Saturday, September 21, 2024
spot_img
More

    Latest Posts

    ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯಂದು 16 ಗಂಟೆಗಳ ನಿರಂತರ ಭಜನೆ

    ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರು ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದಿನವಾದ ಡಿ. 25ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ನಡೆಯಲಿರುವ ನಿರಂತರ 16 ಗಂಟೆಗಳ ಭಜನಾ ಸೇವೆ ವೈಕುಂಠ ಏಕಾದಶಿಯ ಪ್ರಮುಖ ವಿಶೇಷ ಧಾರ್ಮಿಕ ಸೇವೆ ಆಗಿರಲಿದೆ.

    ಕುಲಬಾಂಧವರು ಮಾತ್ರವಲ್ಲದೆ ಸುತ್ತಮುತ್ತಲ ಹತ್ತಕ್ಕೂ ಅಧಿಕ ಭಜನಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ. ವೈಕುಂಠ ಏಕಾದಶಿಯಂದು ಬೆಳಗ್ಗೆ 8ಕ್ಕೆ ಆರಂಭವಾಗುವ ಈ ಭಜನಾ ಸೇವೆ ಮಧ್ಯರಾತ್ರಿ 12ರವರೆಗೂ ನಡೆಯಲಿದೆ. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಜನಾ ಸೇವೆಯು ಬೆಳಗ್ಗೆ 8:00ಕ್ಕೆ ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ ಬಳಿಕ ಸಮಾಜ ಬಾಂಧವರು ಭಜನಾ ಕುಣಿತ ಮೂಲಕ ಈ ಸುದೀರ್ಘ ಸೇವೆಗೆ ಚಾಲನೆ ನೀಡಲಿದ್ದಾರೆ.

    ಭಜನಾ ಸೇವೆಯಲ್ಲಿ ಪಾಲ್ಗೊಳ್ಳುವ ತಂಡ ಹಾಗೂ ಅವಧಿಯ ವಿವರ

    • ಬೆಳಗ್ಗೆ 8:30ರಿಂದ 9:30: ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗ ಧರ್ಮಶಾಲೆ ಬಾರ್ಕೂರು.
    • 9:30ರಿಂದ 10:30: ಸೋಮಲಿಂಗೇಶ್ವರ ಭಜನಾ ಮಂಡಳಿ ಮೂಡುಕೇರಿ ಬಾರ್ಕೂರು.
    • 10:30ರಿಂದ 12:00: ಶ್ರೀ ರಾಮಚಂದ್ರ ಭಜನಾ ಮಂಡಳಿ ಸಾಲಿಗ್ರಾಮ.
    • 12:00ರಿಂದ 1:30: ಸಂಕೀರ್ತನ ಭಜನಾ ಮಂಡಳಿ ರಾಜೀವನಗರ ಮಣಿಪಾಲ.
    • 1:30ರಿಂದ 3:00: ವಿಷ್ಣು ಭಜನ್ಸ್ ಬ್ರಹ್ಮಾವರ.
    • 3:00ರಿಂದ 4:30: ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಬಾರ್ಕೂರು.
    • 4:30ರಿಂದ 6:00: ವೇಣುಗೋಪಾಲಕೃಷ್ಣ ಯುವಕ ಸಂಘ ಬಾರ್ಕೂರು.
    • 6:00ರಿಂದ 7:30: ಸೋಮಲಿಂಗೇಶ್ವರ ಭಜನಾ ಮಂಡಳಿ ಹಾಲಂಬೇರು.
    • 7:30ರಿಂದ 9:00: ಶ್ರೀ ರಾಮಾಮೃತ ಭಜನಾ ಮಂಡಳಿ, ಪಡುಕೆರೆ ಕೋಟ.
    • 9:00ರಿಂದ 10:30: ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಂಗ್ರಪಳ್ಳಿ.
    • 10:30ರಿಂದ 12:00: ಸಮಾಜ ಬಾಂಧವರು ಬಾರ್ಕೂರು.

