Saturday, September 21, 2024
spot_img
More

    Latest Posts

    ಬಿಹಾರ ವಿಧಾನಸಭಾ ಚುನಾವಣೆ; ಗೆಲುವಲ್ಲಿ ಇವರೇ ‘ಸಾಹು’ಕಾರರು…

    ಬೆಂಗಳೂರು: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಗೆಲುವಿನಲ್ಲಿ 23 ಸಾಹುಕಾರರಿದ್ದಾರೆ. ಅಂದರೆ ಅಲ್ಲಿ ನಡೆದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸಾಹು (ಗಾಣಿಗ) ಸಮುದಾಯದ 23 ಮಂದಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಗೆಲುವಿನ ಸುಮಾರು ಶೇ.10ರ ಪಾಲು ಇವರದ್ದಾಗಿದ್ದು, ಗೆಲುವಿನ ‘ಸಾಹು’ಕಾರರು ಎನಿಸಿಕೊಂಡಿದ್ದಾರೆ.

    ಬಿಹಾರದಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ ಎನ್‌ಡಿಎ 125, ಮಹಾಘಟಬಂಧನ 110 ಹಾಗೂ ಇತರ ಸಣ್ಣ ಪಕ್ಷಗಳು 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಆದರೆ 243ರ ಪೈಕಿ 23ರಲ್ಲಿ ಸಾಹು ಗಾಣಿಗರೇ ಗೆಲುವು ದಕ್ಕಿಸಿಕೊಂಡಿದ್ದಾರೆ. ಅದರಲ್ಲೂ ಈ 23 ಮಂದಿಯಲ್ಲಿ ಬಿಜೆಪಿ, ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಹಾಗೂ ಸಿಪಿಐಎಂಲ್ ಪಕ್ಷಗಳಲ್ಲೂ ವಿಜಯ ಸಾಧಿಸಿರುವ ಸಾಹುಗಳಿರುವುದು ವಿಶೇಷ. ಇವರಲ್ಲಿ ಬಹಳಷ್ಟು ಮಂದಿ ಚಲಾವಣೆಯಾದ ಮತಗಳ ಪೈಕಿ ಹೆಚ್ಚೂಕಡಿಮೆ ಶೇ. 50 ಮತಗಳನ್ನು ತಮ್ಮದಾಗಿಸಿಕೊಂಡಿರುವುದು ಬಿಹಾರ ರಾಜಕೀಯದಲ್ಲಿ ಗಾಣಿಗರ ಪ್ರಾಬಲ್ಯವನ್ನು ಸೂಚಿಸುತ್ತಿದೆ. ಗೆದ್ದಿರುವ ಸಾಹು (ಗಾಣಿಗ) ಸಮಾಜದ ಎಲ್ಲ ಅಭ್ಯರ್ಥಿಗಳಿಗೆ ಗ್ಲೋಬಲ್ ಗಾಣಿಗದ ಅಭಿನಂದನೆಗಳು.

    ವಿಜೇತರ ವಿವರ ಇಂತಿವೆ

    1. ರಾಮ್ ನಾರಾಯಣ್ ಮಂಡಲ್, ಬಂಕಾ ವಿಧಾನಸಭಾ ಕ್ಷೇತ್ರ, ಬಿಜೆಪಿ (ವಿಜಯದ ಅಂತರ-16828, ಪಡೆದ ಮತ 69762-ಶೇ 43.8)

    2. ನಾರಾಯಣ್ ಪ್ರಸಾದ್, ನೌಟಾನ್-ಬಿಜೆಪಿ (25896, 78657-ಶೇ. 46.97)

    3. ಮಿಥಿಲೇಶ್ ಕುಮಾರ್, ಸೀತಾಮರ್ಹಿ-ಬಿಜೆಪಿ (11475, 90236-ಶೇ. 49.9 )

    4. ಡಾ.ಸಿ.ಎನ್.ಗುಪ್ತ, ಚಪ್ರ-ಬಿಜೆಪಿ (6771, 75710-ಶೇ. 44.97)

    5. ಸಂಜೀವ್ ಚೌರಾಸಿಯಾ, ಧಿಗಾ-ಬಿಜೆಪಿ (46073, 97044- ಶೇ. 57.09)

    6. ಪ್ರಮೋದ್ ಕುಮಾರ್, ಮೋತಿಹಾರಿ-ಬಿಜೆಪಿ (14645, 92733-ಶೇ. 49.44)

    7. ಲಾಲ್ ಬಾಬುಪ್ರಸಾದ್ ಗುಪ್ತ, ಚಿರೈಯಾ-ಬಿಜೆಪಿ (16874, 62904- ಶೇ. 37.02)

    8. ಪವನ್ ಕುಮಾರ್ ಜೈಸ್ವಾಲ್, ಧಾಕಾ-ಬಿಜೆಪಿ (10114, 99782-ಶೇ. 48.01)

