Saturday, September 21, 2024
spot_img
More

    Latest Posts

    ನಾಗಮಂಗಲ ಪುರಸಭೆ ಅಧ್ಯಕ್ಷ ಸ್ಥಾನದ ತೀವ್ರ ಹಣಾಹಣಿಯಲ್ಲಿ ಆಶಾಗೆ ವಿಜಯ

    ಬೆಂಗಳೂರು: ನಾಗಮಂಗಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ತೀವ್ರ ಹಣಾಹಣಿಯಲ್ಲಿ ಆಶಾ ಅವರಿಗೆ ವಿಜಯ ಒಲಿದಿದೆ. ಭಾರಿ ಸ್ಪರ್ಧೆಯೊಂದಿಗೆ ನಡೆದ ಚುನಾವಣೆಯಲ್ಲಿ ಗಾಣಿಗ ಸಮುದಾಯದ ಎನ್.ಜಿ. ಆಶಾ ವಿಜಯಕುಮಾರ್ ಗೆಲುವು ಸಾಧಿಸಿದ್ದಾರೆ.

    ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ನಾಗಮಂಗಲ ಪುರಸಭೆಯಲ್ಲಿ 23 ಸದಸ್ಯ ಬಲವಿತ್ತು. ಬಳಿಕ ಸಂಸದೆ ಹಾಗೂ ಕ್ಷೇತ್ರದ ಶಾಸಕರ ಮತವೂ ಸೇರಿ ಈ ಸಲ 25 ಮತಗಳ ಪರಿಗಣನೆ ಆಗಿತ್ತು. ನ. 5ರಂದು ನಡೆದ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಮತ ಚಲಾಯಿಸಲು ಆಗಮಿಸಿ ‘ಕೈ’ಗೆ ಶಕ್ತಿ ತುಂಬುವ ಪ್ರಯತ್ನ ನಡೆಸಿದರೂ ಜಾತ್ಯತೀತ ಜನತಾ ದಳದ ಎನ್.ಜಿ. ಆಶಾ ವಿಜಯಕುಮಾರ್ ಗೆಲುವಿನ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ತೀವ್ರ ಪೈಪೋಟಿಯ ಚುನಾವಣೆಯಲ್ಲಿ 13ನೇ ವಾರ್ಡ್ ಸದಸ್ಯೆ ಆಶಾ 13 ಮತಗಳಿಂದ ಅಧ್ಯಕ್ಷರಾದರೆ, ಅವರದೇ ಪಕ್ಷದ ಜಾಫರ್ ಶರೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಒಂದೇ ಮತದ ಅಂತರದಿಂದ ಸೋತಿದ್ದು, ಉಭಯ ಪಕ್ಷಗಳ ನಾಯಕರು-ಕಾರ್ಯಕರ್ತರಿಗೆ ಈ ಚುನಾವಣೆ ರೋಚಕವಾಗಿತ್ತು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!