       

    ಫಲಾಹಾರ ಸೇವಾಕರ್ತರು: ಕುಲದೇವರ ಸನ್ನಿಧಾನದಲ್ಲಿ ಜರುಗುವ ಈ ಭಜನಾ ಕಾರ್ಯಕ್ರಮಕ್ಕೆ ಫಲಹಾರದ ವೆಚ್ಚವನ್ನು ಬೆಂಗಳೂರಿನ ಪ್ರತಿಷ್ಠಿತ ವೈಭವ್ ಹೋಟೆಲ್‌ ಮಾಲೀಕರು ಹಾಗೂ ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಇದರ ಗೌರವಾಧ್ಯಕ್ಷರೂ ಆಗಿರುವ ಬಿ.ಎಸ್. ಮಂಜುನಾಥ್ ಮತ್ತು ಪ್ರೇಮಾ ಮಂಜುನಾಥ್ ದಂಪತಿ ಭರಿಸಿದ್ದಾರೆ.

    ಪುಷ್ಪಾಲಂಕಾರ ಸೇವಾಕರ್ತರು: ಅಂದು ಕುಲದೇವರಿಗೆ ವಿಶೇಷವಾದ ಪುಷ್ಪಾಲಂಕಾರ ಸೇವೆ ನೆರವೇರಲಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಬೆಂಗಳೂರಿನ ಉದ್ಯಮಿ ಪ್ರಶಾಂತ್ ವೆಂಕಟರಮಣ ಮತ್ತು ಜ್ಯೋತಿ ಪ್ರಶಾಂತ್ ದಂಪತಿ ನೀಡಿದ್ದಾರೆ.

    ತಿರುಪತಿ ಲಡ್ಡು ಸೇವಾಕರ್ತರು: ಅಲ್ಲದೆ ಅಂದು ಭಕ್ತರಿಗೆ ತಿರುಪತಿ ಲಡ್ಡು ಪ್ರಸಾದ ವಿತರಣೆ ಇರಲಿದ್ದು, ಈ ಸೇವೆಯ ವೆಚ್ಚವನ್ನು ಉಡುಪಿ ಸೋಮಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಕೆ.ಗೋಪಾಲ್ ಅವರ ಪುತ್ರ ಉದ್ಯಮಿ ಉಡುಪಿಯ ಕೆ. ವಿಜಯ್ ಮತ್ತು ರೇಖಾ ವಿಜಯ್ ದಂಪತಿ ವಹಿಸಿಕೊಂಡಿದ್ದಾರೆ.

    ವಿಶೇಷವಾಗಿ ಈ 16 ಗಂಟೆಗಳ ನಿರಂತರ ಭಜನಾ ಸೇವೆಯಲ್ಲಿ ಭಾಗವಹಿಸುವ ಭಜನಾ ತಂಡಗಳಿಗೆ ನೀಡುವ ಭಜನಾ ಕಾಣಿಕೆಯ ವೆಚ್ಚವನ್ನು ಈ ಕೆಳಗಿನವರು ಭರಿಸಿದ್ದಾರೆ.

    ಭಜನಾ ಸೇವಾಕಾಣಿಕೆ ನೀಡಿದವರು

    • ಶ್ರೀಮತಿ ವಸಂತಿ ಮತ್ತು ಶ್ರೀ ಕೆ.ಗೋಪಾಲ್ ಕಿನ್ನಿಮೂಲ್ಕಿ.
    • ಶ್ರೀಮತಿ ವಸಂತಿ ಮತ್ತು ಶ್ರೀಎಂ. ಗೋಪಾಲಕೃಷ್ಣ ಬೆಂಗಳೂರು.
    • ಶ್ರೀ ವೇಣುಗೋಪಾಲಕೃಷ್ಣ ಸೊಸೈಟಿ ಬಾರ್ಕೂರು
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು. ಉದ್ಯಾವರ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಡುಪಿ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ತೆಂಕನಿಡಿಯೂರು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬ್ರಹ್ಮಾವರ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬಾರ್ಕೂರು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೋಟ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೆಮ್ಮಣ್ಣು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಬಾರ್ಕೂರು.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ವೇಣುಗೋಪಾಲಕೃಷ್ಣ ಯುವಕ ಸಂಘ ಬಾರ್ಕೂರು.

      ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ದೀಪ-ಸಂಭ್ರಮ 

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!