    9. ಮೋತಿಲಾಲ್ ಪ್ರಸಾದ್, ರಿಗಾ-ಬಿಜೆಪಿ (32495, 95226-ಶೇ. 53.07)

    10. ವಿದ್ಯಾಸಾಗರ್ ಕೇಶ್ರಿ, ಫೋರ್ಬೆಸ್ಗಂಜ್-ಬಿಜೆಪಿ (19702, 102212-ಶೇ. 49.53)

    11. ವಿಜಯ್ ಕುಮಾರ್ ಖೇಮ್ಕ, ಪುರ್ನಿಯಾ-ಬಿಜೆಪಿ (32154, 97757- ಶೇ. 52.78)

    12. ಸಂಜಯ್ ಸರೋಗಿ, ದರ್ಬಾಂಗ-ಬಿಜೆಪಿ (10639, 84144-ಶೇ.49.32)

    13. ರಾಮಚಂದ್ರ ಪ್ರಸಾದ್, ಹಯಾಘಾಟ್-ಬಿಜೆಪಿ (10252, 67030-ಶೇ.46.86)

    14. ತಾರಕಿಶೋರ್ ಪ್ರಸಾದ್, ಕಟಿಹರ್-ಬಿಜೆಪಿ (10519, 82669-ಶೇ.48.47)

    15. ಗುಂಜೇಶ್ವರ್ ಷಾ, ಮಹಿಷಿ-ಜೆಡಿಯು (1630, 66316-ಶೇ.37.83)

    16. ರಣ್ವಿಜಯ್ ಸಾಹು, ಮೊರ್ವಾ-ಆರ್‌ಜೆಡಿ (10671, 59554-ಶೇ.37.06)

    17. ರಾಜೇಶ್ ಕುಮಾರ್ ಗುಪ್ತ, ಸಸಾರಂ-ಆರ್‌ಜೆಡಿ (26423, 83303-ಶೇ.46.54)

    18. ಮಂಜು ಅಗರ್ವಾಲ್, ಶೇರ್ಘಟಿ-ಆರ್‌ಜೆಡಿ (16690, 61804- ಶೇ.35.74)

    19. ಸಂಜಯ್ ಕುಮಾರ್ ಗುಪ್ತ, ಬೆಲ್ಸಂಡ್-ಆರ್‌ಜೆಡಿ (13685, 49682-ಶೇ.35.71)

    20. ಸಮೀರ್ ಕುಮಾರ್ ಮಹಾಸೇಟ್, ಮಧುಬನಿ-ಆರ್‌ಜೆಡಿ (6814, 71332-ಶೇ. 38)

    21. ಬಿಜೇಂದ್ರ ಚೌಧರಿ, ಮುಜಾಫರ್ ಪುರ-ಕಾಂಗ್ರೆಸ್ (6326, 81871-ಶೇ.48.16)

    22. ಸುಧಾಮ ಪ್ರಸಾದ್, ತರಾರಿ-ಸಿಪಿಐಎಂಎಲ್ (11015, 73945-ಶೇ.43.53)

    23. ಬೀರೇಂದ್ರ ಪ್ರಸಾದ್ ಗುಪ್ತ, ಸಿಕ್ತ-ಸಿಪಿಐಎಂಎಲ್ (2302, 49075-ಶೇ.28.85)

    ಸಂಜೀವ್ ಚೌರಾಸಿಯಾ, ಧಿಗಾ-ಬಿಜೆಪಿ
    ಡಾ.ಸಿ.ಎನ್.ಗುಪ್ತ, ಚಪ್ರ-ಬಿಜೆಪಿ
    ನಾರಾಯಣ್ ಪ್ರಸಾದ್, ನೌಟಾನ್-ಬಿಜೆಪಿ
    ಮೋತಿಲಾಲ್ ಪ್ರಸಾದ್, ರಿಗಾ-ಬಿಜೆಪಿ
    ಲಾಲ್ ಬಾಬುಪ್ರಸಾದ್ ಗುಪ್ತ, ಚಿರೈಯಾ-ಬಿಜೆಪಿ
    ರಾಮ್ ನಾರಾಯಣ್ ಮಂಡಲ್, ಬಂಕಾ- ಬಿಜೆಪಿ
    ರಣ್ವಿಜಯ್ ಸಾಹು, ಮೊರ್ವಾ-ಆರ್‌ಜೆಡಿ
    ಸಂಜಯ್ ಕುಮಾರ್ ಗುಪ್ತ, ಬೆಲ್ಸಂಡ್-ಆರ್‌ಜೆಡಿ
    ವಿಜಯ್ ಕುಮಾರ್ ಖೇಮ್ಕ, ಪುರ್ನಿಯಾ-ಬಿಜೆಪಿ
    ತಾರಕಿಶೋರ್ ಪ್ರಸಾದ್, ಕಟಿಹರ್-ಬಿಜೆಪಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!