Saturday, September 21, 2024
spot_img
More

    Latest Posts

    ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

    ಬೆಂಗಳೂರು: ಸಮಾಜದಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಅವರನ್ನು ಗುರುತಿಸಿ ಆಹ್ವಾನಿಸಿ ಸನ್ಮಾನಿಸಿ ಅಭಿನಂದಿಸುವುದು ವಿಶೇಷ ಕಾರ್ಯ. ಅಂಥದ್ದೊಂದು ಕೆಲಸವನ್ನು ಬೆಂಗಳೂರಿನ ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಇತ್ತೀಚೆಗೆ ಜೊತೆಯಾಗಿ ಮಾಡಿವೆ.

    2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಗಾಣಿಗ ಸಮಾಜದ ವಿದ್ಯಾರ್ಥಿಗಳನ್ನು ಈ ಎರಡು ಟ್ರಸ್ಟ್‌ಗಳು ಜಂಟಿಯಾಗಿ ಸನ್ಮಾನಿಸಿವೆ.

    ಡಿ.13ರಂದು ಜ್ಯೋತಿ ಎಜುಕೇಷನಲ್ ಟ್ರಸ್ಟ್ ಸಭಾಂಗಣದಲ್ಲಿ ಈ ಪ್ರತಿಭಾ ಪುರಸ್ಕಾರ ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಂ.ನಾರಾಯಣಪ್ಪ, ಶೆಟ್ಟಿಹಳ್ಳಿ ಪಾಪಣ್ಣ, ಕುರುಟಹಳ್ಳಿ ರಾಧಾಕೃಷ್ಣ, ಎಸ್.ಕೆ.ವೆಂಕಟ್‌ರಾಮ್, ಶೆಟ್ಟಿಹಳ್ಳಿ ರಾಮಚಂದ್ರಪ್ಪ, ಆಂಜನಪ್ಪ, ನಾಗನಾಳ ವೀರಭದ್ರಪ್ಪ, ಬಾಗೇಪಲ್ಲಿ ರಾಮಕೃಷ್ಣಪ್ಪ, ನಾಗನಾಳ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!