಗೂ 3 ತಿಂಗಳ ಹೊಲಿಗೆ ತರಬೇತಿ ಕೋರ್ಸ್‌ ನಡೆಸಲಿದ್ದು, ಎಲ್ಲ ಕೋರ್ಸ್‌ ಏ.24ರಂದು ಆರಂಭಗೊಳ್ಳಲಿವೆ.

    ಮಹಾಲಕ್ಷ್ಮೀ ಬಡಾವಣೆಯ ನಂದಿನಿ ಲೇಔಟ್‌ ಮುಖ್ಯರಸ್ತೆಯ ಗಣೇಶ ಬ್ಲಾಕ್‌ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಎಡಭಾಗದ ಕಟ್ಟಡದ ಮೂರನೇ ಮಹಡಿಯಲ್ಲಿ ಇರುವ ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಈ ಕೋರ್ಸ್‌ ನಡೆಯುತ್ತವೆ.

    ಈ ಕೋರ್ಸ್‌ನ ಬೋಧನಾ ಶುಲ್ಕದಲ್ಲಿ ಗಾಣಿಗ ಸಮುದಾಯದ ಅಭ್ಯರ್ಥಿಗಳಿಗೆ ಶೇ.25 ರಿಯಾಯಿತಿ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಆರ್ಥಿಕವಾಗಿ ಬಡ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೂ ಈ ರಿಯಾಯಿತಿ ಅನ್ವಯಿಸಲಿದೆ. ಕೋರ್ಸ್ ಮುಗಿದ ನಂತರ ಕೇಂದ್ರ ಸರ್ಕಾರದ ಕೆವಿಐಸಿ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ ಎಲ್ಲ ಕೋರ್ಸ್‌ಗಳ ಅಭ್ಯರ್ಥಿಗಳಿಗೆ ತರಬೇತಿ ಮುಗಿದ ನಂತರ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಸ್ವತಃ ಉದ್ಯೋಗ ಮಾಡಲು ಸಾಲಸೌಲಭ್ಯಗಳನ್ನು ಏರ್ಪಡಿಸಿ ಉಚಿತವಾಗಿ ಮಾರ್ಗದರ್ಶನವನ್ನೂ ನೀಡಲಾಗುವುದು. ಆಸಕ್ತರು ಇದೇ ಏ. 22ರ ಒಳಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

    ಸಿ.ಎಸ್.ಪದ್ಮಿನಿ ಪ್ರಸಾದ್:‌ 9480322851

    ನಾಗಭೂಷಣ್: 9739583550

    ಸಿದ್ದಲಿಂಗಯ್ಯ: 9164779936

    ಸುಧಾ: 8431775998

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಗಾಣಿಗ ನಿಗಮ ಸ್ಥಾಪನೆ: ಸಮುದಾಯದ ಸಂಘ-ಸಂಸ್ಥೆಗಳಿಂದ ಸಂಭ್ರಮಾಚರಣೆ, ಸಿಎಂಗೆ ಅಭಿನಂದನೆ

    ಸಂಬಂಧಿತ ಸುದ್ದಿ: ಪವರ್‌ಲಿಫ್ಟರ್‌ ಆಗಬೇಕೆನ್ನುವವರಿಗೆ ಇಲ್ಲಿದೆ ಭಾರತದ ಬಲಿಷ್ಠ ಪುರುಷನಿಂದಲೇ ತರಬೇತಿ!

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!